ಕ್ರಿಕೆಟ್

ಬಿಸಿಸಿಐಗೆ ಶಾಕ್ ಕೊಟ್ಟ ಚೀನಾ ಕಂಪನಿ: ಐಪಿಎಲ್ ಪ್ರಾಯೋಜಕತ್ವದಿಂದ ವಿವೋ ಹೊರಕ್ಕೆ!

Vishwanath S

ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಚೀನಾ ಸಂಘರ್ಷದ ಬಳಿಕ ಭಾರತದಲ್ಲಿ ಚೀನಾ ಆ್ಯಪ್ ಹಾಗೂ ಸರಕುಗಳನ್ನು ಬ್ಯಾನ್ ಮಾಡಲಾಗಿತ್ತು. ಇದೇ ವೇಳೆ ಐಪಿಎಲ್ ವಿವೋ ಪ್ರಾಯೋಜಕತ್ವವನ್ನು ರದ್ದು ಮಾಡುವಂತೆ ಕೂಗು ಜಾರಾಗಿತ್ತು. ಆದರೆ ಇದೀಗ ಚೀನಾ ಕಂಪನಿ ವಿವೋ ಭಾರತಕ್ಕೆ ಶಾಕ್ ನೀಡಿದೆ. 

ಹೌದು, ಕೊರೋನಾ ಮಹಾಮಾರಿ ನಡುವೆಯೂ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವಾಗಲೇ ಅತ್ತ ಚೀನಾ ಸಂಸ್ಥೆ ವಿವೋ ಶೀರ್ಷಿಕೆ ಪ್ರಯೋಜಕತ್ವದಿಂದ ಹೊರಬಂದಿದೆ. 

ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಮಧ್ಯೆ ವಿವೋ ಬಿಸಿಸಿಐಗೆ ದೊಡ್ಡ ಶಾಕ್ ನೀಡಿದೆ. 

ಈ ವರ್ಷ ಐಪಿಎಲ್ ಪ್ರಾಯೋಜಕರಾಗಿ ಹೊರಗುಳಿಯುವುದಾಗಿ ವಿವೋ ಬಿಸಿಸಿಐಗೆ ಮಾಹಿತಿ ನೀಡಿದೆ. ಇನ್ನು ಈ ಆವೃತ್ತಿಯ 440 ಕೋಟಿ ರೂ. ಪಾವತಿಸುವ ಅಥವಾ ಬದಲಿ ಪಡೆಯುತ್ತದೆಯೇ ಎಂದು ಬಿಸಿಸಿಐ ಖಚಿತವಾಗಿಲ್ಲ.

ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತೀಯ ಯೋಧರ ಸಂಘರ್ಷದಲ್ಲಿ 20ಕ್ಕೂ ಹೆಚ್ಚು ಭಾರತೀಯ ಮೃತಪಟ್ಟಿದ್ದರು. ಈ ಘಟನೆ ಬಳಿಕ ಉಭಯ ದೇಶಗಳ ನಡುವಿನ ಭಾಂದವ್ಯ ಅಳಸಿತ್ತು. 

SCROLL FOR NEXT