ರಾಹುಲ್ ದ್ರಾವಿಡ್, ಧೋನಿ 
ಕ್ರಿಕೆಟ್

ಧೋನಿ ಮೇಲೆ ಕೋಪಗೊಂಡಿದ್ದರಂತೆ ರಾಹುಲ್ ದ್ರಾವಿಡ್: ಸೆಹ್ವಾಗ್ ನೆನಪು

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್,ಕೋಪಗೊಂಡ ನಿದರ್ಶನಗಳಿಲ್ಲ. ಆದರೆ, ಒಂದು ಬಾರಿ ಮಹೇಂದ್ರ ಸಿಂಗ್ ಧೋನಿ ಮೇಲೆ ಕೋಪಗೊಂಡಿದ್ದರಂತೆ. ಇದನ್ನು ವಿರೇಂದ್ರ ಸೆಹ್ವಾಗ್ ನೆನಪು ಮಾಡಿಕೊಂಡಿದ್ದಾರೆ.

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್,ಕೋಪಗೊಂಡ ನಿದರ್ಶನಗಳಿಲ್ಲ. ಆದರೆ, ಒಂದು ಬಾರಿ ಮಹೇಂದ್ರ ಸಿಂಗ್ ಧೋನಿ ಮೇಲೆ ಕೋಪಗೊಂಡಿದ್ದರಂತೆ. ಇದನ್ನು ವಿರೇಂದ್ರ ಸೆಹ್ವಾಗ್ ನೆನಪು ಮಾಡಿಕೊಂಡಿದ್ದಾರೆ.

ಇತ್ತೀಚಿಗೆ  ಕ್ರೆಡ್ ಆ್ಯಪ್ ಜಾಹಿರಾತಿನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿರುವ ರಾಹುಲ್ ದ್ರಾವಿಡ್ ಕೋಪ ಕುರಿತು ಸೆಹ್ವಾಗ್ ಕೇಳಿದಾಗ, 2006ರಲ್ಲಿ ಪಾಕಿಸ್ತಾನದಲ್ಲಿ ಏಕದಿನ ಪಂದ್ಯವೊಂದರ ವೇಳೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಮೇಲೆ ದ್ರಾವಿಡ್ ಕೋಪಗೊಂಡಿದ್ದರು ಎಂದು ತಿಳಿಸಿದರು.

ದ್ರಾವಿಡ್ ಕೋಪಗೊಂಡಿದ್ದನ್ನು ನಾನು ನೋಡಿದ್ದೇನೆ. ಪಾಕಿಸ್ತಾನದಲ್ಲಿ ಏಕದಿನ ಕ್ರಿಕೆಟ್ ಪಂದ್ಯ ಆಡುವಾಗ ಮಹೇಂದ್ರ ಸಿಂಗ್ ಧೋನಿ ಹೊಸಬರಾಗಿದ್ದರು. ಶಾಟ್ ಹೊಡೆದ ಧೋನಿ, ಕ್ಯಾಚ್ ನೀಡಿದ್ದರು. ಆಗ ದ್ರಾವಿಡ್ ಧೋನಿ ಮೇಲೆ ಕೋಪಗೊಂಡರು. 'ನೀವು ಆಡುವ ರೀತಿ ಇದೆಯೇ? ನೀವು ಆಟವನ್ನು ಫಿನಿಶ್ ಮಾಡಬೇಕಿತ್ತು ಎಂದು ಇಂಗ್ಲೀಷ್ ನಲ್ಲಿ ಹೇಳುತ್ತಾ ದ್ರಾವಿಡ್ ಕೋಪಗೊಂಡಿದ್ದನ್ನು ಸೆಹ್ವಾಗ್ ಹೇಳಿದರು.

ರಾಹುಲ್ ದ್ರಾವಿಡ್ ಅವರ ಕೋಪ ಧೋನಿ ಮೇಲೆ ಪರಿಣಾಮ ಬೀರಿತು. ತದನಂತರದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡುವಾಗ ಹೆಚ್ಚಿನ ಶಾಟ್ ಗಳನ್ನು ಹೊಡೆಯುತ್ತಿರಿಲ್ಲ. ಏನಾಯಿತು ಎಂದು ಧೋನಿಯನ್ನು ಕೇಳಿದಾಗ, ದ್ರಾವಿಡ್ ಅವರಿಂದ ಮತ್ತೊಮ್ಮೆ ಬೈಯಿಸಿಕೊಳ್ಳಬಾರದು ಎಂದು ಹೇಳಿದರು. ನಂತರ ಪಂದ್ಯವನ್ನು ಮುಗಿಸಿದರು ಎಂದು ಸೆಹ್ವಾಗ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel