ಕ್ರಿಕೆಟ್

ನಾಳಿನ ಆಡಳಿತಾತ್ಮಕ ಸಮಿತಿ ಸಭೆಯ ನಂತರ ಐಪಿಎಲ್ 2020 ಮಾರ್ಗಸೂಚಿ ಬಿಡುಗಡೆ ಸಾಧ್ಯತೆ

Nagaraja AB

ಚೆನ್ನೈ: ನಾಳೆ ಮಹತ್ವದ ಐಪಿಎಲ್ ಆಡಳಿತಾತ್ಮಕ ಸಮಿತಿ ಸಭೆ ನಡೆಯಲಿದೆ. ಅಧಿಕೃತ ಸ್ಪಷ್ಟನೆ ನಂತರ ಯುಎಇಗೆ
ಪ್ರವಾಸ ಪ್ರಕ್ರಿಯೆಯನ್ನು ಆರಂಭಿಸಲು ಫ್ರಾಂಚೈಸಿಗಳು ಈ ಸಭೆಯನ್ನು ಎದುರು ನೋಡುತ್ತಿದ್ದಾರೆ.

ಪ್ರಸ್ತುತ ಕೋವಿಡ್-19 ಶಿಷ್ಟಾಚಾರದಿಂದಾಗಿ ತರಬೇತಿ ನೀಡಬೇಕಾ ಅಥವಾ ಇಲ್ಲವೇ ಮತ್ತು ಶರ್ಜಾ, ದುಬೈ ಮತ್ತು 
ಅಬು ದಾಬಿ ನಡುವೆ ಅಂತರ ನಗರ ಪ್ರಯಾಣ ಮತ್ತಿತರ ವ್ಯವಸ್ಥೆಗಳ ಬಗ್ಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ.

ಆನ್ ಲೈನ್ ನಲ್ಲಿ ಸಭೆ ನಡೆಯಲಿದ್ದು, ಬ್ರಿಜೆೇಶ್ ಪಾಟೀಲ್ ನೇತೃತ್ವದಲ್ಲಿ ಆಡಳಿತಾತ್ಮಕ ಸಮಿತಿಯ ಏಳು ಸದಸ್ಯರು ಪಾಲ್ಗೊಳ್ಳಲಿದ್ದಾರೆ.ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿಶೇಷ ಅತಿಥಿಯಾಗಿ ಭಾಗವಹಿಸುವ  ನಿರೀಕ್ಷೆಯಿದೆ. ಫ್ರಾಂಚೈಸಿಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಿಲ್ಲ. ಎಲ್ಲವೂ ಯೋಜನೆಯಂತೆ ನಡೆದರೆ  ಮುಂದಿನ ವಾರದಿಂದ ಸಿದ್ಧತೆಯನ್ನು ಆರಂಭಿಸುವ ಭರವಸೆ ತಂಡಗಳದ್ದಾಗಿದೆ.

ಪ್ರಯಾಣ ಮತ್ತು ವಾಸ್ತವ್ಯ ವ್ಯವಸ್ಥೆ, ಮಾರ್ಗಸೂಚಿಗಳ ಬಗ್ಗೆ ಯುಎಇನಲ್ಲಿ ಚರ್ಚೆ ನಡೆಸಲಾಗುವುದು, ಸುರಕ್ಷತೆ ವಿಚಾರಕ್ಕೆ ಆದ್ಯತೆ ನೀಡಲಾಗುವುದು, ಐಪಿಎಲ್ ಹಾಗೂ ಪಾಲ್ಗೊಳ್ಳಬೇಕಾದವರೆಗೆ ಏನೆಲ್ಲಾ ಅಗತ್ಯವಿದೆಯೋ  ಅದೆಲ್ಲವನ್ನೂ ಕೈಗೊಳ್ಳಲಾಗುವುದು ಎಂದು ಆಡಳಿತಾತ್ಮಕ ಸಮಿತಿಯ ಸದಸ್ಯರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಭಾನುವಾರ ಅಥವಾ ಸೋಮವಾರ ಮಾರ್ಗಸೂಚಿಯನ್ನು ಆಡಳಿತಾತ್ಮಕ ಸಮಿತಿ ಸಭೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಸಂಬಂಧ ಯಾವುದೇ ರೀತಿಯ ಮಾಹಿತಿ ಬಂದಿದೆ. ಪ್ರಯಾಣ, ತರಬೇತಿ, ವಾಸ್ತವ್ಯ ಮತ್ತು ಸ್ಥಳೀಯ ಪ್ರಯಾಣದ ಮತ್ತಿತರ ಎಲ್ಲಾ ಅಂಶಗಳನ್ನು ಮಾರ್ಗಸೂಚಿ ಒಳಗೊಳ್ಳಲಿದೆ ಎಂದು ಫ್ರಾಂಚೈಸಿಯೊಂದರ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT