ಕ್ರಿಕೆಟ್

ಬ್ರಿಲಿಯಂಟ್ ವಿಲಿಯಮ್ಸ್ : ಕೊಹ್ಲಿ ಹೊಗಳಿಕೆಗೆ ಕಾರಣ ಏನು ಗೊತ್ತಾ?

Nagaraja AB

ಹ್ಯಾಮಿಲ್ಟನ್ : ಸೆಡ್ಡನ್ ಪಾರ್ಕ್ ನಲ್ಲಿ ಬುಧವಾರ ನಡೆದ ರೋಚಕ  ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್  ಜೋಡಿಯ ಸಾಹಸದ ಫಲವಾಗಿ ಭಾರತ ತಂಡ ಸೂಪರ್ ಓವರ್ ನಲ್ಲಿ ಗೆಲುವಿಗೆ ಅಗತ್ಯವಿದ್ದ ಕಠಿಣ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ, 3-0 ಅಂತರದಿಂದ ಟಿ-20 ಸರಣಿಯನ್ನು ವಶಪಡಿಸಿಕೊಂಡಿತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸ್  ಅವರನ್ನು ಹೊಗಳಿದರು. ಒಂದು ಹಂತದಲ್ಲಿ ಪಂದ್ಯದ ಮೇಲೆ ಭರವಸೆ ಕಳೆದುಕೊಂಡಿದ್ದೆ.95 ರನ್ ಗಳಿಸಿದ ಕೇನ್ ಬ್ಯಾಟಿಂಗ್ ಶೈಲಿ ನೋಡಿ ಅವರೇ ಗೆಲ್ಲುತ್ತಾರೆ.ಕೇನ್ ಅವರೇ ಪಂದ್ಯ ಗೆಲ್ಲಿಸುತ್ತಾರೆ ಎಂದು ಕೋಚ್ ಗೆ ತಿಳಿಸಿದ್ದೆ . ನಿರ್ಣಾಯಕ ಹಂತದಲ್ಲಿ ಅವರ ವಿಕೆಟ್ ಬಿದ್ದ ಪರಿಣಾಮ ಪಂದ್ಯ ತಿರುವು ಪಡೆಯಿತು. ಕೆಟ್ಟ ಹೊಡೆತಕ್ಕೆ ಕೈ ಹಾಕಿ ಅವರು ವಿಕೆಟ್ ಕಳೆದುಕೊಳ್ಳಬೇಕಾಯಿತು. ಅವರಿಗೆ ಆಗುತ್ತಿರುವ ನೋವಿನ ಅನುಭವ ನನಗೂ ಗೊತ್ತಿದೆ ಎಂದರು.

ನಿರ್ಣಯಕ ಹಂತದಲ್ಲಿ ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್ ಮಾಡಿದರು.ಕಡೆಯ ಓವರ್ ನಲ್ಲಿ ಶಮಿ ಆಫ್ ಸ್ಟಂಪ್ ಹೊರಗೆ ಒಂದೆರಡು ಎಸೆತಗಳನ್ನು ಎಸೆದರು ನಂತರ ಕೊನೆಯ ಎಸೆತದಲ್ಲಿ ಸಿಂಗಲ್ ನೀಡಬೇಕು ಅಥವಾ ಸ್ಟಂಪ್ ಮಾಡಬೇಕು, ಇಲ್ಲದಿದ್ದರೆ ಪಂದ್ಯ ಗೆಲ್ಲುವುದಕ್ಕೆ ಆಗಲ್ಲ ಎಂದು ಚರ್ಚಿಸಿ ಪ್ರಯತ್ನಿಸಿದ್ದರಿಂದ ವಿಕೆಟ್ ಪಡೆದು ಪಂದ್ಯ ಗೆದಿದ್ದಾಗಿ ತಿಳಿಸಿದರು.

ವಿಶ್ವದ ವೇಗಿಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬೂಮ್ರಾ ಅವರ ಬೌಲಿಂಗ್ ನಲ್ಲಿ ಕೇನ್ ಕೆಲವೊಂದು ಬ್ರಿಲಿಯಂಟ್ ಶಾಟ್ ಗಳನ್ನು ಹೊಡೆದರು. ನಂತರ ಮತ್ತೆ ನಾವು ಒತ್ತಡ ಹಾಕಿದ್ದೇವು. ಶಾಂತ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಗೆಲುವು ಸಾಧಿಸಿದ್ದಾಗಿ ತಿಳಿಸಿದರು. 

ವಿಲಿಯಮ್ಸ್ ಕೇನ್ 48 ಎಸೆತಗಳಲ್ಲಿ 8 ಬೌಂಡರಿ , 6 ಸಿಕ್ಸರ್ ಮೂಲಕ ಏಕಾಂಗಿಯಾಗಿ ಪಂದ್ಯವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಆದರೆ ಸೂಪರ್ ಓವರ್  ನ್ಯೂಜಿಲೆಂಡ್ ಕೈ ಹಿಡಿಯಲಿಲ್ಲ. 

SCROLL FOR NEXT