ಕ್ರಿಕೆಟ್

ಪಾಕ್ ಪ್ರವಾಸ ಬೆಳೆಸದಿರಲು ದಕ್ಷಿಣ ಆಫ್ರಿಕಾ ನಿರ್ಧಾರ!

Vishwanath S

ಇಸ್ಲಾಮಾಬಾದ್: ದಕ್ಷಿಣ ಆಫ್ರಿಕಾ ಆಟಗಾರರು ಆಯಾಸದಿಂದಾಗಿ ಮುಂದಿನ ತಿಂಗಳು ಪಾಕಿಸ್ತಾನದೊಂದಿಗೆ ನಡೆಯಲಿರುವ ಟಿ-20 ಸರಣಿಗೆ ಪಾಕಿಸ್ತಾನ ಪ್ರವಾಸ ಮಾಡದಿರಲು ನಿರ್ಧರಿಸಿದೆ.

ಮಾರ್ಚ್ 22 ರಿಂದ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಮೂರು ಪಂದ್ಯಗಳ ಟಿ-20 ಸರಣಿಯನ್ನು ಆಡಬೇಕಿತ್ತು. ಆದರೆ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಆಯಾಸವಾಗಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ(ಸಿಎಸ್ಎ) ಈ ಸಮಯದಲ್ಲಿ ಪ್ರವಾಸವನ್ನು ಕೈಗೊಳ್ಳದಿರಲು ನಿರ್ಧರಿಸಿದೆ.

ಮಾರ್ಚ್ 12ರಿಂದ 18 ದಕ್ಷಿಣ ಆಫ್ರಿಕಾ ಭಾರತದಲ್ಲಿ ವಿರುದ್ಧ ಮೂರು ಏಕದಿನ ಪಂದ್ಯಗಳನ್ನಾಡುತ್ತಿದ್ದು ಆನಂತರ ರಾವಲ್ಪಿಂಡಿಯಲ್ಲಿ ಮೂರು ಟಿ20 ಪಂದ್ಯಗಳಿಗೆ ಪಾಕಿಸ್ತಾನ ಪ್ರವಾಸವನ್ನು ಯೋಜಿಸಲಾಗಿತ್ತು.

ದಕ್ಷಿಣ ಆಫ್ರಿಕಾ ಪ್ರಸ್ತುತ ಇಂಗ್ಲೆಂಡ್ ನಲ್ಲಿ ನಾಲ್ಕು ಟೆಸ್ಟ್, ಮೂರು ಏಕದಿನ ಮತ್ತು ಟಿ20 ಸರಣಿಗಳನ್ನು ಆಡುತ್ತಿದೆ. ನಂತರ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು ಮೂರು ಏಕದಿನ ಮತ್ತು ಟಿ20 ಸರಣಿ ಆಡಲಿದೆ. ಟಿ20 ಸರಣಿ ಮಾರ್ಚ್ 7ರಂದು ಮುಗಿಯಲಿದ್ದು ನಂತರ ಭಾರತ ಪ್ರವಾಸಕ್ಕೆ ಒಂದು ವಾರ ಅಷ್ಟೇ ಸಮಯವಿದ್ದು ಆಟಗಾರರಿಗೆ ಆಯಾಸ, ಒತ್ತಡ ಜಾಸ್ತಿಯಾಗುವುದರಿಂದ ಪಾಕ್ ಪ್ರವಾಸವನ್ನು ದಕ್ಷಿಣ ಆಫ್ರಿಕಾ ಕೈಬಿಡಲು ನಿರ್ಧರಿಸಿದೆ.

SCROLL FOR NEXT