ಕ್ರಿಕೆಟ್

ವೃದ್ಧಿಮಾನ್ ಸಹಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಫಿಟ್ ಆಗಲಿದ್ದಾರೆ: ಸೌರವ್ ಗಂಗೂಲಿ

Nagaraja AB

ಮುಂಬೈ: ಗಾಯದ ಸಮಸ್ಯೆಯಿಂದ  ಚಿಕಿತ್ಸೆ ಪಡೆಯುತ್ತಿರುವ ವಿಕೆಟ್ ಕೀಪರ್ ವೃದ್ಧಿಮನ್ ಸಹಾ ಬಗ್ಗೆ ಯಾವುದೇ ಅನುಮಾನವಿಲ್ಲಾ, ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಫಿಟ್ ಆಗಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಐಪಿಲ್ ವೇಳೆಯಲ್ಲಿ ಮಂಡಿರಜ್ಜು ಗಾಯದಿಂದಾಗಿ ಫ್ಲೇ ಆಫ್ ಪಂದ್ಯಗಳಿಂದ ಹೊರಗುಳಿದಿದ್ದ ವೃದ್ಧಿ ಮನ್ ಸಹಾ, ಟೀಂ ಇಂಡಿಯಾದ ಉತ್ತಮ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ನವೆಂಬರ್ 27ರಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಟೂರ್ನಿಯಲ್ಲಿ ಶಹಾ ಆಡುವ ಬಗ್ಗೆ ತಡವಾಗಿ ತಿಳಿಸುವುದಾಗಿ ಬಿಸಿಸಿಐ ಕಳೆದ ವಾರ ಹೇಳಿಕೆ ನೀಡಿತ್ತು. 

ಆಟಗಾರರಿಗೆ ಗಾಯದ ಸಮಸ್ಯೆ ನಿರ್ವಹಣೆಯಲ್ಲಿ ಬಿಸಿಸಿಐ ವಿರುದ್ಧದ ಟೀಕೆಗಳನ್ನು ನಿರಾಕರಿಸಿರುವ ಗಂಗೂಲಿ, ಬಿಸಿಸಿಐ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದು ಜನರಿಗೆ ಗೊತ್ತಿಲ್ಲ. ವೃದ್ಧಿ ಮನ್ ಸಹಾ ಅವರಿಗೆ ಗಾಯವಾಗಿರುವುದು ಬಿಸಿಸಿಐ ತರಬೇತಿದಾರರು, ಪಿಜಿಸಿಯೋ ಅವರಿಗೆ ಗೊತ್ತಿದೆ. ವೃದ್ಧಿಮನ್ ಸಹಾ ಟೆಸ್ಟ್ ಪಂದ್ಯಗಳಿಗೆ ಫಿಟ್ ಆಗಲಿದ್ದು, ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.

ರೋಹಿತ್ ಶರ್ಮಾ ಅವರ ವಿಚಾರದಲ್ಲೂ ಗಾಯದ ಸಮಸ್ಯೆ ತೀವ್ರ ಚರ್ಚೆಗೆ ಒಳಪಟ್ಟಿತ್ತು. ಐಪಿಎಲ್ ವೇಳೆಯಲ್ಲಿ ತೀವ್ರ ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಪರಿಗಣಿಸುತ್ತಿಲ್ಲ ಎನ್ನಲಾಗಿತ್ತು. ಆದರೆ, ರೋಹಿತ್ ಮುಂದಾಳತ್ವದ  ಮುಂಬೈ ಇಂಡಿಯನ್ಸ್  ಐದನೇ ಬಾರಿಗೆ  ಟ್ರೋಫಿ ಎತ್ತಿಹಿಡಿದು ದಾಖಲೆ ಮಾಡಿತ್ತು. ತದ ನಂತರ ಆಸ್ಟ್ರೇಲಿಯಾ ಸರಣಿಯ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದುಕೊಂಡರು.

ರೋಹಿತ್ ಶರ್ಮಾ ಶೇ. 70 ರಷ್ಟು ಫಿಟ್ ಆಗಿದ್ದಾರೆ. ಅದ್ದರಿಂದಲೇ ಅವರು ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಆಡುತ್ತಿಲ್ಲ. ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡುತ್ತಿರುವುದಾಗಿ ಸೌರವ್ ಗಂಗೂಲಿ ತಿಳಿಸಿದ್ದಾರೆ.

SCROLL FOR NEXT