ಕ್ರಿಕೆಟ್

ಆಸೀಸ್ ಆಟಗಾರರು ಐಪಿಎಲ್ ಆಡಿದರೆ ಉತ್ತಮ: ರಿಕಿ ಪಾಂಟಿಂಗ್

Lingaraj Badiger

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಆಟಗಾರ ಮತ್ತು ಐಪಿಎಲ್ ಫ್ರಾಂಚೈಸಿ ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ಅವರು ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ನಡೆಯಲಿರುವ ಐಪಿಎಲ್ 2021ರಲ್ಲಿ ಆಸ್ಟ್ರೇಲಿಯಾದ ಆಟಗಾರರು ಆಡಬೇಕು ಎಂದು ಹೇಳಿದ್ದಾರೆ. ಇದು ಈ ವರ್ಷದ ಕೊನೆಯಲ್ಲಿ ಐಸಿಸಿ ಟಿ-20 ವಿಶ್ವಕಪ್ ಗಾಗಿ ಉತ್ತಮ ತಯಾರಿ ಆಗಲಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ ತಂಡವು ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಟಿ 20 ಸರಣಿಯಲ್ಲಿ ಸೋತಿದೆ ಎಂಬುದು ಗಮನಾರ್ಹ. ಈ ಪ್ರವಾಸಗಳಲ್ಲಿ ಪ್ಯಾಟ್ ಕಮಿನ್ಸ್, ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್ ವೆಲ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಜಾಯ್ ರಿಚರ್ಡ್ಸನ್, ಕೇನ್ ರಿಚರ್ಡ್ಸನ್ ಮತ್ತು ಡೇನಿಯಲ್ ಸ್ಯಾಮ್ಸ್ ಮುಂತಾದ ಆಟಗಾರರ ಅನುಪಸ್ಥಿತಿ ಕಂಡು ಬಂದಿತ್ತು. ಇದಕ್ಕೆ ಮಾಜಿ ನಾಯಕ ಈ ಸರಣಿಯ ಫಲಿತಾಂಶಗಳು ಆಸ್ಟ್ರೇಲಿಯಾ ಕ್ರಿಕೆಟ್ ನಲ್ಲಿನ ಕೊರತೆಯನ್ನು ಒತ್ತಿಹೇಳುತ್ತವೆ ಎಂದು ಹೇಳಿದರು.

ಟಿ 20 ವಿಶ್ವಕಪ್ ಮತ್ತು ಆ್ಯಶಸ್ ಸರಣಿಗೆ ಮುನ್ನ ಆಟಗಾರರು ಮತ್ತೆ ಕಾರ್ಯಪ್ರವೃತ್ತರಾಗುವುದು ಬಹಳ ಮುಖ್ಯ ಎಂದು ಪಾಂಟಿಂಗ್ ಹೇಳಿದರು. ಪಾಂಟಿಂಗ್ ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕ ಟಿಮ್ ಪೈನೆ ಜೊತೆಗಿನ ಸಂವಾದದಲ್ಲಿ ಈ ಮಾತುಗಳನ್ನು ಹೇಳಿದರು, 

ಕೆಲವು ಪ್ರಮುಖ ಆಟಗಾರರು ಮೂರು ಅಥವಾ ನಾಲ್ಕು ತಿಂಗಳು ಆಡಲಿಲ್ಲ. ಅವರು ವಿಶ್ವದ ಅತ್ಯುತ್ತಮ ಆಟಗಾರರ ವಿರುದ್ಧ ಉತ್ತಮ ಗುಣಮಟ್ಟದ ಕ್ರಿಕೆಟ್ ಆಡಲು ಮರಳುವ ವಿಶ್ವಾಸವಿದೆ. ವಿಶ್ವದ ಪ್ರಬಲ ದೇಶೀಯ ಟಿ-20 ಪಂದ್ಯಾವಳಿಯಾದ ಐಪಿಎಲ್ ನಲ್ಲಿ ಆಡುವುದು ಮುಂಬರುವ ಟಿ-20 ವಿಶ್ವಕಪ್ ಗಾಗಿ ಅವರ ಅತ್ಯುತ್ತಮ ಸಿದ್ಧತೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ, ಏಕೆಂದರೆ ಪರಿಸ್ಥಿತಿಗಳು ಅವರಿಗೆ ಸೂಕ್ತವಾಗಿರುತ್ತವೆ.

ಎಡ ಮೊಣಕೈ ಗಾಯದಿಂದಾಗಿ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಪ್ರವಾಸಗಳನ್ನು ತಪ್ಪಿಸಿಕೊಂಡಿದ್ದ ಸ್ಟೀವ್ ಸ್ಮಿತ್, ಟಿ 20 ವಿಶ್ವಕಪ್ ಗಿಂತ ಆಶಸ್ ಗೆ ಆದ್ಯತೆ ನೀಡುವುದಾಗಿ ಈಗಾಗಲೇ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದರು.

SCROLL FOR NEXT