ಕ್ರಿಕೆಟ್

ಟೀಂ ಇಂಡಿಯಾ ಗೆಲುವಿಗೆ ಕಾರಣವಾದ 'ಕನ್ಕ್ಯುಶನ್ ಸಬ್‍ಸ್ಟ್ಯೂಟ್' ಅಂದರೇನು?

Vishwanath S

ಕ್ಯಾನ್ ಬೆರಾ: ಆಸ್ಟ್ರೇಲಿಯಾ ವಿರುದ್ಧ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ರವೀಂದ್ರ ಜಡೇಜಾ ಮೊದಲ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಆಸರೆಯಾಗಿದ್ದರು. ಕಾರಣ 23 ಎಸೆತಗಳಲ್ಲಿ ಅಜೇಯ 44 ರನ್ ಪೇರಿಸಿದ್ದು ಪರಿಣಾಮ ಭಾರತ 7 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತ್ತು. ದುರದೃಷ್ಟವಶಾತ್ ಜಡೇಜಾ ಗಾಯಗೊಂಡಿದ್ದು ಅವರ ಬದಲಿಗೆ ಯಜುವೇಂದ್ರ ಚಾಹಲ್ ಅವರನ್ನು ಕನ್ಕ್ಯುಶನ್ ಸಬ್‍ಸ್ಟ್ಯೂಟ್ ಬದಲಾಯಿಸಬೇಕಾಯಿತು.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಇಂತಹ ನಿಯಮವೊಂದನ್ನು ಜಾರಿಗೆ ತಂದಿತ್ತು. ಆಟದ ಸಮಯದಲ್ಲಿ ಕನ್ಕ್ಯುಶನ್ ನಿಂದ ಬಳಲುತ್ತಿರುವ ಆಟಗಾರರಿಗೆ ಅಪಾಯವನ್ನು ಕಡಿಮೆ ಮಾಡುವ ಸಲುವಾಗಿ ಈ ನಿಯಮವನ್ನು ಜಾರಿಗೆ ತರಲಾಗಿತ್ತು. ಐಸಿಸಿಯ ಹಳೆ ನಿಯಮದ ಪ್ರಕಾರ ಕನ್ಕ್ಯುಶನ್ ಪ್ಲೇಯರ್ ಆಗಿ ಬಂದ ಆಟಗಾರರು ಫೀಲ್ಡಿಂಗ್ ಮಾಡಲು ಮಾತ್ರ ಅನುಮತಿ ಇತ್ತು. ಆದರೆ ಹೊಸ ನಿಯಮದಲ್ಲಿ ಕನ್ಕ್ಯುಶನ್ ಸಬ್‍ಸ್ಟ್ಯೂಟ್ ಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅನುವು ಮಾಡಿಕೊಡಿಕೊಟ್ಟಿತ್ತು.

ಐಸಿಸಿ ಪಂದ್ಯದ ರೆರ್ಫಿ ಕನ್ಕ್ಯುಶನ್ ಸಬ್‍ಸ್ಟ್ಯೂಟ್ ಅಂತಿಮ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ಯಾನ್‌ಬೆರಾ ಟಿ20 ಪಂದ್ಯದಲ್ಲಿ, ರೆರ್ಫಿ ಡೇವಿಡ್ ಬೂನ್ ಸಬ್‍ಸ್ಟ್ಯೂಟ್ ಗೆ ಗ್ರೀನ್ ಸಿಗ್ನಲ್ ನೀಡಿದರು., ಆದರೆ ಆಸ್ಟ್ರೇಲಿಯಾದ ತರಬೇತುದಾರ ಜಸ್ಟಿನ್ ಲ್ಯಾಂಗರ್ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದರು.

ನಾಯಕ ವಿರಾಟ್ ಕೊಹ್ಲಿ ಇಂದಿನ ಪಂದ್ಯಕ್ಕಾಗಿ ಯುಜ್ವೇಂದ್ರ ಚಾಹಲ್ ಅವರನ್ನು ಆಡುವ ಇಲೆವೆನ್‌ನಿಂದ ಹೊರಗುಳಿದಿದ್ದರು. ಆದಾಗ್ಯೂ, ಕನ್ಕ್ಯುಶನ್ ಬದಲಿ ನಿಯಮದ ಮೂಲಕ ಲೆಗ್-ಸ್ಪಿನ್ನರ್ ಬೌಲಿಂಗ್ ಮಾಡಲು ಅವಕಾಶ ಪಡೆದರು.

ಚಹಾಲ್ ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಆರೋನ್ ಫಿಂಚ್ ಮತ್ತು ಸ್ಟೀವ್ ಸ್ಮಿತ್ ಅವರ ವಿಕೆಟ್ ಪಡೆದರು. ನಂತರದ ಓವರ್ ಗಳಲ್ಲಿ ಮ್ಯಾಥ್ಯೂ ವೇಡ್ ಅವರ ವಿಕೆಟ್ ಪಡೆಯಲು ತಮ್ಮ ನಾಲ್ಕು ಓವರ್‌ಗಳಲ್ಲಿ 25 ರನ್ ಗೆ 3 ವಿಕೆಟ್ ಪಡೆದು ವಿಜೃಂಭಿಸಿದ್ದರು.

ಈ ನಿಯಮದಡಿಯಲ್ಲಿ ಬದಲಿ ಆಟಗಾರರಾದ ಪಡೆದ ಮೊದಲ ಆಟಗಾರ ಸ್ಟೀವನ್ ಸ್ಮಿತ್ ಎಂಬುದು ಗಮನಿಸಬೇಕಾದ ಸಂಗತಿ. ಕಳೆದ ವರ್ಷ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಆ್ಯಶಿಸ್ ಟೆಸ್ಟ್ ಪಂದ್ಯದ ವೇಳೆ ಮಾರ್ನಸ್ ಲ್ಯಾಬುಸ್ಚಾಗ್ ರನ್ನು ಆಡಿಸಲಾಗಿತ್ತು.

SCROLL FOR NEXT