ಕ್ರಿಕೆಟ್

ಐಪಿಎಲ್ ನಲ್ಲಿ ಚೀನೀ ಪ್ರಾಯೋಜಕತ್ವವನ್ನು ಕ್ರಮೇಣ ಕೊನೆಗೊಳಿಸಬೇಕು: ಕಿಂಗ್ಸ್ ಇಲೆವೆನ್ ಮಾಲೀಕ ನೆಸ್ ವಾಡಿಯಾ

Raghavendra Adiga

ಈ ತಿಂಗಳ ಆರಂಭದಲ್ಲಿ ಪೂರ್ವ ಲಡಾಕ್‌ನಲ್ಲಿ ನಡೆದ ಚೀನಾದೊಂದಿಗಿನ ಸಂಘರ್ಷದಿಂದಾಗಿ  ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಸಹ ಮಾಲೀಕ ನೆಸ್ ವಾಡಿಯಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೀನಾದ ಪ್ರಾಯೋಜಕತ್ವವನ್ನು ಕ್ರಮೇಣ ಕೊನೆ ಮಾಡಬೇಕೆಂದು ಕರೆ ನೀಡಿದರು. 

ಜೂನ್ 15 ರಂದು ನಡೆದ ಗಲ್ವಾನ್ ವ್ಯಾಲಿ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಕುರಿತು ಹೆಚ್ಚು ಹೆಚ್ಚು ಒತ್ತಾಯ ಕೇಳಿಬರುತ್ತಿದೆ.

ಚೀನಿಯರು ಇಲ್ಲಿಯವರೆಗೆ ತಾವು ಎಷ್ಟು ಮಂದಿ ಸಾವನ್ನಪ್ಪಿದ್ದಾರೆಂದು ಬಹಿರಂಗಪಡಿಸಿಲ್ಲ. ಈ ಘಟನೆ ಐಪಿಎಲ್ ನಲ್ಲಿ  ಚೀನಾದ ಪ್ರಾಯೋಜಕತ್ವವನ್ನು ಪರಿಶೀಲಿಸಲು ಬಿಸಿಸಿಐಗೆ ಪ್ರೇರಣೆ ನೀಡಿದೆ.ಸೋಮವಾರ ಭಾರತ 59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಿದೆ. "ರಾಷ್ಟ್ರದ ಹಿತದೃಷ್ಟಿಯಿಂದ ನಾವು ಇದನ್ನು ಮಾಡಬೇಕು (ಐಪಿಎಲ್‌ನಲ್ಲಿ ಚೀನೀ ಪ್ರಾಯೋಜಕರೊಂದಿಗಿನ ಸಂಪರ್ಕ ತಗ್ಗಿಸುವಿಕೆ) ದೇಶ ಮೊದಲು ಹಣ ನಂತರದ ಆದ್ಯತೆಯಾಗಿದೆ, ಹಾಗಾಗಿ ನಾವು ಇದನ್ನು ಮಾದರಿಯನ್ನಾಗಿ ಮಾಡಿಕೊಳ್ಳಬೇಕಿದೆ ಎಂದು ವಾಡಿಯಾ ಪಿಟಿಐಗೆ ತಿಳಿಸಿದರು.

"ಪ್ರಾರಂಭದಲ್ಲಿ ಪ್ರಾಯೋಜಕತ್ವವನ್ನು ಕೊನೆಗೊಳಿಸುವುದು ಕಠಿಣವಾಗಲಿದೆ. ಆದರೆ ಚೀನೀ ಸಂಸ್ಥೆಗಳ ಬದಲಿಗೆ ಅಷ್ಟೇ ಸಂಖ್ಯೆಯ ಭಾರತೀಯ ಕಂಪನಿಗಳ ಪ್ರಾಯೋಜಕರು ನಮಗೆ ಲಭ್ಯವಿದ್ದಾರೆ ಎನ್ನುವುದು ನನಗೆ ಖಾತ್ರಿ ಇದೆ. ರಾಷ್ಟ್ರ ಹಾಗೂ ನಮ್ಮ ಸರ್ಕಾರದ ಬಗ್ಗೆ ನಮಗೆ ಎಲ್ಲ ಗೌರವ ಇರಬೇಕು ಮತ್ತು ಮುಖ್ಯವಾಗಿ ನಮಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಸೈನಿಕರ ಬಗ್ಗೆ ನಾವು ಗಮನಿಸಬೇಕು"

SCROLL FOR NEXT