ಫರ್ಗ್ಯೂಸನ್‌ 
ಕ್ರಿಕೆಟ್

ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ ಅನುಭವ: ಫರ್ಗ್ಯೂಸನ್‌

ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ ಅನುಭವ ನೀಡಿದ್ದಾಗಿ  ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯೂಸನ್ ಹೇಳಿದ್ದಾರೆ.

ಸಿಡ್ನಿ: ಕೊರೋನಾ  ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಪ್ರೇಕ್ಷರಿಲ್ಲದೆ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಏಕದಿನ ಪಂದ್ಯವನ್ನು ಪೂರ್ಣಗೊಳಿದ್ದವು

ಆದರೆ, ಸಾಮಾನ್ಯವಾಗಿ ಸಾವಿರಾರು ಕ್ರಿಕೆಟ್‌ ಅಭಿಮಾನಿಗಳ ಸಮ್ಮುಖದಲ್ಲಿ ಹೊಸ ಜೋಶ್‌ನೊಂದಿಗೆ ಆಡುತ್ತಿದ್ದ ಆಟಗಾರರಿಗೆ ಮುಚ್ಚಿದ ಕ್ರೀಡಾಂಗಣದಲ್ಲಿ ಆಡಿದ್ದರಿಂದ ಎಲ್ಲವೂ ಹೊಸದೆನಿಸಿತ್ತು.

ಕಳೆದ ಶುಕ್ರವಾರ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ  ಏಕದಿನ ಪಂದ್ಯದ ಬಳಿಕ ನ್ಯೂಜಿಲೆಂಡ್‌ ತಂಡದ ವೇಗಿ ಲಾಕಿ ಫರ್ಗ್ಯೂಸನ್‌  ಅವರಿಗೆ ಗಂಟಲು ನೋವು ಕಾಣಿಸಿಕೊಂಡಿತ್ತು.ಬಳಿಕ, ಕೋವಿಡ್‌-19 ಸೋಂಕು ತಗುಲಿರಬಹುದೆಂಬ ಸಂಶಯದಿಂದಾಗಿ ಅವರನ್ನು 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಕೊರೊನಾ ವೈರಸ್‌ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಿತ್ತು. ಇದರಿಂದಾಗಿ ತಂಡದಲ್ಲಿದ್ದ ಕೊರೊನಾ ವೈರಸ್‌ ಭೀತಿ ದೂರವಾಯಿತು.

ಈ ಬಗ್ಗೆ ಮಾತನಾಡಿದ್ದ ಲಾಕಿ ಫರ್ಗ್ಯೂಸನ್‌, "ನನ್ನಲ್ಲಿ ಶೀತದ ಲಕ್ಷಣಗಳು ಕಾಣಿಸಿಕೊಂಡಿತ್ತು. ಹಾಗಾಗಿ, ತಂಡದ ಸಹಾಯಕ ಸಿಬ್ಬಂದಿ ನನ್ನನ್ನು ಸಮರ್ಪಕವಾಗಿ ನಿರ್ವಹಿಸಿದ್ದರು. ಎಲ್ಲವೂ ಯಶಸ್ವಿಯಾಗಿಯೇ ನಡೆದಿತ್ತು. ಒಂದು ದೀನ ಪೂರ್ತಿ ಹೋಟೆಲ್‌ ಕೋಠಡಿಯಲ್ಲಿಯೇ ಕಳೆದಿದ್ದೆ  ಎಂದು ಹೇಳಿದರು.ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ ಅನುಭವ ನೀಡಿದ್ದಾಗಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT