ಕ್ರಿಕೆಟ್

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲುವು ಯಾವುದೇ ಕ್ರಿಕೆಟಿಗನಿಗೆ ದೊಡ್ಡ ಸಂಗತಿ: ಇಶಾಂತ್ ಶರ್ಮ

Srinivas Rao BV

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲುವು ಯಾವುದೇ ಕ್ರಿಕೆಟಿಗನಿಗೆ ದೊಡ್ಡ ಸಂಗತಿ ಎಂದು ಭಾರತ ಕ್ರಿಕೆಟ್ ತಂಡದ ವೇಗಿ ಇಶಾಂತ್ ಶರ್ಮ ಹೇಳಿದ್ದಾರೆ. 

ಬಿಸಿಸಿಐ.tv ಯಲ್ಲಿ ಓಪನ್ ನೆಟ್ಸ್ ವಿತ್ ಮಯಾಂಕ್ ಸಂದರ್ಶನದಲ್ಲಿ ಮಾತನಾಡಿರುವ ಇಶಾಂತ್ ಶರ್ಮಾ, 2018-19 ರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. 2018-19 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ವಿರಾಟ್ ಕೊಹ್ಲಿ ನೇತೃತ್ವದಲ್ಲಿ 2-1 ಅಂತರದ ಐತಿಹಾಸಿಕ ಜಯ ಗಳಿಸಿತ್ತು. ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವುದು ಯಾವುದೇ ಕ್ರಿಕೆಟಿಗನಿಗೆ ದೊಡ್ಡ ಸಂಗತಿ. ನಾಲ್ಕು ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ನನಗೆ ಆಸ್ಟ್ರೇಲಿಯಾ ನೆಲದಲ್ಲಿ ಗೆಲ್ಲುವುದು ಎಷ್ಟು ಕಷ್ಟ ಎಂಬುದು ತಿಳಿದಿದೆ. ಆದ್ದರಿಂದ ನನ್ನ ಮಟ್ಟಿಗೂ ಆಸ್ಟ್ರೇಲಿಯಾ ವಿರುದ್ಧದ ಗೆಲುವು ಮಹತ್ವದ್ದಾಗಿದೆ ಎಂದು ಮಯಾಂಕ್ ಅಗರ್ವಾಲ್ ಶೋ ನಲ್ಲಿ ಇಶಾಂತ್ ಶರ್ಮಾ ಹೇಳಿದ್ದಾರೆ. 

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಟೂರ್ನಿಯಲ್ಲಿ 2017 ರ ಮಾದರಿಯಲ್ಲಿ ಸ್ಟೀವ್ ಸ್ಮಿತ್ ಅವರನ್ನು ಮಿಮಿಕ್ ಮಾಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಇಶಾಂತ್ ಶರ್ಮಾ, ಈಗ ನನ್ನ ಗಮನವಿರುವುದು ವಿಕೆಟ್ ಗಳನ್ನು ಉರುಳಿಸುವತ್ತ. ನನ್ನ ತಂಡಕ್ಕೆ ಹೆಚ್ಚು ಕೊಡುಗೆ ನೀಡುವುದರತ್ತ. ನನ್ನನ್ನು ಕೆಣಕದೇ ಇದ್ದರೆ ನಾನು ಆ ರೀತಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. 

ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ಬಹುನಿರೀಕ್ಷಿತ ಆಸ್ಟ್ರೇಲಿಯಾ-ಭಾರತ ನಡುವಿನ ಟೆಸ್ಟ್ ಸರಣಿ ನಿಗದಿಯಾಗಿದೆ. ಇದೇ ವೇಳೆ ಲಾಕ್ ಡೌನ್ ಹಿನ್ನೆಯಲ್ಲಿ ಕುಟುಂಬದವರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿರುವ ಇಶಾಂತ್ ಶರ್ಮಾ, ತಮ್ಮ ಎರಡು ಹೊಸ ನಾಯಿಗಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

SCROLL FOR NEXT