ಶ್ರೀಕಾಂತ್ 
ಕ್ರಿಕೆಟ್

ಆಸ್ಟ್ರೇಲಿಯಾ ಪ್ರವಾಸಕ್ಕೆ ಕೆಎಲ್ ರಾಹುಲ್ ಆಯ್ಕೆ ಪ್ರಶ್ನಿಸಿದ್ದ ಸಂಜಯ್ ಮಂಜ್ರೇಕರ್ ಗೆ ಶ್ರೀಕಾಂತ್ ತಿರುಗೇಟು

ಆಸ್ಟ್ರೇಲಿಯಾದ ವಿರುದ್ಧದ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ಆಯ್ಕೆಯನ್ನು ಪ್ರಶ್ನಿಸಿದ್ದ ಮಾಜಿ ಕ್ರಿಕೆಟಿಗ ಹಾಗೂ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಗೆ ಮಾಜಿ ಕ್ರಿಕೆಟಿಗ ಶ್ರೀಕಾಂತ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಆಸ್ಟ್ರೇಲಿಯಾದ ವಿರುದ್ಧದ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ಆಯ್ಕೆಯನ್ನು ಪ್ರಶ್ನಿಸಿದ್ದ ಮಾಜಿ ಕ್ರಿಕೆಟಿಗ ಹಾಗೂ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಗೆ ಮಾಜಿ ಕ್ರಿಕೆಟಿಗ ಶ್ರೀಕಾಂತ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ 

ಐಪಿಎಲ್ ನಲ್ಲಿ ಆಡುತ್ತಿರುವ ಕೆಎಲ್ ರಾಹುಲ್ ನ್ನು ಡಿಸೆಂಬರ್-ಜನವರಿ ತಿಂಗಳಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಡಲು ಕೆಎಲ್ ರಾಹುಲ್ ನ್ನು ಆಯ್ಕೆ ಮಾಡಲಾಗಿದೆ. 

ಆದರೆ ಐಪಿಎಲ್ ಪ್ರದರ್ಶನದ ಆಧಾರದಲ್ಲಿ ಟೆಸ್ಟ್ ಪಂದ್ಯಕ್ಕೆ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿರುವುದು ಕೆಟ್ಟ ಪದ್ಧತಿಗೆ ನಾಂದಿ ಹಾಡಿದಂತೆ ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದರು. 

ಇದಕ್ಕೆ ಮಾಜಿ ಕ್ರಿಕೆಟಿಗ ಶ್ರೀಕಾಂತ್ ತಮ್ಮ ಚೀಕಿ ಚೀಕಾ ಎಂಬ ಯೂಟ್ಯೂಬ್ ಚಾನಲ್ ನ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಪ್ರಶ್ನೆ ಮಾಡುವುದು ಮಂಜ್ರೇಕರ್ ಅವರ ಕೆಲಸ, ಆದ್ದರಿಂದ ಅವರನ್ನು ಏಕಾಂಗಿಯಾಗಿ ಬಿಟ್ಟುಬಿಡಿ ಎಂದು ಹೇಳಿದ್ದಾರೆ.

ಟೆಸ್ಟ್ ಸರಣೆಗೆ ಕೆಎಲ್ ರಾಹುಲ್ ಆಯ್ಕೆಯನ್ನು ಪ್ರಶ್ನಿಸುವುದು ಸರಿಯಲ್ಲ. ಟೆಸ್ಟ್ ಗಳಲ್ಲಿಯೂ ಕೆಎಲ್ ರಾಹುಲ್ ಉತ್ತಮವಾಗಿ ಆಡಿದ್ದಾರೆ. ನಾನು ಮಂಜ್ರೇಕರ್ ಮಾತನ್ನು ಒಪ್ಪುವುದಿಲ್ಲ. ಕೇವಲ ವಿವಾದ ಸೃಷ್ಟಿ ಮಾಡುವುದಕ್ಕಾಗಿ ಪ್ರಶ್ನೆಗಳನ್ನು ಕೇಳಬಾರದು, ಕೆಎಲ್ ರಾಹುಲ್ ಎಲ್ಲಾ ಫಾರ್ಮಾಟ್ ಗಳಲ್ಲೂ ಅತ್ಯುತ್ತಮವಾಗಿ ಆಡಿದ್ದಾರೆ, ಅವರ ಟೆಸ್ಟ್ ದಾಖಲೆಗಳನ್ನು ಪರಿಶೀಲಿಸಿ ಎಂದು ಶ್ರೀಕಾಂತ್ ಹೇಳಿದ್ದಾರೆ.

ಮುಂಬೈ ಕ್ರಿಕೆಟರ್ ಗಳ ಮೇಲೆಯಷ್ಟೇ ಅಲ್ಲದೇ ದೇಶದ ಬೇರೆ ಭಾಗಗಳಿಂದ ಬರುವ ಕ್ರಿಕೆಟರ್ ಗಳ ಬಗ್ಗೆಯೂ ಗಮನಹರಿಸಿ ಎಂದು, ಮುಂಬೈ ನ ಹೊರತಾಗಿಯೂ ಯೋಚನೆ ಮಾಡಿ ಎಂದು ಸಂಜಯ್ ಮಂಜ್ರೇಕರ್ ಗೆ ಶ್ರೀಕಾಂತ್ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಗೆ ತೀವ್ರ ಹಿನ್ನಡೆ: ಇರಾನ್ ವಿರುದ್ಧ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ!

ಯಾರಾಗಲಿದ್ದಾರೆ ಭಾರತದ ಮುಂದಿನ CDS?: ಇಲ್ಲಿದೆ ಮಾಹಿತಿ

KD ಚಿತ್ರ ವಿವಾದ: 'ಅನುವಾದ ಮಾತ್ರ ನನ್ನದು.. ಹಾಡು ಪ್ರೇಮ್ ಅವರದ್ದು..' 'ಇದೊಂದರಿಂದ ಅವಮಾನವಾಗುತ್ತಿದೆ'..: ಗೀತ ರಚನೆಕಾರ ಶಾಕಿಂಗ್ ಹೇಳಿಕೆ

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ?: ಸಂತ್ರಸ್ತೆಯ ಮಗಳ ಮೇಲೂ ಕಣ್ಣು, ಆಡಿಯೋ-ವಿಡಿಯೋ ವೈರಲ್..! ಅಮಾನತು

KD ಚಿತ್ರಕ್ಕೆ ಆರಂಭದಲ್ಲೇ ವಿಘ್ನ; ಹಾಡಿಗೆ ನಿರ್ಬಂಧ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಮಹಿಳಾ ಆಯೋಗ ಪತ್ರ.. ಇಷ್ಟಕ್ಕೂ ಆಗಿದ್ದೇನು?

SCROLL FOR NEXT