ಕ್ರಿಕೆಟ್

ಬಿಸಿಸಿಐ ಬಾಸ್ ಗಂಗೂಲಿ ಭವಿಷ್ಯದಲ್ಲಿ ಐಸಿಸಿ ಅಧ್ಯಕ್ಷ; ಐಸಿಸಿ ಮುನ್ನಡೆಸುವ ರಾಜಕೀಯ ಕೌಶಲ್ಯ ಅವರಿಗಿದೆ: ಡೇವಿಡ್ ಗೋವೆರ್

Vishwanath S

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅನ್ನು ಮುನ್ನೆಡಸಲು ಬೇಕಾದ ಉತ್ತಮ ರಾಜಕೀಯ ಕೌಶಲವನ್ನು ಹೊಂದಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಡೇವಿಡ್ ಗೋವೆರ್ ಅಭಿಪ್ರಾಯಪಟ್ಟಿದ್ದಾರೆ. 

ಟ್ವಿಟರ್ ನಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಗ್ಲೋಫ್ಯಾನ್ಸ್ ಸಂವಾದ ವೇಳೆ, 'ಆತ ತುಂಬಾ ಒಳ್ಳೆಯ ವ್ಯಕ್ತಿ ಮತ್ತು ರಾಜಕೀಯ ಕೌಶಲಗಳನ್ನು ಹೊಂದಿದ್ದಾರೆ. ಸರಿಯಾದ ಮನೋಭಾವನ್ನು ಹೊಂದಿದ್ದಾರೆ. ಹಲವು ವಿಚಾರಗಳನ್ನು ಒಗ್ಗೂಡಿಸಿ ಉತ್ತಮ ಕೆಲಸ ಮಾಡುತ್ತಾರೆ ಎಂದು ಗೋವೆರ್ ಶ್ಲಾಘಿಸಿದ್ದಾರೆ. 

ಮುಂದುವರಿದು, ಭವಿಷ್ಯದಲ್ಲಿ ಐಸಿಸಿಯನ್ನು ಮುನ್ನಡೆಸಲು ಬೇಕಾದ ಸಾಮರ್ಥ್ಯವನ್ನು ಬಿಸಿಸಿಐನಲ್ಲಿ ಉತ್ತಮ ಕೆಲಸ ನಿರ್ವಹಿಸುವ ಮೂಲಕ ಗಳಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಬಿಸಿಸಿಐನ ಅಧ್ಯಕ್ಷರಾಗಿರುವುದು ಜಾಗತಿಕ ಕ್ರಿಕೆಟ್ ನ ಅತ್ಯಂತ ಕಠಿಣ ಕೆಲಸ. ಖಂಡಿತವಾಗಿಯೂ ನೀವು ಅನುಸರಿಸಬೇಕಾದ ತಂತ್ರಗಳಿಗೆ ಹೊಣೆಗಾರಿಕೆಯಾಗಿರಬೇಕಾಗುತ್ತದೆ. ಅಂದರೆ ಅಪಾರ ಜನಸಂಖ್ಯೆಯಿರುವ ಭಾರತದಲ್ಲಿ ಎಲ್ಲವನ್ನೂ ಹೇಳಬೇಕಾಗುತ್ತದೆ ಎಂದು ಇಂಗ್ಲೆಂಡ್ ಆಟಗಾರ ಹೇಳಿದ್ದಾರೆ.

ಸೌರಭ್ ಗಂಗೂಲಿ ಅವರಲ್ಲಿ ಉತ್ತಮ ಆಡಳಿತಗಾರನ ಎಲ್ಲಾ ಗುಣಗಳನ್ನು ಇವೆ, ಭವಿಷ್ಯದಲ್ಲಿ ಕ್ರಿಕೆಟ್‌ನ ವಿಶ್ವ ಸಂಸ್ಥೆಯಾದ ಐಸಿಸಿಯ ಅಧ್ಯಕ್ಷರಾಗಬಹುದು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಬ್ಯಾಟ್ಸ್‌ಮನ್ ಡೇವಿಡ್ ಗೋವರ್ ಅಭಿಪ್ರಾಯಪಟ್ಟಿದ್ದಾರೆ. 

ಅಭಿಮಾನಿಗಳ ಸಂವಾದಾತ್ಮಕ ಕಾರ್ಯಕ್ರಮದಲ್ಲಿ ಗೋವರ್ ಅವರು ಗಂಗೂಲಿ ಒಂದು ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಲ್ಲಿ (ಐಸಿಸಿ) ಕಾಣಿಸಿಕೊಳ್ಳಬಹುದು. ಆದರೆ ಬಿಸಿಸಿಐ ಉಸ್ತುವಾರಿ ವಹಿಸಿಕೊಳ್ಳುವುದು ಯಾವುದೇ ದಿನವೂ ದೊಡ್ಡ ಕೆಲಸ ಎಂದು ನಂಬಿದ್ದಾರೆ.

SCROLL FOR NEXT