ಕ್ರಿಕೆಟ್

ಐಪಿಎಲ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ ಧವನ್: ಸಿಎಸ್ ಕೆ ವಿರುದ್ಧ ಡೆಲ್ಲಿ ಗೆ 5 ವಿಕೆಟ್ ಗಳ ಜಯ 

Srinivas Rao BV

ಶಾರ್ಜಾ: ಶಾರ್ಜಾದಲ್ಲಿ ಅ.17 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ ಮನ್ ಶಿಖರ್ ಧವನ್ ಚೊಚ್ಚಲ ಶತಕ ಭಾರಿಸಿದ್ದು, ತಂಡದ ಭರ್ಜರಿ ಗೆಲುವಿಗೆ ನೆರವಾಗಿದ್ದಾರೆ. 

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 180 ರನ್ ಗಳ ಟಾರ್ಗೆಟ್ ನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪೃಥ್ವಿ ಶಾ ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಎಡವಿತ್ತು. ಆದರೆ ಶಿಖರ್ ಧವನ್ ಸ್ಫೋಟಕ 100 ರನ್ (58 ಎಸೆತ) ಗಳಿಂದಾಗಿ ತಂಡದ ಗೆಲುವಿನ ಹಾದಿ ಸುಗಮವಾಯಿತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ಜಯ ಗಳಿಸಿದೆ. 

ಶಿಖರ್ ಧವನ್ ಅವರು ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಶತಕ ದಾಖಲಿಸಿದ್ದು ಐಪಿಎಲ್ ನ ಇತಿಹಾಸದಲ್ಲೇ ಮೊದಲ ಬಾರಿಗೆ 101 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈ ತಂಡದ ಡಿಎಲ್ ಚಹಾರ್ 18 ರನ್ ನೀಡಿ 2 ವಿಕೆಟ್ ಗಳಿಸಿದರು.    

SCROLL FOR NEXT