ಕ್ರಿಕೆಟ್

ಭಾರತದ ಡೆತ್ ಬೌಲಿಂಗ್ ಅಸಾಧಾರಣವಾದದ್ದು: ಆರೋನ್ ಫಿಂಚ್

Srinivasamurthy VN

ಬೆಂಗಳೂರು: ಭಾನುವಾರ ಮೂರನೇ ಏಕದಿನ ಪಂದ್ಯದಲ್ಲಿ ಸೋತು ಏಕದಿನ ಸರಣಿಯನ್ನು ಕಳೆದುಕೊಂಡ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಭಾರತ ತಂಡದ ಡೆತ್ ಬೌಲಿಂಗ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸ್ಟೀವನ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಅವರ 127 ರನ್ ಗಳ ದೊಡ್ಡ ಜತೆಯಾಟದ ಹೊರತಾಗಿಯೂ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಆಸ್ಟ್ರೇಲಿಯಾ ತಂಡ ವಿಫಲವಾಗಿತ್ತು. ನಿಗದಿತ 50 ಓವರ್ ಗಳಿಗೆ 9 ವಿಕೆಟ್ ನಷ್ಟಕ್ಕೆ 286 ರನ್ ಗಳಿಗೆ ಶಕ್ತವಾಗಿತ್ತು. ಬ್ಯಾಟಿಂಗ್ ಸ್ನೇಹಿ ಪಿಚ್ ಆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಗಳ ಸುಲಭ ಜಯ ಸಾಧಿಸಿತ್ತು. ಕೊನೆಯ 10 ಓವರ್ ಗಳಲ್ಲಿ ಆಸ್ಟ್ರೇಲಿಯಾ ಐದು ವಿಕೆಟ್ ಕಳೆದು ಕೊಂಡಿತ್ತು. ಕೊನೆಯ ಮೂರು ಓವರ್ ಗಳಲ್ಲಿ ಭಾರತೀಯ ಬೌಲರ್ ಗಳು ನೀಡಿದ್ದು ಕೇವಲ 13 ರನ್ ಮಾತ್ರ. ಈ ಬಗ್ಗೆ ಮಾತನಾಡಿ, "ನಮ್ಮ ಬ್ಯಾಟ್ಸ್ ಮನ್ ಗಳು ಕೊನೆಯ ಓವರ್ ಗಳಲ್ಲಿ ನಿಯಮಿತವಾಗಿ ರನ್ ಗಳಸುವಲ್ಲಿ ವಿಫಲವಾದರು," ಎಂದು ಹೇಳಿದರು.

ಕೊಹ್ಲಿ ವಿಶ್ವ ಕ್ರಿಕೆಟ್ ಶ್ರೇಷ್ಠ ಆಟಗಾರ, ಟಾಪ್ 5ನಲ್ಲಿ ರೋಹಿತ್ ಶರ್ಮಾ
ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಕ್ರಿಕೆಟ್ ಸರ್ವ ಶ್ರೇಷ್ಠ ಆಟಗಾರ ಎಂದು ಶ್ಲಾಘಿಸಿದ ಫಿಂಚ್, ಟಾಪ್ 5 ಶ್ರೇಷ್ಠ ಆಟಗಾರರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು ಎಂದು ಹೇಳಿದ್ದಾರೆ. ಭಾರತ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದು, ಅನುಭವಿ ಆಟಗಾರರು ದೊಡ್ಡ ಪಂದ್ಯಗಳಲ್ಲಿ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಶಿಖರ್ ಧವನ್ ಇಲ್ಲದೆ ರೋಹಿತ್ ಶರ್ಮಾ ಅವರ ಶತಕ ಮತ್ತು ಇಬ್ಬರು ಬಲಿಷ್ಠ ಆಟಗಾರರು ಹೆಚ್ಚಿನ ರನ್ ಗಳಿಸಿರುವುದು ನಿಜವಾಗಿಯೂ ಗುಣಮಟ್ಟದ ತಂಡದ ಅಗ್ರ ಬ್ಯಾಟಿಂಗ್ ಕ್ರಮಾಂಕದ ಸಂಕೇತವಾಗಿದೆ ಎಂದು ಫಿಂಚ್ ಹೇಳಿದರು. 

ಭಾರತದ ಡೆತ್ ಬೌಲಿಂಗ್ ಅಸಾಧಾರಣವಾದದ್ದು
ಕಳೆದೆರಡು ಪಂದ್ಯಗಳಲ್ಲಿ ಕೊನೆಯ ಹಂತದಲ್ಲಿ ನಮ್ಮ ಬೌಲರ್‌ಗಳು ಬ್ಯಾಟಿಂಗ್ ಮಾಡುತ್ತಿದ್ದರು. ರಾಜ್‌ಕೋಟ್‌ನಲ್ಲಿ ಕೆಎಲ್ ರಾಹುಲ್ ನೆಲೆಯೂರಿದ ಬಳಿಕ ದಂಡಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ನಾವು ಒಂದೆರಡು ಟ್ರಿಕ್ಸ್‌ಗಳನ್ನು ಮಿಸ್ ಮಾಡಿದೆವು. ಇದರೆಲ್ಲ ಶ್ರೇಯಸ್ಸು ಭಾರತೀಯ ಡೆತ್ ಬೌಲರ್‌ಗಳಿಗೆ ಸಲ್ಲಬೇಕು. ಮೊಹಮ್ಮದ್ ಶಮಿ ಪರ್ಫೆಕ್ಟ್ ಯಾರ್ಕರ್ ದಾಳಿಗಳನ್ನು ಎಸೆದರು. ಜಸ್ಪ್ರೀತ್ ಬುಮ್ರಾ ಹಾಗೂ ನವದೀಪ್ ಸೈನಿ ಕೂಡಾ ನಿಖರ ದಾಳಿ ಸಂಘಟಿಸಿದರು. ನಾವು ಎಲ್ಲಿ ಸುಧಾರಣೆ ಮಾಡಬೇಕಿದೆ ಎಂಬುದನ್ನು ಅವಲೋಕಿಸಬೇಕಿದೆ. ಅದೇ ಹೊತ್ತಿಗೆ ಭಾರತೀಯ ಬೌಲರ್‌ಗಳಿಗೂ ಶ್ರೇಯಸ್ಸು ಸಲ್ಲಿಸಬೇಕು ಎಂದು ಫಿಂಚ್ ಹೇಳಿದರು.

SCROLL FOR NEXT