ನಟರಾಜನ್ - ವಿರಾಟ್ ಕೊಹ್ಲಿ 
ಕ್ರಿಕೆಟ್

ಆಕ್ರಮಣಕಾರಿಯಾಗಿ ಸಂಭ್ರಮಿಸುವುದು ನನಗೆ ಗೊತ್ತಿಲ್ಲ: ಆಸ್ಟ್ರೇಲಿಯಾ ಅನುಭವ ಹಂಚಿಕೊಂಡ ವೇಗಿ ನಟರಾಜನ್‌

ಭಾರತದ ಪರ ಆಡಿದ ಮೊದಲ ಸಿಮೀತ ಓವರ್‌ಗಳ ಸರಣಿಯಲ್ಲಿ ಯಶಸ್ವಿಯಾದ ಯುವ ವೇಗಿ ಟಿ ನಟರಾಜನ್‌, ತಮ್ಮ ಪ್ರದರ್ಶನ ಹಾಗೂ ಆಸ್ಟ್ರೇಲಿಯಾ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಿಡ್ನಿ: ಭಾರತದ ಪರ ಆಡಿದ ಮೊದಲ ಸಿಮೀತ ಓವರ್‌ಗಳ ಸರಣಿಯಲ್ಲಿ ಯಶಸ್ವಿಯಾದ ಯುವ ವೇಗಿ ಟಿ ನಟರಾಜನ್‌, ತಮ್ಮ ಪ್ರದರ್ಶನ ಹಾಗೂ ಆಸ್ಟ್ರೇಲಿಯಾ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಮೂರನೇ ಓಡಿಐನಲ್ಲಿ ಮೊದಲ ಅಂತಾರಾಷ್ಟ್ರೀಯ ಓಡಿಐ ಟಿ ನಟರಾಜನ್ ಎರಡು ವಿಕೆಟ್‌ ಕಿತ್ತಿದ್ದರು ಹಾಗೂ ಮೂರು ಟಿ20 ಪಂದ್ಯಗಳಿಂದ ಆರು ವಿಕೆಟ್‌ ಕಬಳಿಸಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಭಾರತ 12 ರನ್‌ಗಳಿಂದ ಸೋಲು ಅನುಭವಿಸುವ ಮೂಲಕ ಉಭಯ ತಂಡಗಳ ನಡುವಿನ ಸೀಮಿತ ಓವರ್‌ಗಳ ಸರಣಿ ಅಂತ್ಯವಾಯಿತು. ಕೊನೆಯ ಪಂದ್ಯದಲ್ಲಿ ಟೀಮ್‌ ಇಂಡಿಯಾ ಸೋತರೂ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರಿಂದ 2-1 ಅಂತರದಲ್ಲಿ ಚುಟುಕು ಸರಣಿಯನ್ನು ವಶಪಡಿಸಿಕೊಂಡಿತು.

ಪಂದ್ಯದ ಒತ್ತಡ ಸಮಯದಲ್ಲಿ ವಿಕೆಟ್‌ಗಳನ್ನು ಕಿತ್ತಿದ್ದ ನಟರಾಜನ್‌ ಆಕ್ರಮಣಕಾರಿಯಾಗಿ ಸಂಭ್ರಮಿಸಿರಲಿಲ್ಲ. ಆದರೆ, ಅವರು ಸರಳವಾದ ತನ್ನ ನಡೆಯನ್ನು ಕಾಯ್ದುಕೊಂಡರು. ಈ ಬಗ್ಗೆ ಭಾರತದ ಮಾಜಿ ಸ್ಪಿನ್ನರ್‌ ಪ್ರಸ್ತುತ ಪಂದ್ಯ ನಿರೂಪಕ ಮುರಳಿ ಕಾರ್ತಿಕ್‌ ಕೇಳಿದ ಪ್ರಶ್ನೆಗೆ ಟಿ. ನಟರಾಜನ್‌ ಉತ್ತರಿಸಿದ್ದಾರೆ.

"ಈ ಬಗ್ಗೆ ತುಂಬಾ ಜನ ನನ್ನನ್ನು ಕೇಳಿದ್ದಾರೆ. ನಾನು ಚಿಕ್ಕ ವಯಸ್ಸಿನಿಂದಲೂ ಇದೇ ರೀತಿ ಇದ್ದೇನೆ. ಆಕ್ರಮಣಕಾರಿಯಾಗಿ ಸಂಭ್ರಮಿಸುವುದು ನನಗೆ ಗೊತ್ತಿಲ್ಲ ಹಾಗೂ ಇದನ್ನು ನಾನು ಎಂದಿಗೂ ಬಳಸಿಲ್ಲ. ವಿಕೆಟ್‌ ಪಡೆದ ಬಳಿಕ ನಾನು ಸ್ಮೈಲ್ ನೀಡುತ್ತೇನೆ ಅಷ್ಟೆ. ಅದಕ್ಕಿಂತ ಜಾಸ್ತಿ ಮಾಡಲು ನನಗೆ ಬರವುದಿಲ್ಲ," ಎಂದು ಹೇಳಿದರು.

"ಆಸ್ಟ್ರೇಲಿಯಾ ಪ್ರವಾಸ ನನಗೆ ಮೊದಲನೇಯದು. ನನಗೆ ತುಂಬಾ ಖುಷಿಯಾಗುತ್ತಿದೆ. ಬಲಿಷ್ಠ ತಂಡದ ಎದುರು ಉತ್ತಮ ಪ್ರದರ್ಶನ ನೀಡಿರುವುದಕ್ಕೆ ತುಂಬಾ ಹೆಮ್ಮೆ ಅನಿಸುತ್ತಿದೆ. ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಒಟ್ಟಾರೆ ಪ್ರದರ್ಶನದ ಬಗ್ಗೆ ತುಂಬಾ ಸಂತಸವಾಗುತ್ತಿದೆ" ಎಂದು ನಟರಾಜನ್‌ ತಿಳಿಸಿದರು. 

ಟಿ. ನಟರಾಜನ್ ಆರಂಭದಲ್ಲಿ ಭಾರತೀಯ ತಂಡದೊಂದಿಗೆ ನೆಟ್ ಬೌಲರ್ ಆಗಿ ಪ್ರಯಾಣಿಸುತ್ತಿದ್ದರು ಮತ್ತು ತಂಡವನ್ನು ಮೊದಲು ಘೋಷಿಸಿದಾಗ ಅವರು ರಾಷ್ಟ್ರೀಯ ತಂಡದಲ್ಲಿ ಮೊದಲ ಆಯ್ಕೆಯ ಬೌಲರ್ ಆಗಿರಲಿಲ್ಲ. ನಂತರ ತಂಡದಲ್ಲಿ ನಡೆದಿದ್ದ ಬೆಳವಣಿಗೆಗಳಿಂದ ಅವರಿಗೆ ಅಂತಿಮ 11ರಲ್ಲಿ ಅವಕಾಶ ನೀಡಲಾಗಿತ್ತು. ಈ ಅವಕಾಶವನ್ನು ಅವರು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು. ಆಸ್ಟ್ರೇಲಿಯಾ ವಿರುದ್ಧ ಒತ್ತಡದ ಸಂದರ್ಭದಲ್ಲಿ ಭಾರತಕ್ಕೆ ಟಿ ನಟರಾಜನ್‌ ನೆರವಾಗಿದ್ದರು. ಆ ಮೂಲಕ ವಿಶ್ವ ಕ್ರಿಕೆಟ್‌ ದಿಗ್ಗಜರ ಗಮನ ಸೆಳೆದಿದ್ದಾರೆ.

"ಈ ಸರಣಿಯಿಂದ ಈ ರೀತಿಯ ಪ್ರದರ್ಶನವನ್ನು ನಿರೀಕ್ಷಿರಲಿಲ್ಲ. ಮೊದಲು ನಾನು ನೆಟ್‌ ಬೌಲರ್‌ ಆಗಿ ಬಂದಿದ್ದೆ. ವರುಣ್‌ ಚಕ್ರವರ್ತಿ ಗಾಯದಿಂದಾಗಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡೆ. ಐಪಿಎಲ್‌ ಟೂರ್ನಿಯಲ್ಲಿದ್ದ ಲಯವನ್ನು ಇಲ್ಲಿಯೂ ಮುಂದುವರಿಸಿದ್ದೇನೆ. ತಂಡದ ಪ್ರತಿಯೊಬ್ಬರು ನನಗೆ ಪ್ರೇರಣೆ ತುಂಬಿದ್ದಾರೆ. ಇವರೆಲ್ಲಾ ಸಾಕಷ್ಟು ಬೆಂಬಲ ಹಾಗೂ ವಿಶ್ವಾಸ ತುಂಬಿದ್ದಾರೆ," ಎಂದು ಹೇಳಿದರು.

"ನನ್ನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ. ಯಾರ್ಕರ್‌ ಹಾಗೂ ಕಟರ್‌ಗಳಿಂದ ನಾನು ತಂಡಕ್ಕೆ ಉತ್ತಮವಾದದನ್ನು ಮಾಡಬಲ್ಲೆ ಎಂಬ ಬಗ್ಗೆ ವಿಶ್ವಾಸವಿದೆ. ಚರ್ಚೆಯ ವೇಳೆ ವಿಕೆಟ್‌ ಸ್ವಭಾವದ ಬಗ್ಗೆ ನಾಯಕ ಹಾಗೂ ವಿಕೆಟ್‌ ಕೀಪರ್‌ ಬಳಿ ಮಾತನಾಡುತ್ತೇನೆ. ಇದರ ಅನ್ವಯ ಬೌಲಿಂಗ್‌ ಅನ್ನು ಹೊಂದಾಣಿಕೆ ಮಾಡುತ್ತೇನೆ. ಡೆತ್‌ ಓವರ್‌ಗಳಲ್ಲಿ ಯಾರ್ಕರ್‌ ಮತ್ತು ಕಟರ್‌ ಎಸೆತಗಳಲ್ಲಿ ನನಗೆ ತುಂಬಾ ನಂಬಿಕೆ ಇದೆ. ಐಪಿಎಲ್‌ನಲ್ಲಿ ನನಗೆ ವರ್ಕ್‌ಔಟ್‌ ಆಗಿದ್ದ ಎಲ್ಲಾ ಪ್ರಯೋಗವನ್ನು ಇಲ್ಲಿ ಮಾಡಿದ್ದೇನೆ. ನನ್ನ ಕೌಶಲವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದ್ದೇನೆ," ಎಂದು ನಟರಾಜನ್‌ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಮ್ಮನ್ನು ಕರೆಯುತ್ತದೆ: ಡಿಕೆಶಿ

ಒಳನುಸುಳುವವರನ್ನು ಹೊರಗಿಡಲು SIR; ಆದ್ರೆ ದಶಕಗಳಿಂದ ಕಾಂಗ್ರೆಸ್ ಅವರನ್ನು ರಕ್ಷಿಸಿತ್ತು: ಪ್ರಧಾನಿ ಮೋದಿ

BMC election: ಕಾಂಗ್ರೆಸ್ ಏಕಾಂಗಿ ಸ್ಪರ್ಧೆ; ಉದ್ಧವ್ ಠಾಕ್ರೆ, ಶರದ್ ಪವಾರ್ ಜತೆ ಮೈತ್ರಿ ಇಲ್ಲ

ಬುರುಡೆ ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಚಿನ್ನಯ್ಯ: ಜೀವ ಬೆದರಿಕೆ ಆರೋಪ ಮಾಡಿ ಐವರ ವಿರುದ್ಧ ಪೊಲೀಸರಿಗೆ ದೂರು!

'ಜಗತ್ತಿನಲ್ಲಿ ಅಧಿಕಾರದ ಅರ್ಥ ಈಗ ಬದಲಾಗಿದೆ...'; ಅಮೆರಿಕ-ಚೀನಾ ಜೊತೆ ಸಂಬಂಧ ವೃದ್ಧಿ ಮತ್ತಷ್ಟು ಜಟಿಲ: ಜೈಶಂಕರ್

SCROLL FOR NEXT