ಕ್ರಿಕೆಟ್

ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾರ ಕೊನೆಯ ಸಿಕ್ಸರ್‌ಗೆ ವಿರಾಟ್ ಕೊಹ್ಲಿ ಸಂಭ್ರಮ ಹೀಗಿತ್ತು, ವಿಡಿಯೋ ವೈರಲ್!

Vishwanath S

ಕಿವೀಸ್ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಇನ್ನು ರೋಹಿತ್ ಶರ್ಮಾ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗೆಲುವು ತಂದುಕೊಟ್ಟ ಬಳಿಕ ನಾಯಕ ವಿರಾಟ್ ಕೊಹ್ಲಿ ಸಂಭ್ರಮ ನಿಜಕ್ಕೂ ರೋಮಾಂಚಕಕಾರಿಯಾಗಿತ್ತು.

ಆಕ್ಲೆಂಡ್ ನಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟಿ20 ಪಂದ್ಯದ ಟೈನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಉಭಯ ತಂಡಗಳಿಗೆ ಸೂಪರ್ ಓವರ್ ನೀಡಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ 17 ರನ್ ಕಲೆ ಹಾಕಿತು. 18 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಕಣಕ್ಕಿಳಿದರು. 

ಮೊದಲ ಎಸೆತದಲ್ಲಿ ರೋಹಿತ್ ಶರ್ಮಾ 2 ರನ್ ತೆಗೆದುಕೊಂಡರು. ಎರಡನೇ ಎಸೆತದಲ್ಲಿ 1 ರನ್ ಮಾತ್ರ ಸಿಕ್ಕಿತು. ಸ್ಟ್ರೈಕ್ ಗೆ ಬಂತ ರಾಹುಲ್ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ನಾಲ್ಕನೇ ಎಸೆತದಲ್ಲಿ ರಾಹುಲ್ ಭರ್ಜರಿ ಹೊಡೆತಕ್ಕೆ ಮುಂದಾದರೂ ಆದರೆ 1 ರನ್ ಮಾತ್ರ ಪಡೆಯಲು ಸಾಧ್ಯವಾಯಿತು. 

ಈ ವೇಳೆ ಪಂದ್ಯ ಗೆಲ್ಲುವುದಕ್ಕೆ ಉಳಿದ ಎರಡು ಎಸೆತಗಳಲ್ಲೂ ಭರ್ಜರಿ ಸಿಕ್ಸರ್ ಸಿಡಿಸಬೇಕಿತ್ತು. ಈ ವೇಳೆ ಸ್ಟ್ರೈಕ್ ನಲ್ಲಿದ್ದ ರೋಹಿತ್ ಶರ್ಮಾ 5 ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದು ಆಗ ತಂಡಕ್ಕೆ ಪಂದ್ಯ ಗೆಲ್ಲುವ ಭರವಸೆ ಬಂದಿತು. ಇನ್ನು ಕೊನೆಯ ಎಸೆತದಲ್ಲಿ ಗೆಲ್ಲಲು ನಾಲ್ಕು ರನ್ ಅವಶ್ಯಕತೆ ಇತ್ತು. ಆಗ ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್ ಬಾರಿಸಿ ಪಂದ್ಯದವನ್ನು ಗೆಲ್ಲಿಸಿಕೊಟ್ಟರು. ಈ ವೇಳೆ ಮೈದಾನಕ್ಕೆ ಬಂದ ಕೊಹ್ಲಿ ಹಾಗೂ ಇತರ ಆಟಗಾರರು ಸಂಭ್ರಮಿಸಿದರು. 

ಐದು ಪಂದ್ಯ ಟಿ20 ಸರಣಿಯಲ್ಲಿ ಭಾರತ ಸತತ ಮೂರು ಪಂದ್ಯಗಳಲ್ಲಿ ಗೆದ್ದು ಸರಣಿಯನ್ನು ಕೈವಶ ಮಾಡಿಕೊಂಡಿದೆ. 

SCROLL FOR NEXT