ಇಂಗ್ಲೆಂಡ್ ಆಟಗಾರರ ಕೈ ಕುಲಕುತ್ತಿರುವ ವಿರಾಟ್ ಕೊಹ್ಲಿ 
ಕ್ರಿಕೆಟ್

ಇಂಗ್ಲೆಂಡ್- ಭಾರತ 2ನೇ ಟೆಸ್ಟ್: ನಿರಂತರ ವಾಗ್ವಾದ ಪಂದ್ಯ ಗೆಲ್ಲಲು ಹೆಚ್ಚಿನ ಪ್ರೇರಣೆ ನೀಡಿತು- ಕೊಹ್ಲಿ

ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ವೇಳೆ ಭಾರತ ಹಾಗೂ ಇಂಗ್ಲೆಂಡ್ ಆಟಗಾರರ ನಡುವೆ ನಡೆದ ನಿರಂತರ ಮಾತಿನ ಚಕಮಕಿ ಪಂದ್ಯ ಗೆಲ್ಲಲು ಹೆಚ್ಚುವರಿ ಪ್ರೇರಣೆಯಾಯಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ವೇಳೆ ಭಾರತ ಹಾಗೂ ಇಂಗ್ಲೆಂಡ್ ಆಟಗಾರರ ನಡುವೆ ನಡೆದ ನಿರಂತರ ಮಾತಿನ ಚಕಮಕಿ ಪಂದ್ಯ ಗೆಲ್ಲಲು ಹೆಚ್ಚುವರಿ ಪ್ರೇರಣೆಯಾಯಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

 ಐದನೇ ದಿನದಾಟದ ಅಂತ್ಯದಲ್ಲಿ ಉಭಯ ದೇಶಗಳ ಆಟಗಾರರ ನಡುವೆ ಮಾತಿನ ಚಕಮಕಿ ತೀವ್ರಗೊಂಡಿತ್ತು. ಇದರಿಂದಾಗಿ ವಿರಾಟ್ ಕೊಹ್ಲಿ ಪಡೆ ಸಹಜವಾಗಿಯೇ ಹೆಚ್ಚು ಪ್ರೇರಣೆಗೊಂಡು ದಿಗ್ವಿಜಯ ಸಾಧಿಸಿದೆ.

ಕಳೆದ ಬಾರಿ ಎಂಎಸ್ ಧೋನಿ ನಾಯಕತ್ವದಲ್ಲಿನ ಟೀಂ ಇಂಡಿಯಾ ಟೆಸ್ಟ್ ಗೆದ್ದಾಗ ನಾನು ಟೀಂ ಇಂಡಿಯಾದ ಭಾಗವಾಗಿದ್ದೆ. ಅದು  ವಿಶೇಷವಾಗಿರುವಂತೆಯೇ, ಇಶಾಂತ್ ಶರ್ಮಾ ಅದ್ಬುತ ಪ್ರದರ್ಶನ ನೀಡುವ ಮೂಲಕ ನಾಲ್ಕನೇ ದಿನದಂದು ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು ಎಂದು ಕೊಹ್ಲಿ ಹೇಳಿದ್ದಾರೆ.

ಸಿರಾಜ್ ಅಂತಹ ಆಟಗಾರರು ಮೊದಲ ಬಾರಿಗೆ ಲಾರ್ಡ್ಸ್ ಮೈದಾನದಲ್ಲಿ ಅದ್ಬುತ ಪ್ರದರ್ಶನ ತೋರಿದ್ದಾರೆ. ಮೈದಾನದಲ್ಲಿ ನಡೆದ ಮಾತಿನ ಚಕಮಕಿ, ನಿಜಕ್ಕೂ ಪಂದ್ಯ ಗೆಲ್ಲಲು ಹೆಚ್ಚುವರಿ ಪ್ರೇರಣೆಯಾಯಿತು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Lionel Messi: ಮೆಸ್ಸಿ ನೋಡೋಕೆ ಆಗಲಿಲ್ಲ ಎಂದು ರೊಚ್ಚಿಗೆದ್ದ ಫ್ಯಾನ್ಸ್, ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ದಾಂಧಲೆ-Video

'ಕಡತಗಳು ಟೇಬಲ್‌ನಿಂದ ಟೇಬಲ್‌ಗೆ ವರ್ಗವಾಗುತ್ತಿರುವಾಗಲೇ ಸುವರ್ಣ ಸಮಯ ಕಳೆದು ಹೋಗುತ್ತಿದೆ': HDKಗೆ ರವಿಕುಮಾರ್ ಟಾಂಗ್

ಬೆಂಗಳೂರು: ರಿಕ್ಕಿ ಕೇಜ್ ಮನೆಯಲ್ಲಿ ಡೆಲಿವರಿ ಬಾಯ್ ಕಳ್ಳತನ; ವಿಡಿಯೋ ಹಂಚಿಕೊಂಡ 'ಗ್ರ್ಯಾಮಿ' ಪುರಸ್ಕೃತ!

ಕೋಲ್ಕತ್ತಾದಲ್ಲಿ ಮೆಸ್ಸಿ ಮೇನಿಯಾ: ಫುಟ್ಬಾಲ್ ದಿಗ್ಗಜನಿಗೆ ಅದ್ಧೂರಿ ಸ್ವಾಗತ; 70 ಅಡಿ ಎತ್ತರದ ಪ್ರತಿಮೆ ಅನಾವರಣ!

H-1B ವೀಸಾಗೆ ಶುಲ್ಕ: ಕ್ಯಾಲಿಫೋರ್ನಿಯಾ ಸೇರಿ 20 ರಾಜ್ಯಗಳಿಂದ ಟ್ರಂಪ್ ಆಡಳಿತದ ವಿರುದ್ಧ ಕೇಸ್

SCROLL FOR NEXT