ಕ್ರಿಕೆಟ್

ಶಶಾಂಕ್ ಮನೋಹರ್ ಅವಧಿಯಲ್ಲಿ ಬಿಸಿಸಿಐಗೆ ತುಂಬಲಾರದ ನಷ್ಟ: ನಿರಂಜನ್ ಶಾ

Vishwanath S

ರಾಜ್ ಕೋಟ್: ಶಶಾಂಕ್ ಮನೋಹರ್ ಅವರು ಐಸಿಸಿ ಮುಖ್ಯಸ್ಥರಾದ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸಾಕಷ್ಟು ನಷ್ಟ ಸಂಭವಿಸಿದೆ. ಅದರೆ ಬಗ್ಗೆ ಶಶಾಂಕ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಿಸಿಸಿಐನ ಕಾರ್ಯದರ್ಶಿ ನಿರಂಜನ್ ಶಾ ಹೇಳಿದ್ದಾರೆ.

ಶಶಾಂಕ್ ಅವರು ಎರಡು ಅವಧಿಗೆ ಐಸಿಸಿ ಮುಖ್ಯಸ್ಥರಾಗಿದ್ದರು. ಬುಧವಾರ ತಮ್ಮ ಅಧಿಕಾರದಿಂದ ಕೆಳಗಿಳಿದಿದ್ದಾರೆ. ಐಸಿಸಿ ಸದಸ್ಯ ರಾಷ್ಟ್ರಗಳಿಗೆ ಆದಾಯ ಹಂಚಿಕೆಯಲ್ಲಿ ಮೊದಲನಿಂದ ಇದ್ದ ಬಿಗ್ ತ್ರಿ ವ್ಯವಸ್ಥೆಯನ್ನು ರದ್ದುಗೊಳಿಸುವಲ್ಲಿ ಶಶಾಂಕ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಬಿಸಿಸಿಐ ಮೊದಲಿಂದಲೂ ಹೇಳಿಕೊಂಡು ಬಂದಿದೆ. ಬಿಗ್ ತ್ರಿ ಎಂದರೆ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಐಸಿಸಿ ಆದಾಯದಲ್ಲಿ ಹೆಚ್ಚಿನ ಪಾಲನ್ನು ಹೊಂದಿದ್ದವು ಎಂದಿದ್ದಾರೆ. 

ಇನ್ನು ಶಶಾಂಕ್ ಅವರಿಗೆ ಮಿಶ್ರ ಭಾವನೆಗಳಿರಬಹುದು. ತಾವು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸಿರುವ ಭಾವನೆ ಇರಬೇಕು. ಆದರೆ ಅವರು ತಮ್ಮ ದೇಶಕ್ಕೆ(ಭಾರತ) ಏನು ಹಾನಿ ಮಾಡಿದ್ದಾರೆಂಬುದನ್ನು ಕೇಳಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಶಶಾಂಕ್ ಇದೀಗ ಅಧಿಕಾರ ಬಿಟ್ಟು ಕೆಳಗಿಳಿದಿದ್ದಾರೆ. ನಿರಾಳವಾಗಿ ಕುಳಿತು ಸ್ವಲ್ಪ ಸಮಯ ತಮ್ಮ ಅಧಿಕಾರವಧಿಯನ್ನು ಪ್ರಾಮಾಣಿಕವಾಗಿ ಅವಲೋಕಿಸಿಕೊಳ್ಳಬೇಕು ಎಂದಿದ್ದಾರೆ.

SCROLL FOR NEXT