20 ಸಾವಿರ ಡಾಲರ್ ನೀಡಿ ಮುಷ್ಫಿಕರ್ ಬ್ಯಾಟ್ ಖರೀದಿಸಿದ ಶಾಹಿದ್ 
ಕ್ರಿಕೆಟ್

20 ಸಾವಿರ ಡಾಲರ್ ನೀಡಿ ಮುಷ್ಫಿಕರ್ ಬ್ಯಾಟ್ ಖರೀದಿಸಿದ ಶಾಹಿದ್

ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹಮಾನ್ ಅವರ ಬ್ಯಾಟ್ ಅನ್ನು ಹರಾಜಿನಲ್ಲಿ ಖರೀದಿಸಿದ್ದಾರೆ.

ನವದೆಹಲಿ: ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹಮಾನ್ ಅವರ ಬ್ಯಾಟ್ ಅನ್ನು ಹರಾಜಿನಲ್ಲಿ ಖರೀದಿಸಿದ್ದಾರೆ.

ಅಫ್ರಿದಿ ಈ ಬ್ಯಾಟ್ ಅನ್ನು 20 ಸಾವಿರ ಡಾಲರ್‌ಗೆ ಖರೀದಿಸಿದ್ದು, ಅದರ ಮೊತ್ತವನ್ನು ಬಾಂಗ್ಲಾದೇಶದ ಕೊರೊನಾ ವೈರಸ್‌ನ ಪರಿಹಾರ ಕಾರ್ಯಕ್ಕಾಗಿ ಬಳಸಲಾಗುತ್ತದೆ. ಮುಷ್ಫಿಕರ್ ಅವರು 2013 ರಲ್ಲಿ ನಡೆದ ಗಾಲೆ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಈ ಬ್ಯಾಟ್ ಅನ್ನು ಬಳಸಿ, ದ್ವಿಶತಕ ಭಾರಿಸಿದ್ದರು.

ಮುಶ್ಫಿಕರ್ ರಹಮಾನ್ ಬ್ಯಾಟ್ ಕಳೆದವಾರ ಹರಾಜು ಪ್ರಕ್ರಿಯೆಗೆ ಇಡಲಾಗಿತ್ತು. ಆದರೆ ಅಫ್ರಿದಿ ಮುಶ್ಫಿಕರ್ ನ್ನು ಸಂಪರ್ಕಿಸಿದ ನಂತರ ಹರಾಜು ಪ್ರಕ್ರಿಯೆಯನ್ನು ಕೈಬಿಡಲಾಯಿತು. " ಶಾಹಿದ್ ಭಾಯ್ ವೈಯಕ್ತಿಕವಾಗಿ ನನ್ನನ್ನು ಸಂಪರ್ಕಿಸಿ ಬ್ಯಾಟ್ ನ್ನು 20,000 ಅಮೆರಿಕನ್ ಡಾಲರ್ ಗೆ ಖರೀದಿಸಲು ಆಸಕ್ತಿ ತೋರಿದರು. ಇದು ಅಚ್ಚರಿಯ ವಿಷಯವಾಗಿತ್ತು ಎಂದು ಮುಸ್ಫಿಕರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT