ಕೊರೋನಾ ಲಾಕ್ ಡೌನ್: ಮನೆಯ ಕೊಠಡಿಯನ್ನೇ ಕ್ರಿಕೆಟ್ ಸ್ಟೇಡಿಯಂ ಆಗಿ ಪರಿವರ್ತಿಸಿದ ಪಾಂಡ್ಯ ಸಹೋದರರು!
ಕೊರೋನಾ ವೈರಸ್ ನಿಂದಾಗಿ ಜಾಗತಿಕ ಮಟ್ಟದ ಬಹುತೇಕ ಎಲ್ಲಾ ಕ್ರೀಡಾ ಕಾರ್ಯಕ್ರಮಗಳು ಬಹುತೇಕ ರದ್ದಿಗೊಂಡಿದೆ, ಅಥವಾ ಮುಂದೂಡಲ್ಪಟ್ಟಿವೆ. ಇತ್ತ ಭಾರತೀಯ ಕ್ರಿಕೆಟಿಗರೂ ತಮ್ಮ ಕುಟುಂಬದವರ ಜೊತೆಗೆ ಸಮಯ ಕಳೆಯುತ್ತಿದ್ದಾರೆ.
ಮುಂಬೈ: ಕೊರೋನಾ ವೈರಸ್ ನಿಂದಾಗಿ ಜಾಗತಿಕ ಮಟ್ಟದ ಬಹುತೇಕ ಎಲ್ಲಾ ಕ್ರೀಡಾ ಕಾರ್ಯಕ್ರಮಗಳು ಬಹುತೇಕ ರದ್ದಿಗೊಂಡಿದೆ, ಅಥವಾ ಮುಂದೂಡಲ್ಪಟ್ಟಿವೆ. ಇತ್ತ ಭಾರತೀಯ ಕ್ರಿಕೆಟಿಗರೂ ತಮ್ಮ ಕುಟುಂಬದವರ ಜೊತೆಗೆ ಸಮಯ ಕಳೆಯುತ್ತಿದ್ದಾರೆ.
ಆದರೆ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಇಂಡೋರ್ ಕ್ರಿಕೆಟ್ ಆಡಲು ತಮ್ಮ ಮನೆಯ ಕೊಠಡಿಯನ್ನೇ ಸ್ಟೇಡಿಯಂ ಆಗಿ ಪರಿವರ್ತಿಸಿದ್ದಾರೆ.
ಟ್ವಿಟರ್ ನಲ್ಲಿ ಇದರ ವಿಡಿಯೋ ಪೋಸ್ಟ್ ಮಾಡಿರುವ ಹಾರ್ದಿಕ್ ಪಾಂಡ್ಯ, ಎಲ್ಲರೂ ಸುರಕ್ಷಿತರಾಗಿರಿ, ಹೊರಗೆ ಹೋಗುವುದನ್ನು ತಪ್ಪಿಸಿ, ನಾನು ಮತ್ತು ನನ್ನ ಕುಟುಂಬ ಮನೆಯಲ್ಲೇ ಸಂತೋಷದಿಂದ ಇರುವಂತೆ ಇರಿ, ಮನೆಯಲ್ಲೇ ಇದ್ದು ಕೊರೋನಾ ವೈರಸ್ ಹರಡದಂತೆ ಎಚ್ಚರ ವಹಿಸಿ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.