ಕ್ರಿಕೆಟ್

ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಮತ್ತೆ ಕೆಳ ಕ್ರಮಾಂಕದಲ್ಲಿ ಆಡಿದ್ದೇಕೆಂದು ಕಾರಣ ತಿಳಿಸಿದ ಧೋನಿ

Manjula VN

ನವದೆಹಲಿ: ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಮತ್ತೆ ಕೆಳ ಕ್ರಮಾಂಕದಲ್ಲಿ ಆಡಿದ್ದೇಕೆಂಬ ಕಾರಣವನ್ನು ಚೆನ್ನೈ ಸೂಪರ್ ಕಿಂಗ್ಸ್ ಪರ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಹೇಳಿದ್ದಾರೆ. 

ಮಂಗಳವಾರ ರಾತ್ರಿ ರಾಜಸ್ಥಾನ್‌ ರಾಯಲ್ಸ್ ನೀಡಿದ್ದ 217 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪರ ನಾಯಕ ಮಹೇಂದ್ರ ಸಿಂಗ್‌ ಧೋನಿ ಮೊದಲನೇ ಹಣಾಹಣಿಯಂತೆ ಈ ಪಂದ್ಯದಲ್ಲಿಯೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವ ಮೂಲಕ ಅಚ್ಚರಿ ಮೂಡಿಸಿದರು. ಅಂತಿಮವಾಗಿ ಪಂದ್ಯದಲ್ಲಿ ಸಿಎಸ್‌ಕೆ 16 ರನ್‌ ಗಳಿಂದ ಸೋಲು ಅನುಭವಿಸಿತ್ತು.

ಚೆನ್ನೈ ಫ್ರಾಂಚೈಸಿ ಒಂದು ಹಂತದಲ್ಲಿ 9 ಓವರ್‌ಗಳಿಗೆ 77 ರನ್‌ ಗಳಿಸಿ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಪ ಮ್ಯಾಚ್‌ ಫಿನಿಷ್‌ ಮಾಡಲು ಎಂಎಸ್‌ ಧೋನಿಗೆ ವೇದಿಕೆ ಸಿದ್ದವಾಗಿದೆ ಎಂದೇ ಭಾವಿಸಲಾಗಿತ್ತು. ಆದರೆ, ಧೋನಿ, ಋತುರಾಜ್‌ ಗಾಯಕ್ವಾಡ್‌ ಹಾಗೂ ಕೇದಾರ್ ಜಾಧವ್‌ ಅವರನ್ನು ತಮಗಿಂತ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದರು.

ಪಂದ್ಯದ ಬಳಿಕ ತಾವು ಏಳನೇ ಕ್ರಮಾಂಕಕ್ಕೆ ಮೀಸಲಾಗಿದ್ದ ಬಗ್ಗೆ ವಿವರಿಸಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ, ನಾನು ದೀರ್ಘಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದೆ. ಹಾಗಾಗಿ, ಇತರರಿಗೆ ಹೆಚ್ಚು ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಂಡೆ ಎಂದು ಹೇಳಿದರು. 

ಸ್ಯಾಮ್‌ ಕರನ್‌ ನಾಲ್ಕನೇ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಿರ್ಣಾಯಕ ಪ್ರದರ್ಶನ ತೋರಿದ್ದರು.

SCROLL FOR NEXT