ಶಿಖರ್ ಧವನ್ 
ಕ್ರಿಕೆಟ್

ಬೆಂಗಳೂರು ಪಂದ್ಯದ ವೇಳೆ ಧವನ್ ಭುಜಕ್ಕೆ ಗಾಯ: ನ್ಯೂಜಿಲೆಂಡ್ ಪ್ರವಾಸ ಡೌಟು

ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯದ ಪಂದ್ಯದಲ್ಲಿ  ಎಡ ಭುಜಕ್ಕೆ ಗಾಯ ಮಾಡಿಕೊಂಡಿರುವ ಆರಂಭಿಕ ಆಟಗಾರ ಶಿಖರ್ ಧವನ್ ನ್ಯೂಜಿಲೆಂಡ್ ಪ್ರವಾಸ ಅನುಮಾನವಾಗಿದೆ. 

ಬೆಂಗಳೂರು: ಆರಂಭಿಕ ಆಟಗಾರ  ಶಿಖರ್ ಧವನ್, ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯದ ಪಂದ್ಯದಲ್ಲಿ  ಎಡ ಭುಜಕ್ಕೆ ಗಾಯ ಮಾಡಿಕೊಂಡಿದ್ದರಿಂದ ಬ್ಯಾಟಿಂಗ್ ಮಾಡಲಿಲ್ಲ.

ನಂತರ ಎಕ್ಸ್ - ರೇ ಪರೀಕ್ಷೆ ಮಾಡಲಾಗಿದ್ದು, ಎಡ ಕೈಯಲ್ಲಿ ಬಿರುಕು ಕಾಣಿಸಿಕೊಂಡಿದೆ (ಸ್ಲಿಂಗ್ ) ಇದರಿಂದಾಗಿ ಅವರು ಜನವರಿ 24 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ. 

ವೈದ್ಯಕೀಯ ತಂಡ ಶಿಖರ್ ಧವನ್ ಅವರಿಗೆ ಮಾಡಿರುವ ಸ್ಕ್ಯಾನ್ ನ್ನು ಪರಿಶೀಲಿಸಿದ್ದು, ಯಾವಾಗ ಆಡಬಹುದು ಎಂದು ಹೇಳುವುದಾಗಿ ಬಿಸಿಸಿಐ ಮಾಧ್ಯಮ ಮ್ಯಾನೇಜರ್  ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಐದನೇ ಓವರ್ ನಲ್ಲಿ ಚೆಂಡನ್ನು ತಡೆಯುವ ಯತ್ನದಲ್ಲಿ ಧವನ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ನಂತರ ಚಾಹೆಲ್ ಬದಲಿ ಆಟಗಾರನಾಗಿ ಆಡಿದ್ದರು. ನಂತರ ಬ್ಯಾಟಿಂಗ್ ಕೂಡಾ ಮಾಡಿರಲಿಲ್ಲ.

ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧವನ್ ಹೆಬ್ಬೆಟ್ಟು ಗಾಯದಿಂದ ನರಳಿದ್ದರು. ನಂತರ ವಾಪಾಸ್ ಆದ ನಂತರ ಮುಸ್ತಾಕ್ ಆಲಿ ಟ್ರೋಫಿ ವೇಳೆಯಲ್ಲಿ ಮೊಣಕಾಲಿನ ಗಾಯದಿಂದ ಬಳಲಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel