ಉಮರ್ ಅಕ್ಮಲ್ ಗೆ ವಿಧಿಸಿದ್ದ 3 ವರ್ಷಗಳ ನಿಷೇಧ 18 ತಿಂಗಳಿಗೆ ಇಳಿಕೆ! 
ಕ್ರಿಕೆಟ್

ಉಮರ್ ಅಕ್ಮಲ್ ಗೆ ವಿಧಿಸಿದ್ದ 3 ವರ್ಷಗಳ ನಿಷೇಧ 18 ತಿಂಗಳಿಗೆ ಇಳಿಕೆ!

ಪಾಕಿಸ್ತಾನದ ಬ್ಯಾಟ್ಸ್  ಮನ್ ಉಮರ್ ಅಕ್ಮಲ್ ಗೆ ವಿಧಿಸಲಾಗಿದ್ದ 3 ವರ್ಷಗಳ ನಿಷೇಧವನ್ನು 18 ತಿಂಗಳಿಗೆ ಇಳಿಕೆ ಮಾಡಲಾಗಿದೆ. 

ಕರಾಚಿ: ಪಾಕಿಸ್ತಾನದ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಗೆ ವಿಧಿಸಲಾಗಿದ್ದ 3 ವರ್ಷಗಳ ನಿಷೇಧವನ್ನು 18 ತಿಂಗಳಿಗೆ ಇಳಿಕೆ ಮಾಡಲಾಗಿದೆ. 

ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಉಮರ್ ಅಕ್ಮಲ್  ಪಾಲ್ಗೊಂಡಿದ್ದಾಗ ಫಿಕ್ಸಿಂಗ್ ಮಾಡಿಕೊಳ್ಳುವ ಕಾರಣಕ್ಕೆ ಬುಕ್ಕಿಗಳು ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಉಮರ್ ಅಕ್ಮಲ್ ಅವರನ್ನು ಸಂಪರ್ಕಿಸಿದ್ದರು. ಆದರೆ ಈ ವಿಚಾರವನ್ನು ಭ್ರಷ್ಟಾಚಾರ ನಿಗ್ರಹದಳಕ್ಕೆ ಮಾಹಿತಿ ನೀಡದ ಕಾರಣ ಉಮರ್ ಅಕ್ಮಲ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.  ಆರೋಪಕ್ಕೆ ಸಂಬಂಧ ಪಟ್ಟಂತೆ ಪಿಸಿಬಿ ನೋಟಿಸ್ ನೀಡಿತ್ತು. ಇದಕ್ಕೆ ಸೂಕ್ತ ಉತ್ತರವನ್ನು ನೀಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಉಮರ್ ಅಕ್ಮಲ್ ಶಿಕ್ಷೆಗೆ ಗುರಿಯಾಗಿದ್ದರು.

ಈ ನಿಷೇಧದ ಅವಧಿಯನ್ನು ಬುಧವಾರದಂದು 18 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಫೆಬ್ರವರಿ 2020 ರಿಂದ 2021 ರ ಆಗಸ್ಟ್ ವರೆಗೆ ಅಕ್ಮಲ್ ವಿರುದ್ಧದ ನಿಷೇಧ ಚಾಲ್ತಿಯಲ್ಲಿರಲಿದೆ. ಈ ಆದೇಶದಿಂದ ಅಸಂತುಷ್ಟಗೊಂಡಿರುವ ಅಕ್ಮಲ್ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

ನನಗಿಂತಲೂ ಮುನ್ನ ಹಲವಾರು ಕ್ರಿಕೆಟಿಗರು ಈ ರೀತಿಯ ಅಪರಾಧವೆಸಗಿದ್ದಾರೆ. ಆದರೆ ಅವರ್ಯಾರಿಗೂ ಶಿಕ್ಷೆಯಾಗಿಲ್ಲ. ನನ್ನ ಶಿಕ್ಷೆಯ ಅವಧಿಯನ್ನು ಮತ್ತಷ್ಟು ಕಡಿಮೆ ಮಾಡುವುದಕ್ಕಾಗಿ ನಾನು ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಅಕ್ಮಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT