ಫಜಲ್ ಆರ್ ಖಲೀಲ್ 
ಕ್ರಿಕೆಟ್

ಕರ್ನಾಟಕ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಫಜಲ್ ಆರ್ ಖಲೀಲ್ ನೇಮಕ

ರಾಜ್ಯಮಟ್ಟದ ಪುರುಷರ ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆಗಾಗಿ ರಚಿಸಲಾಗುವ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕರ್ನಾಟಕದ ಮಾಜಿ ಬ್ಯಾಟ್ಸ್‌ಮನ್ ಫಜಲ್ ಆರ್ ಖಲೀಲ್ ಅವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು: ರಾಜ್ಯಮಟ್ಟದ ಪುರುಷರ ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆಗಾಗಿ ರಚಿಸಲಾಗುವ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕರ್ನಾಟಕದ ಮಾಜಿ ಬ್ಯಾಟ್ಸ್‌ಮನ್ ಫಜಲ್ ಆರ್ ಖಲೀಲ್ ಅವರನ್ನು ನೇಮಕ ಮಾಡಲಾಗಿದೆ.  ರಘುರಾಮ್ ಭಟ್ ಅವರ  ಬದಲಾವಣೆಯಿಂದಾಗಿ ಖಲೀಲ್ ಈ ಸ್ಥಾನ ಕ್ಕೆ ಏರಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ಮಂಡಳಿ ಶುಕ್ರವಾರ ತಮ್ಮ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದೆ.

ಖಲೀಲ್ ಇದಾಗಲೇ  ಆಯ್ಕೆ ಸಮಿತಿಯ ಭಾಗವಾಗಿದ್ದ ಕಾರಣ ಟೀಂ ಪಾಲಿಗೆ ಇದು ಹೊಸ ಆಯ್ಕೆಯಾಗಿರುವುದಿಲ್ಲ. . "ಒಳ್ಳೆಯ  ವಿಚಾರವೆಂದರೆ ಈ ಎಲ್ಲ ಆಟಗಾರರು, ಅದು ಕರುಣ್ ನಾಯರ್, ಮನೀಶ್ ಪಾಂಡೆ, ಕೆ.ಎಲ್. ರಾಹುಲ್ ಆಗಿರಲಿ - ನಾನು ಅವರನ್ನು  ಅಂಡರ್ -15 ದಿನಗಳಿಂದ ನೋಡಿದ್ದೇನೆ, ಹಾಗಾಗಿ ಅವರೊಂದಿಗೆ ಮಾತನಾಡಲು ಮತ್ತು  ವಿಚಾರ ವಿನಿಮಯ ನಡೆಸಲು  ನನಗೆ ಸುಲಭವಾಗಿದೆ ಮತ್ತು ಅವರು ಸಹ ಸುಲಭವಾಗಿ ನನ್ನೊಡನೆ ವ್ಯವಹರಿಸಬಹುದು. " ಖಲೀಲ್ ಹೇಳಿದ್ದಾರೆ.  

 ಅಂಡರ್ -23 ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ಖಲೀಲ್ ನೇಮಕವಾಗಿದ್ದಾರೆ.ಅಂಡರ್ -19 ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಸಮಿತಿಯ ಸದಸ್ಯ ಆನಂದ್ ಪಿ ಕಟ್ಟಿ ನೇಮಕವಾಗಿದೆ.

“ವಿವಿಧ ವಯೋಮಾನದ ಆಯ್ಕೆದಾರರನ್ನು ಹೊಂದಿರುವುದು ಒಳ್ಳೆಯದು ಇದರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತದೆ ಮತ್ತು ಅದನ್ನು ಆಯ್ಕೆ ಸಭೆಯಲ್ಲಿ ಚರ್ಚಿಸಬಹುದು. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಯುವಕರು ಯಾರೆಂದು ನಮಗೆ ತಿಳಿಯುತ್ತದೆ ಮತ್ತು  ಅವರ ಸಾಮರ್ಥ್ಯವನ್ನೂ ಅರಿತುಕೊಳ್ಲಬಹುದು. " ಖಲೀಲ್ ಹೇಳಿದರು.

ಆಯ್ಕೆ ಸಮಿತಿ

ಪುರುಷರು: ಅಧ್ಯಕ್ಷರು: ಫಜಲ್ ಆರ್ ಖಲೀಲ್. ಸದಸ್ಯರು: ಬಿ ಸಿದ್ದರಾಮು, ಆನಂದ್ ಪಿ ಕಟ್ಟಿ, ರಮೇಶ್ ಹೆಜ್ಮದಿ. ಮುಖ್ಯ ಕೋಚ್: ಯೆರೆ ಗೌಡ್, ಸಹಾಯಕ ಮತ್ತು ಬೌಲಿಂಗ್ ಕೋಚ್: ಶ್ರೀನಾಥ್ ಅರವಿಂದ್
ಮಹಿಳೆಯರು: ಅಧ್ಯಕ್ಷರು: ಡಿ ಜಯಶ್ರೀ. ಸದಸ್ಯರು: ಮುಕ್ತಾ ಅಳೆಗೇರಿ, ಲೀನಾ ಪ್ರಸಾದ್, ಪಿ.ಜೆ.ಹೇಮಲತಾ. ಕೋಚ್: ಮಮತಾ ಮಾಬೆನ್.
ಕಾರ್ಯದರ್ಶಿ ಮತ್ತು ಕನ್ವೀನರ್: ಸಂತೋಷ್ ಮೆನನ್ (ಎರಡೂ ತಂಡಗಳಿಗೆ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT