ವರ್ಷದ ಮೊದಲ ಟಿ20 ಆಡಲು ಗುವಾಹಟಿ:ಗೆ ಬಂದ ಕ್ಯಾಪ್ಟನ್ ಕೊಹ್ಲಿಗೆ ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್ 
ಕ್ರಿಕೆಟ್

ವರ್ಷದ ಮೊದಲ ಟಿ20 ಆಡಲು ಗುವಾಹಟಿಗೆ ಬಂದ ಕ್ಯಾಪ್ಟನ್ ಕೊಹ್ಲಿಗೆ ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್

ಜಗತ್ತಿನಲ್ಲೇ ಅತಿ ಹೆಚ್ಚು ಅಭಿಮಾನಿಗಳ ಪ್ರೀತಿಯ ಆಟಗಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎಂಬುವುದರಲ್ಲಿ ಅನುಮಾನವೇ ಇಲ್ಲ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲನೇ ಹಣಾಹಣಿಯ ನಿಮಿತ್ತ ಇಲ್ಲಿಗೆ ಆಗಮಿಸಿರುವ ಕೊಹ್ಲಿಗೆ ಅಭಿಮಾನಿಯೊಬ್ಬ ವಿಶೇಷ ಉಡುಗೊರೆ ನೀಡಿದ್ದಾರೆ.

ಗುವಾಹಟಿ: ಜಗತ್ತಿನಲ್ಲೇ ಅತಿ ಹೆಚ್ಚು ಅಭಿಮಾನಿಗಳ ಪ್ರೀತಿಯ ಆಟಗಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎಂಬುವುದರಲ್ಲಿ ಅನುಮಾನವೇ ಇಲ್ಲ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲನೇ ಹಣಾಹಣಿಯ ನಿಮಿತ್ತ ಇಲ್ಲಿಗೆ ಆಗಮಿಸಿರುವ ಕೊಹ್ಲಿಗೆ ಅಭಿಮಾನಿಯೊಬ್ಬ ವಿಶೇಷ ಉಡುಗೊರೆ ನೀಡಿದ್ದಾರೆ.
`
ರಾಹುಲ್ ಎಂಬ ಕ್ರಿಕೆಟ್ ಅಭಿಮಾನಿಯೊಬ್ಬ ಹಳೆಯ ಮೊಬೈಲ್ ಫೋನ್ ಗಳೊಂದಿಗೆ ಹಾಗೂ ವೈರ್ ಮತ್ತು ತಂತಿಗಳನ್ನು ಬಳಿಸಿಕೊಂಡು ವಿರಾಟ್ ಕೊಹ್ಲಿ ಭಾವಚಿತ್ರವನ್ನು ವಿಶಿಷ್ಠ ರೀತಿಯಲ್ಲಿ ಬಿಡಿಸಿದ್ದಾನೆ. ಕೊಹ್ಲಿ ತಂಗಿದ್ದ ಹೋಟೆಲ್ ಗೆ ತೆರಳಿದ ರಾಹುಲ್, ನೆಚ್ಚಿನ ಆಟಗಾರನಿಗೆ ಉಡುಗೊರೆ ನೀಡಿದ್ದಾನೆ.

ರಾಹುಲ್ ರಿಂದ ಈ ವಿಶೇಷ ಉಡುಗೊರೆ ಪಡೆದ ಕೊಹ್ಲಿ ಅದರ ಮೇಲೆ ತಮ್ಮ ಸಹಿ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. 

ರಾಹುಲ್ ಅವರ ಈ ಉಡುಗೊರೆಯ ವೀಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. " ಕೆಲ ತಿಂಗಳ ಹಿಂದೆ ಕೊಹ್ಲಿ ಪಂದ್ಯಕ್ಕಾಗಿ ಗುವಾಹತಿಗೆ ಆಗಮಿಸುತ್ತಾರೆ ಎಂದು ತಿಳಿಯಿತು. ಈ ವೇಳೆ ಹಳೆಯ ಮೊಬೈಲ್ ಫೋನ್ ಗಳಿಂದ ಕೊಹ್ಲಿರ ಚಿತ್ರ ರೂಪಿಸಿದೆ. ಸರಿ ಸುಮಾರು 3 ದಿನಗಳ ಕಾಲ ಇದಕ್ಕೆ ತೆಗೆದುಕೊಂಡಿದ್ದೆ. ಕೊಹ್ಲಿ ಅವರ ಭೇಟಿಯ ಕ್ಷಣ ನನಗೆ ಸಂತಸ ತಂದಿದೆ. ಅವರ ಆಟೋಫ್ಗ್ರಾಫ್ ಸಹ ಪಡೆದಿದ್ದೇನೆ" ಎಂದು ರಾಹುಲ್ ತಮ ಹರ್ಷವನ್ನು ಹಂಚಿಕೊಂಡಿದ್ದಾರೆ.

ಇಂದು ಟೀಂ ಇಂಡಿಯಾ-ಶ್ರೀಲಂಕಾ ನಡುವೆ ಈ ವರ್ಷದ ಮೊದಲ ಟಿ20  ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್