ಕ್ರಿಕೆಟ್

ನೇರವಾಗಿ ಬಯೋ-ಬಬಲ್ ಪ್ರವೇಶಿಸಿದ ಪಡಿಕಲ್ ವಿರುದ್ಧ ಧ್ವನಿ ಎತ್ತಿದ ಇತರ ತಂಡಗಳು

Lingaraj Badiger

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕಲ್ ಅವರು ಕೊರೋನಾ ಸೋಂಕಿಗೆ ತುತ್ತಾಗಿ, ಮನೆಯಲ್ಲಿ ಕ್ವಾರಂಟೈನ್ ಮುಗಿಸಿಕೊಂಡು ನೇರವಾಗಿ ಬಂದು ಬಯೋ-ಬಬಲ್ ವ್ಯವಸ್ಥೆಯನ್ನು ತಲುಪಿದ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಉಳಿದ ತಂಡಗಳು ಬೇಸರ ವ್ಯಕ್ಯಪಡಿಸಿವೆ.

ಪಡಿಕಲ್ ಅವರು ಕಡ್ಡಾಯ ಏಳು ದಿನಗಳ ಸಂಪರ್ಕತಡೆಗೆ ಒಳಗಾಗದೆ ನೇರವಾಗಿ ಬಯೋ ಬಬಲ್‌ಗೆ ಪ್ರವೇಶಿಸಿದರ ಬಗ್ಗೆ ತಂಡಗಳು ಪ್ರಶ್ನೆ ಎತ್ತಿವೆ. 

ಫ್ರಾಂಚೈಸಿಯ ಅಧಿಕಾರಿಯೊಬ್ಬರು, "ಮನೆಯಲ್ಲಿ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸುವುದಾದರೆ, ನಮ್ಮ ತಂಡದ ಅನೇಕ ಸದಸ್ಯರಿಗೆ ಇದರ ಪ್ರಯೋಜನ ಸಿಗಬೇಕು” ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಆರ್‌ ಸಿಬಿ ತಂಡ, ಐಪಿಎಲ್ ಪ್ರೋಟೋಕಾಲ್ ಗಳನ್ನು ಅನುಸರಿಯೇ ಪಡಿಕಲ್ ಅವರಿಗೆ ಬಯೋ-ಬಬಲ್ ನಲ್ಲಿ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಪಡಿಕಲ್ ಅವರಲ್ಲಿ ಕೊರೋನಾ ಸೋಂಕು ಇಲ್ಲದಿರುವ ಬಗ್ಗೆ ಖಚಿತ ಪಡಿಸಿಕೊಂಡು, ಮೂರು ಪರೀಕ್ಷೆಗಳ ವರದಿಯ ಆಧಾರದ ಮೇಲೆ ಮತ್ತು ನಾವು ಬಿಸಿಸಿಐನ ಎಲ್ಲಾ ನಿಯಮಗಳನ್ನು ಪಾಲಿಸಿದ್ದೇವೆ ಎಂದು ಆರ್‌ಸಿಬಿ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾರ್ಚ್ 22 ರಂದು ಪಡಿಕಲ್ ಅವರಿಗೆ ಕೊರೋನಾಗೆ ಸೋಂಕು ತಗುಲಿದೆಯೆಂದು ಆರ್‌ಸಿಬಿ ದಢಪಡಿಸಿತು ಮತ್ತು ನಂತರ ಅವರನ್ನು ಹೋಮ್ ಕ್ವಾಂಟೈನ್‌ ನಲ್ಲಿ ಇರಿಸಲಾಗಿತ್ತು.

SCROLL FOR NEXT