ಕ್ರಿಕೆಟ್

ಐಪಿಎಲ್-2020: ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಅಂಪೈರ್ ಗೆ ಕೊಟ್ಬಿಡಿ ಅಂದಿದ್ದೇಕೆ ವಿರೇಂದ್ರ ಸೆಹ್ವಾಗ್?

Srinivas Rao BV

ಐಪಿಎಲ್-2020 ಟೂರ್ನಿಯ ಸೆ.21 ರ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್- ಕಿಂಗ್ಸ್ XI ಪಂಜಾಬ್ ತಂಡವನ್ನು ಮಣಿಸಿದ್ದು, ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆಯೇ ವಿರೇಂದ್ರ ಸೆಹ್ವಾಗ್ ಅವರ ಟ್ವೀಟ್ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ. 

ಸೂಪರ್ ಓವರ್ ನಲ್ಲಿ ದೆಹಲಿ ತಂಡ ಗೆಲ್ಲುವುದಕ್ಕೂ ಮುನ್ನ ಕಿಂಗ್ಸ್ XI ಪಂಜಾಬ್ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಸಮಬಲ ಸಾಧಿಸಿತ್ತು. ಈ ಬಳಿಕವಷ್ಟೇ ಸೂಪರ್ ಓವರ್ ನಡೆಯಿತು.

ಇದಕ್ಕೂ ಮುನ್ನ ಕೇವಲ ಒಂದು ರನ್ ನಿಂದಾಗಿ ಪಂದ್ಯ ಸಮಬಲ ಸಾಧಿಸಿತ್ತು. ಕಿಂಗ್ಸ್ XI ಪಂಜಾಬ್ ನ ಆಟಗಾರ ಕ್ರಿಸ್ ಜೋರ್ಡಾನ್ ಅವರ ರನ್ ಔಟ್ ವಿಷಯದಲ್ಲಿ ಬಹುದೊಡ್ಡ ಪ್ರಮಾದ ನಡೆದಿತ್ತು. ಬ್ಯಾಟ್ ಕ್ರೀಸ್ ನಲ್ಲಿದ್ದರೂ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು ಪರಿಣಾಮ ಪಂದ್ಯದ ದಿಕ್ಕೇ ಬದಲಾಯಿತು. ಕಿಂಗ್ಸ್ XI ಪಂಜಾಬ್ ನ ಸೋಲಿನ ಬೆನ್ನಲ್ಲೆ ಸೆಹ್ವಾಗ್ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಅಂಪೈರ್ ನ್ನು ಟೀಕಿಸಿದ್ದಾರೆ. 

ಈ ಪಂದ್ಯದಲ್ಲಿ ಪಂದ್ಯಪುರುಷೋತ್ತಮ ಪ್ರಶಸ್ತಿ ಆಯ್ಕೆಯನ್ನು ನಾನು ಒಪ್ಪುವುದಿಲ್ಲ. ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕಾದ್ದು ತಪ್ಪು ತೀರ್ಪು ನೀಡಿದ್ದ ಅಂಪೈರ್ ಗೆ ಎಂದು ಸೆಹ್ವಾಗ್ ವ್ಯಂಗ್ಯವಾಗಿ ಟ್ವೀಟ್ ಮಾಡಿ ಅಂಪೈರ್ ನ ತಪ್ಪು ನಿರ್ಧಾರವನ್ನು ಟೀಕಿಸಿದ್ದಾರೆ. 

SCROLL FOR NEXT