ಕ್ರಿಕೆಟ್

ಐಪಿಎಲ್ 2020: ರಾಣಾ, ಮಂದೀಪ್‌ ಕ್ರೀಡಾ ಬದ್ದತೆಯನ್ನು ಶ್ಲಾಘಿಸಿದ ಸಚಿನ್‌

Lingaraj Badiger

ದುಬೈ: ಐಪಿಎಲ್ 2020 ರ ಅಂಗವಾಗಿ ಶನಿವಾರ ನಡೆದ ಡಬಲ್ ಹೆಡರ್ ಪಂದ್ಯಗಳಲ್ಲಿ ಕೋಲ್ಕತಾ ದೆಹಲಿಯನ್ನು ಮತ್ತು ಪಂಜಾಬ್ ಸನ್‌ರೈಸರ್ಸ್ ತಂಡವನ್ನು ಸೋಲಿಸಿತು.

ನಿತೀಶ್ ರಾಣಾ ಹಾಗೂ ಮಂದೀಪ್‌ ಸಿಂಗ್‌ ಅವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡ ನೋವಿನ ಹೊರತಾಗಿಯೂ ಪ್ರತ್ಯೇಕ ಪಂದ್ಯಗಳಲ್ಲಿ ಇಬ್ಬರು ಆಟಗಾರರು ಕಣಕ್ಕೆ ಇಳಿಯುವ ಮೂಲಕ ಕ್ರೀಡೆ ಮೇಲಿನ ಬದ್ದತೆಯನ್ನು ಪ್ರದರ್ಶಿಸಿದರು ಹಾಗೂ ಎಲ್ಲರ ಪ್ರಶಂಸೆಗೆ ಪಾತ್ರರಾದರು

ಕ್ಯಾನ್ಸರ್‌ನಿಂದಾಗಿ ಚಿಕ್ಕಪ್ಪನ ಸಾವಿನ ಹೊರತಾಗಿಯೂ ಕೋಲ್ಕತಾ ನೈಟ್‌ ರೈಡರ್ಸ್ ಪರ ಓಪನರ್ ಆಗಿ ಅಖಾಡಕ್ಕೆ ಇಳಿದ ನಿತೀಶ್ ರಾಣಾ ದೆಹಲಿ ವಿರುದ್ಧ ಅದ್ಭುತ ಆಟವಾಡಿದರು. ಪಂಜಾಬ್ ಕ್ರಿಕೆಟಿಗ ಮಂದೀಪ್‌ ಸಿಂಗ್‌ ಅವರ ತಂದೆ ಶುಕ್ರವಾರ ನಿಧನರಾದರು. ಈ ನೋವಿನ ನಡುವೆಯೂ ಅವರು ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಮಯಾಂಕ್‌ ಬದಲು ಆರಂಭಿಕನಾಗಿ ಕಣಕ್ಕೆ ಇಳಿದರು.

ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ನೋವಿನಲ್ಲೂ ನಿತೀಶ್‌ ರಾಣಾ ಹಾಗೂ ಮಂದೀಪ್‌ ಸಿಂಗ್‌ ಅವರು ಕಣಕ್ಕೆ ಇಳಿಯುವ ಮೂಲಕ ಕ್ರೀಡೆ ಮೇಲಿನ ಬದ್ದತೆಯನ್ನು ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಅವರು ಶ್ಲಾಘಿಸಿದ್ದಾರೆ.

ಪ್ರೀತಿಪಾತ್ರರನ್ನು ಕಳೆದುಕೊಂಡಿರುವುದು ನೋವುಂಟು ಮಾಡುತ್ತದೆ. ಅವರಿಗೆ ವಿದಾಯ ಹೇಳಲು ಸಾಧ್ಯವಾಗದಿರುವುದು ಇನ್ನಷ್ಟು ನೋವುಂಟು ಮಾಡುತ್ತದೆ. ಮಂದೀಪ್ ಸಿಂಗ್ ಹಾಗೂ ನಿತೀಶ್ ರಾಣಾ ಪರ ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಸದಸ್ಯರು ದುಃಖದಿಂದ ಶೀಘ್ರ ಹೊರ ಬರಲಿ. ಇಂದು ಪಂದ್ಯವನ್ನು ಆಡಿದ್ದಕ್ಕಾಗಿ ಇಬ್ಬರಿಗೂ ಹ್ಯಾಟ್ಸ್ ಆಫ್. "ಚೆನ್ನಾಗಿ ಆಡಿದ್ದಾರೆ" ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

SCROLL FOR NEXT