ಕ್ರಿಕೆಟ್

'ಗೆಲುವನ್ನು ಹೇಗೆ ಸಂಭ್ರಮಿಸಬೇಕು ಎಂಬುದೇ ಗೊತ್ತಿಲ್ಲ': ಬಾಂಗ್ಲಾ ಯುವಪಡೆಗೆ ತಿವಿದ ಟ್ವೀಟಿಗರು

Srinivasamurthy VN

ಅಂಡರ್ 19 ಕ್ರಿಕೆಟ್ ವಿಶ್ವಕಪ್ ಗೆದ್ದರೂ, 'ಜಂಟಲ್ ಮನ್' ಗೌರವ ಕಳೆದುಕೊಂಡ ಬಾಂಗ್ಲಾ ಯುವಪಡೆ!

ನವದೆಹಲಿ: ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಬಾಂಗ್ಲಾದೇಶ ಯುವ ಕ್ರಿಕೆಟಿಗರು ಪ್ರಶಸ್ತಿ ಜಯಿಸಿದ್ದಾರೆಯಾದರೂ, ಕ್ರಿಕೆಟ್ ಅಭಿಮಾನಿಗಳ ಮನ ಗೆಲುವಲ್ಲಿ ವಿಫಲರಾಗಿದ್ದಾರೆ.

ಹೌದು.. ನಿನ್ನೆ ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಬಾಂಗ್ಲಾದೇಶ ಯುವ ಆಟಗಾರರು ಗೆಲುವಿನ ಬಳಿಕ ಮೈದಾನದಲ್ಲಿ ಅಕ್ಷರಶಃ ದಾಂಧಲೆ ಸೃಷ್ಟಿಸಿದ್ದರು. ಗೆಲುವು ಸಾಧಿಸುತ್ತಲೇ ಮೈದಾನಕ್ಕೆ ನುಗ್ಗಿದ ಆಟಗಾರರು ಭಾರತದ ಯುವ ಆಟಗಾರರನ್ನು ಕಿಚಾಸಿದ್ದು ಮಾತ್ರವಲ್ಲದೇ ಗಲಾಟೆ ಸೃಷ್ಟಿಸಿದ್ದರು. ಈ ಗಲಾಟೆ ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು.

 ಬಾಂಗ್ಲಾ ಯುವ ಆಟಗಾರರು ಭಾರತವನ್ನು ಫೈನಲ್ ನಲ್ಲಿ ಸೋಲಿಸಿದ ನಂತರ ಬಾಂಗ್ಲಾ ಆಟಗಾರನೊಬ್ಬ ಭಾರತೀಯ ಆಟಗಾರನ ಕುರಿತು ಆಡಿದ ಮಾತು ಅಲ್ಲಿದ್ದ ಇತರೆ ಭಾರತೀಯ ಆಟಗಾರರನ್ನು ರೊಚ್ಚಿಗೆಬ್ಬಿಸಿತ್ತು. ಇದರಿಂದಾಗಿ ಆಟಗಾರರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಈ ಸಂದರ್ಭದಲ್ಲಿ ಭಾರತ ತಂಡದ ನಾಯಕ ಪ್ರಿಯಂಗರ್ಗ್ ಮಧ್ಯಪ್ರವೇಶಿಸಿದಾಗಲೂ ಬಾಂಗ್ಲಾ ಆಟಗಾರರು ತಮ್ಮ ದರ್ಪ ತೋರಿದರು. ಆಗ ಎರಡೂ ಆಟಗಾರರ ನಡುವೆ ಘರ್ಷಣೆ ನಡೆಯುವ ಹಂತಕ್ಕೆ ತಲುಪಿತು. 

ಈ ಘಟನೆ ವಿಶ್ವ ಕ್ರಿಕೆಟ್ ಪ್ರೇಮಿಗಳಲ್ಲಿ ಬೇಸರಕ್ಕೆ ಕಾರಣವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಬಾಂಗ್ಲಾ ಆಟಗಾರರನ್ನು ಭೀಕರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಬಾಂಗ್ಲಾದೇಶಕ್ಕೆ ಸರಣಿ ಗೆದ್ದ ಅನುಭವವಿಲ್ಲ. ಹೀಗಾಗಿ ಅವರಿಗೆ ಗೆಲವನ್ನು ಹೇಗೆ ಸಂಭ್ರಮಿಸಬೇಕು ಎಂಬುದೂ ತಿಳಿದಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಇದಾದ ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಬಾಂಗ್ಲಾ ತಂಡದ ನಾಯಕ ಅಕ್ಬರ್ ಅಲಿ, ‘ಪಂದ್ಯದ ನಂತರ ಏನಾಗಿದೆಯೋ ಅದು ಅನಿವಾರ್ಯವಾಗಿ ನಡೆದದ್ದು. ನಮ್ಮ ಕೆಲವು ಬೌಲರ್​​ಗಳು ಎಮೋಷನಲ್ ಆಗಿ ಉತ್ತೇಜನಕ್ಕೆ ಒಳಗಾಗಿದ್ದರು. ಹೀಗಾಗಿ ಈ ಘಟನೆ ನಡೆದಿದ್ದು, ಇದು ಖಂಡಿತಾ ದುರದೃಷ್ಟಕರ. ನಾನು ಟೀಮ್ ಇಂಡಿಯಾವನ್ನ ಅಭಿನಂದಿಸುತ್ತೇನೆ’ ಎಂದು ಹೇಳಿದ್ದರು.
 

SCROLL FOR NEXT