ಕ್ರಿಕೆಟ್

ಅಪ್ಪ ಧೋನಿಗಾಗಿ ಮೇಕಪ್ ಕಲಾವಿದೆಯಾಗಿ ಬದಲಾದ ಪುಟಾಣಿ ಝಿವಾ!

Raghavendra Adiga

ನವದೆಹಲಿ: ಕೊರೋನಾವೈರಸ್  ಸಾಂಕ್ರಾಮಿಕ ರೋಗದಿಂದಾಗಿ ಎಂಎಸ್ ಧೋನಿ ವೃತ್ತಿಪರ ಕ್ರಿಕೆಟ್‌ಗೆ ಮರಳುವುದನ್ನು ಕಾಣಲು ಅವರ ಅಭಿಮಾನಿಗಳಿಗೆ ಸಾಧ್ಯವಾಗಿಲ್ಲ.  ಅದೇ ರೀತಿ ಧೋನಿಯ  ಮೇಕಪ್ ಕಲಾವಿದೆ ಸಪ್ನಾ ಭಾವನಾನಿ ಸಹ ಅವರ ಭಿಮಾನಿಗಳಂತೆಯೇ ಟೀಂ ಇಂಡಿಯಾ ಮಾಜಿ ನಾಯಕನ ಪುನರಾಗಮನಕ್ಕಾಗಿ ಕಾಯುತ್ತಿದ್ದಾರೆ.

ಇದೇ ವೇಳೆ ಸಪ್ನಾ ಧೋನಿ ಪುತ್ರಿ ಝಿವಾ ತನ್ನ ತಂದೆಗೆ ಕೆಲ ಮೇಕಪ್ ಮಾಡಲು ಸಹಾಯ ಮಾಡುತ್ತಿರುವ ಹಳೆಯ ವೀಡಿಯೋ ಒಂದನ್ನು ಅವರು ತಮ್ಮ ಟ್ವಿಟ್ತರ್ ನಲ್ಲಿ ಹಂಚಿಕೊಂಡಿದ್ದಾರೆ.

"ನಾನು ಶೀಘ್ರವೇ ಕೆಲಸ ಕಳೆದುಕೊಳ್ಲಲಿದ್ದೇನೆ ಎಂದು ಭಾವಿಸುತ್ತೇನೆ! ಮಿಸ್ ಯು ದೋಸ್ತ್!" ಎಂಬ ಬರಹದೊಡನೆ ಅವರು ವೀಡಿಯೋ ಹಂಚಿಕೊಂಡಿದ್ದಾರೆ.

SCROLL FOR NEXT