ಕ್ರಿಕೆಟ್

ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೆ ಜಿಗಿದ ಕೊಹ್ಲಿ; ಟಾಪ್ 10ರಲ್ಲಿ ಪೂಜಾರಾ, ರಹಾನೆಗೆ ಸ್ಥಾನ

Nagaraja AB

ದುಬೈ: ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿ ಪ್ರಕಟವಾಗಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅತ್ಯುತ್ತಮ 10 ಮಂದಿ ಆಟಗಾರರಲ್ಲಿ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಕ್ರಮವಾಗಿ ಏಳು ಮತ್ತು 10ನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ 886 ರೆಟಿಂಗ್ ಪಾಯಿಂಟ್ ಗಳೊಂದಿಗೆ ಭಾರತದ ಮುಂಚೂಣಿ ಬ್ಯಾಟ್ಸ್ ಮನ್ ಆಗಿದ್ದು, ಆಸ್ಟ್ರೇಲಿಯಾದ ಸ್ವೀವ್ ಸ್ಮೀತಾಗಿಂತ (911 ಪಾಯಿಂಟ್ ) ಹಿಂದಿದ್ದಾರೆ. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಸ್ಛಾನದಲ್ಲಿದ್ದಾರೆ.

ಚೇತೇಶ್ವರ ಪೂಜಾರ 766 ಪಾಯಿಂಟ್ ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ, ಬೆನ್ ಸ್ಟೊಕ್ಸ್  (760)  ಜೋ ರೂಟ್ (738) ಮತ್ತು ಟೀಂ ಇಂಡಿಯಾ ನಾಯಕ ರಹಾನೆ  726 ಪಾಯಿಂಟ್ ಗಳೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಟೆಸ್ಟ್  ಬೌಲರ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ  ವೇಗಿಗಳಾದ ಜಸ್ಪ್ರೀತ್ ಬೂಮ್ರಾ ( 779) ಮತ್ತು ಆರ್ . ಅಶ್ವಿನ್  (756 ) ಪಾಯಿಂಟ್ ಗಳೊಂದಿಗೆ ಕ್ರಮವಾಗಿ 8 ಮತ್ತು 10ನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಟೆಸ್ಟ್ ಆಲ್ ರೌಂಡರ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ  ರವೀಂದ್ರ ಜಡೇಜಾ ಮತ್ತು ಅಶ್ವಿನ್ ಕ್ರಮವಾಗಿ ಮೂರು ಮತ್ತು ಆರನೇ  ಸ್ಥಾನದಲ್ಲಿದ್ದಾರೆ. 

ಐಸಿಸಿ ಟೆಸ್ಟ್  ತಂಡಗಳ ರ‍್ಯಾಂಕಿಂಗ್‌ ಪಟ್ಟಿಯನ್ನು ಕೂಡಾ ಪ್ರಕಟಿಸಲಾಗಿದ್ದು, ವೆಸ್ಟ್ ಇಂಡೀಸ್ ವಿರುದ್ಧ 2-0 ಅಂತರದಲ್ಲಿ ಸರಣಿ ಗೆದ್ದು ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕೇರಿದ್ದು, ಭಾರತ ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಅಗ್ರ ಸ್ಥಾನದಲ್ಲಿದೆ.
 

SCROLL FOR NEXT