ಅಲಿಮ್ ದಾರ್ 
ಕ್ರಿಕೆಟ್

ಏಕದಿನ ಕ್ರಿಕೆಟ್: ಭಾನುವಾರ ದಾಖಲೆ ಸೃಷ್ಟಿಸಲಿರುವ ಅಂಪೈರ್ ಅಲಿಮ್ ದಾರ್

ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಅಲಿಮ್ ದಾರ್ ಅವರು ಅಂಪೈರ್ ಆಗಿ ಮೈದಾನಕ್ಕೆ ಇಳಿಯುತ್ತಿದ್ದಂತೆ ರೂಡಿ ಕೊರ್ಟ್‌ಜೆನ್‌ರ ಹೆಚ್ಚಿನ ಏಕದಿನ ಪಂದ್ಯಗಳ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.

ಲಾಹೋರ್: ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಅಲಿಮ್ ದಾರ್ ಅವರು ಅಂಪೈರ್ ಆಗಿ ಮೈದಾನಕ್ಕೆ ಇಳಿಯುತ್ತಿದ್ದಂತೆ ರೂಡಿ ಕೊರ್ಟ್‌ಜೆನ್‌ರ ಹೆಚ್ಚಿನ ಏಕದಿನ ಪಂದ್ಯಗಳ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. 

ಅಲಿಮ್ ಅವರಿಗೆ ಇದು 210ನೇ ಏಕದಿನ ಪಂದ್ಯ. ಅಂಪೈರಿಂಗ್ ಆಗುವ ಮೊದಲು ಆಲ್ರೌಂಡರ್ ಆಗಿ ಒಂದು ದಶಕಕ್ಕೂ ಹೆಚ್ಚು ಕಾಲ ಪಾಕಿಸ್ತಾನದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. 

52 ವರ್ಷದ ಅವರು ತವರಿನಲ್ಲಿ ಶ್ರೀಲಂಕಾ ವಿರುದ್ಧ ಫೆಬ್ರವರಿ 2000ರಲ್ಲಿ ಗುಜ್ರಾನ್ವಾಲಾ ಪಂದ್ಯವೊಂದರಲ್ಲಿ ಅಂಪೈರ್ ಆಗಿ ಕೆಲಸ ಆರಂಭಿಸಿದರು.

ಮಾಜಿ ಅಂತಾರಾಷ್ಟ್ರೀಯ ಅಂಪೈರ್ ಆಗಿರುವ ದಕ್ಷಿಣ ಆಫ್ರಿಕಾದ ರೂಡಲ್ಫ್ ಎರಿಕ್ ಕೊರ್ಟ್ಜೆನ್ 209 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ