ವಾಸಿಂ ಜಾಫರ್ 
ಕ್ರಿಕೆಟ್

ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ವಾಸಿಂ ಜಾಫರ್ 

ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್, ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದು, ಎರಡು ದಶಕಗಳಿಂದಲೂ ಮಂಕಾಗಿದ್ದ ವೃತ್ತಿ ಜೀವನಕ್ಕೆ  ಅಂತಿಮ ತೆರೆ ಎಳೆದಿದ್ದಾರೆ

ನವದೆಹಲಿ: ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್, ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದು, ಎರಡು ದಶಕಗಳಿಂದಲೂ ಮಂಕಾಗಿದ್ದ ವೃತ್ತಿ ಜೀವನಕ್ಕೆ  ಅಂತಿಮ ತೆರೆ ಎಳೆದಿದ್ದಾರೆ

42 ವರ್ಷದ ಜಾಫರ್ 31 ಟೆಸ್ಟ್ ಪಂದ್ಯಗಳನ್ನಾಡಿದ್ದು, 34. 11ರ ಸರಾಸರಿಯಲ್ಲಿ 1, 944 ರನ್ ಗಳನ್ನು ಕಲೆ ಹಾಕಿದ್ದಾರೆ. ಧೀರ್ಘಾವಧಿಯ ಪಂದ್ಯದಲ್ಲಿ ಐದು ಶತಕ ಹಾಗೂ 11 ಅರ್ಧ ಶತಕ ಗಳಿಸಿರುವ ವಾಸಿಂ ಜಾಫರ್, ಒಮ್ಮೆ  212 ಅತ್ಯಧಿಕ ರನ್ ಭಾರಿಸಿದ್ದರು. 

ಸುಂದರ ಪಂದ್ಯಗಳನ್ನಾಡಲು ಅವಕಾಶ ದೊರೆತಿದ್ದಕ್ಕಾಗಿ ಅಲ್ಲಾಹು, ತಂದೆ ತಾಯಿ ಹಾಗೂ  ಸಹೋದರರು, ಪತ್ನಿಗೆ ಧನ್ಯವಾದ ಆರ್ಪಿಸುವುದಾಗಿ  ಅವರು ಹೇಳಿದ್ದಾರೆ.

ಶಾಲಾ ದಿನಗಳಲ್ಲಿದ್ದ ತಮ್ಮ ಪ್ರತಿಭೆ ಹೊರಬರಲು ನೆರವಾದ ಎಲ್ಲಾ ಕೋಚ್ ಗಳು ಹಾಗೂ ನನ್ನಲ್ಲಿ ನಂಬಿಕೆ ಇಟ್ಟು ಪಂದ್ಯಗಳನ್ನಾಡಲು ಅವಕಾಶ ನೀಡಿದ ಎಲ್ಲಾ ಆಯ್ಕೆದಾರರಿಗೆ ವಿಶೇಷ ಕೃತಜ್ಞತೆ ಸಲ್ಲಿಸುವುದಾಗಿ ರಣಜಿ ಟ್ರೋಫಿಯಲ್ಲಿ ಅತ್ಯಧಿಕ ರನ್ ಗಳಿಸಿರುವ  ವಾಸಿಂ ಜಾಫರ್  ಹೇಳಿದ್ದಾರೆ.

ದ್ವಿಶತಕ ಗಳಿಸಿರುವ ಟೀಂ ಇಂಡಿಯಾ ಕೆಲ ಆಟಗಾರರಲ್ಲಿ ವಾಸಿಂ ಜಾಫರ್ ಕೂಡಾ ಒಬ್ಬರಾಗಿದ್ದಾರೆ. ಸೆಂಟ್ ಲೂಸಿಯಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 212 ರನ್ ಗಳಿಸಿದ್ದರು. 

2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಗಳ ಮೂಲಕ ಮೊದಲ ಬಾರಿಗೆ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನಾಡಿದ್ದ ವಾಸಿಂ ಜಾಫರ್, ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ರಣಜಿ ಟ್ರೋಫಿಯಲ್ಲಿ 12 ಸಾವಿರ ರನ್ ಹೊಂದಿರುವ ಮೊದಲ ಬ್ಯಾಟ್ಸ್ ಮನ್ ಆಗಿದ್ದಾರೆ.  ಅಲ್ಲದೇ 150 ರಣಜಿ ಟ್ರೋಫಿಯ ಪಂದ್ಯಗಳನ್ನಾಡಿರುವ ಮೊದಲ ಆಟಗಾರರಾಗಿದ್ದಾರೆ. 

1996-97ರಲ್ಲಿ ಚೊಚ್ಚಲ ಬಾರಿಗೆ ಪ್ರಥಮ ದರ್ಜೆ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ವಾಸಿಂ ಜಾಫರ್, 260 ಪಂದ್ಯಗಳಿಂದ 19, 410 ರನ್ ಗಳನ್ನು ಕಲೆ ಹಾಕಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT