ಯಜುವೇಂದ್ರ ಚಹಾಲ್-ಧನಶ್ರೀ ವರ್ಮಾ 
ಕ್ರಿಕೆಟ್

ಲಾಕ್ ಡೌನ್ ಲವ್: ಡ್ಯಾನ್ಸ್ ಹೇಳಿಕೊಟ್ಟ ಶಿಕ್ಷಕಿಯನ್ನೇ ಬುಟ್ಟಿಗೆ ಬೀಳಿಸಿಕೊಂಡ ಯುಜ್ವೇಂದ್ರ ಚಾಹಲ್!

ಯುಜ್ವೇಂದ್ರ ಚಾಹಲ್...! ನೋಡಲು ಸಪೂರವಾಗಿದ್ದಾರೆ.. ಆದರೆ, ಸ್ಪಿನ್ ಮೂಲಕ ಅವರು ಎಸೆಯುವ ಬಾಲಿಗೆ ಎಂತಹ ಬ್ಯಾಟ್ಸ್‌ಮನ್‌ ಗಳೂ ಗೊಂದಲಕ್ಕೊಳಗಾಗಿ ವಿಕೆಟ್ ಒಪ್ಪಿಸಬೇಕಾಗುತ್ತದೆ.

ಬೆಂಗಳೂರು: ಯುಜ್ವೇಂದ್ರ ಚಾಹಲ್...! ನೋಡಲು ಸಪೂರವಾಗಿದ್ದಾರೆ.. ಆದರೆ, ಸ್ಪಿನ್ ಮೂಲಕ ಅವರು ಎಸೆಯುವ ಬಾಲಿಗೆ ಎಂತಹ ಬ್ಯಾಟ್ಸ್‌ಮನ್‌ ಗಳೂ ಗೊಂದಲಕ್ಕೊಳಗಾಗಿ ವಿಕೆಟ್ ಒಪ್ಪಿಸಬೇಕಾಗುತ್ತದೆ. ಐಪಿಎಲ್ 2020 ಟೂರ್ನಿಯಲ್ಲಿ ಚಾಹಲ್ ಅದ್ಭುತ ಸಾಧನೆ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಪ್ರತಿನಿಧಿಸಿರುವ ಅವರು ಹಲವು ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಈ ವರ್ಷದ ಲಾಕ್‌ ಡೌನ್‌ನಲ್ಲಿ ಅವರು ಧನಶ್ರೀ ವರ್ಮಾ ಎಂಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. 

ಆರ್‌ ಸಿ ಬಿ ಇನ್ಸೈಡರ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಲವ್ ಸ್ಟೋರಿ ಕುರಿತು ಆಸಕ್ತಿದಾಯಕ ಅಂಶಗಳನ್ನು ಹೊರಹಾಕಿದ್ದಾರೆ. ಪತ್ನಿ ಧನಶ್ರೀ ವರ್ಮಾ ಅವರೊಂದಿಗಿನ ಪ್ರೇಮ ಕಥೆಯನ್ನು ವಿವರಿಸಿದ್ದಾರೆ. " ಚಿಕ್ಕಂದಿನಿಂದಲೂ ನನಗೆ ಡ್ಯಾನ್ಸ್ ಎಂದರೆ ಬಹಳ ಇಷ್ಟ... ಭಾಂಗ್ರಾ ಸೇರಿ ಹಲವು ರೀತಿಯ ನೃತ್ಯ ಕಲಿಯಬೇಕೆಂಬ ಆಸೆ ಹೊಂದಿದ್ದೆ, ಹಾಗಾಗಿ ನೃತ್ಯ ಶಾಲೆಯೊಂದಕ್ಕೆ ಸೇರಿಕೊಂಡೆ. ಅಲ್ಲಿಯೇ ಧನಶ್ರೀ ವರ್ಮಾ ಪರಿಚಯವಾಯಿತು. ಆಕೆ ಅಲ್ಲಿ ನೃತ್ಯ ಶಿಕ್ಷಕಿ. ನೃತ್ಯ ಪಾಠಗಳನ್ನು ನಮಗೆ ಕಲಿಸುತ್ತಿದ್ದರು. ಹಾಗಾಗಿ ನಮ್ಮ ನಡುವಣ ಪರಿಚಯ, ನಂತರ ಪ್ರೇಮಕ್ಕೆ ತಿರುಗಿತು. ನಾವಿಬ್ಬರು ಒಬ್ಬರಿಗೊಬ್ಬರು ಸಂಪೂರ್ಣ ಅರಿತುಕೊಂಡೆವು.. ಎರಡೂವರೆ ತಿಂಗಳ ನಂತರ ಧನಶ್ರೀ ವರ್ಮಾ ಮದುವೆಯಾಗುವುದಾಗಿ ಮನೆಯಲ್ಲಿ ತಂದೆ ತಾಯಿಗೆ ತಿಳಿಸಿ ಒಪ್ಪಿಗೆ ಪಡೆದುಕೊಂಡೆ.. ಆ ರೀತಿ ತಮ್ಮ ಪ್ರೇಮ ವಿವಾಹ ನಡೆಯಿತು ಎಂದು ಯುಜ್ವೇಂದ್ರ ಚಾಹಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ