ಕ್ರಿಕೆಟ್

ಪ್ಲೇ ಆಫ್ 3 ಸ್ಥಾನಗಳಿಗೆ ಬೆಂಗಳೂರು ಸೇರಿ 4 ತಂಡದಿಂದ ಸ್ಪರ್ಧೆ: ಡೆಲ್ಲಿ ವಿರುದ್ಧ ಸೋತರೆ, ಆರ್‌ಸಿಬಿ ಭವಿಷ್ಯ ಏನು?

Vishwanath S

ನವದೆಹಲಿ: ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಇಂದು ತಮ್ಮ ಕೊನೆಯ ಲೀಗ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. 

ಪಂದ್ಯ ಗೆದ್ದರೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನ ಪಡೆಯಲಿದೆ ಹಾಗೂ ಸುಲಭವಾಗಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಏನಾಗಬಹುದು ಎಂಬಂತೆ ವಿಶ್ಲೇಷಣೆಯನ್ನು ಈ ಕೆಳಕಂಡಂತೆ ನೀಡಲಾಗಿದೆ. 

ಸತತ ಮೂರು ಪಂದ್ಯಗಳಿಂದ ಸೋಲು ಅನುಭವಿಸಿರುವ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ನಿರ್ಣಾಯಕ ಹಂತದಲ್ಲಿದೆ. ಇಂದು ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲು ಸಜ್ಜಾಗಿದೆ. ಡೆಲ್ಲಿ ವಿರುದ್ಧ ಗೆಲುವು ಪಡೆದರೆ, ಬೆಂಗಳೂರು ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಪಡೆಯಲಿದೆ. 

ಒಂದು ವೇಳೆ ಸೋತರೆ, ಅತ್ಯುತ್ತಮ ರನ್‌ರೇಟ್‌ ಹೊಂದಿರುವ ಸನ್‌ರಯಸರ್ಸ್ ಹೈದರಾಬಾದ್‌ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುವ ಅಗತ್ಯವಿದೆ. ಒಂದು ವೇಳೆ ಎಸ್‌ಆರ್‌ಎಚ್‌ ಗೆದ್ದರೆ, ಆರ್‌ಸಿಬಿ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆಯಲಿದೆ. 

ಸತತ ನಾಲ್ಕು ಪಂದ್ಯಗಳಿಂದ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ರಾಯಲ್‌ ಚಾಲೆಂಜರ್ಸ್ ಬೆಂಗಳೂರಿಗಿಂತ ರನ್‌ರೇಟ್‌ ಕಡಿಮೆ ಇದೆ. ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಶ್ರೇಯಸ್‌ ಅಯ್ಯರ್‌ ಬಳಗ ಆರ್‌ಸಿಬಿ ವಿರುದ್ಧ ಗೆಲುವು ಅನಿವಾರ್ಯ.

SCROLL FOR NEXT