ಧೋನಿ-ಸಾಕ್ಷಿ 
ಕ್ರಿಕೆಟ್

ಬೈಕ್ ಪಾರ್ಕಿಂಗ್ ವಿಚಾರವಾಗಿ ಪತ್ನಿ ಸಾಕ್ಷಿ ಕೈಯಲ್ಲಿ ಬೈಯಿಸಿಕೊಂಡ ಎಂಎಸ್ ಧೋನಿ

ಒಂದು ದಶಕಕ್ಕೂ ಅಧಿಕ ಸಮಯ ಕ್ರಿಕೆಟ್‌ ಅಂಗಳದಲ್ಲಿ ಆಟಗಾರರಿಗೆ ಕ್ರಿಕೆಟ್‌ ಪಾಠ ಹೇಳಿಕೊಡುತ್ತಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಬೈಕ್‌ ಪಾರ್ಕಿಂಗ್‌ ಮಾಡುವ ವಿಚಾರದಲ್ಲಿ ತಮ್ಮ ಪತ್ನಿ ಸಾಕ್ಷಿ ಕೈಯಲ್ಲಿ ಬೈಸಿಕೊಂಡಿದ್ದಾರೆ.

ನವದೆಹಲಿ: ಒಂದು ದಶಕಕ್ಕೂ ಅಧಿಕ ಸಮಯ ಕ್ರಿಕೆಟ್‌ ಅಂಗಳದಲ್ಲಿ ಆಟಗಾರರಿಗೆ ಕ್ರಿಕೆಟ್‌ ಪಾಠ ಹೇಳಿಕೊಡುತ್ತಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಬೈಕ್‌ ಪಾರ್ಕಿಂಗ್‌ ಮಾಡುವ ವಿಚಾರದಲ್ಲಿ ತಮ್ಮ ಪತ್ನಿ ಸಾಕ್ಷಿ ಕೈಯಲ್ಲಿ ಬೈಸಿಕೊಂಡಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿ ಅವರು 2019ರ ಜುಲೈ ತಿಂಗಳಿನಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಎಂ.ಎಸ್‌ ಧೋನಿ ಬ್ಯಾಟಿಂಗ್‌ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಧೋನಿ ಆಟವನ್ನು ಕಣ್ತುಂಬಿಸಿಕೊಳ್ಳಬಹುದೆಂದು ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕಳೆದ ಹಲವು ದಿನಗಳ ಹಿಂದೆಯೇ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌ ಧೋನಿ ಚೆನ್ನೈಗೆ ತೆರಳಿ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದರು. ಆದರೆ, ಕೊರೊನಾ ವೈರಸ್‌ ಭೀತಿಯಿಂದಾಗಿ ಚೆನ್ನೈ ಸೂಪರ್‌ ಕಿಂಗ್ಸ್ ತರಬೇತಿ ಶಿಬಿರವನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ, ಮಾರ್ಚ್‌ 29ರಂದು ನಡೆಯಬೇಕಿದ್ದ ಐಪಿಎಲ್‌ ಟೂರ್ನಿಯನ್ನು ಏಪ್ರಿಲ್‌ 15ಕ್ಕೆ ಮುಂದೂಡಲಾಗಿದೆ.

ರಾಂಚಿ ನಿವಾಸದ ಬಾಗಿಲು ಮುಂದೆ ಸೂಕ್ತವಲ್ಲದ ಸ್ಥಳದಲ್ಲಿ ಧೋನಿ ತಮ್ಮ ಬೈಕ್‌ ನಿಲ್ಲಿಸಿದ್ದರು. ಇದನ್ನು ಕಂಡ ಸಾಕ್ಷಿ ಕೂಲ್‌ ಕ್ಯಾಪ್ಟನ್‌ಗೆ ಕ್ಲಾಸ್ ತೆಗೆದುಕೊಂಡರು. ನಂತರ, ಈ ವೀಡಿಯೋವನ್ನುಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಾಕಿಕೊಂಡರು. ಇದಾದ ಬಳಿಕ ಧೋನಿ ತಮ್ಮ ಬೈಕ್‌ ಅನ್ನು ಬೇರೆ ಸ್ಥಳದಲ್ಲಿ ಪಾರ್ಕ್‌ ಮಾಡಿದರು. 

ಮೊದಲನೇ ಸ್ಟೋರಿಯಲ್ಲಿ ಬೈಕ್‌ ಫೋಟೊ ಹಿಡಿದು "ದಯವಿಟ್ಟು ಸರಿಯಾದ ಸ್ಥಳದಲ್ಲಿ ಬೈಕ್‌ ಅನ್ನು ನಿಲ್ಲಿಸಿ @ಮಾಹಿ,'' ಎಂದಿದ್ದರು. ನಂತರ, ಬಿಡುಗಡೆ ಮಾಡಿದ ಸಣ್ಣ ವೀಡಿಯೋ ತುಣುಕಿನಲ್ಲಿ ನಾಯಿಯ ತಲೆ ಮೇಲೆ ಧೋನಿ ಬೆರಳಾಡಿಸುವ ಮುದ್ದು ಮಾಡುತ್ತಿದ್ದ ಕಂಡು ಬಂತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!