ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ವೆಡ್ಡಿಂಗ್ ಕಾರ್ಡ್ ಲೀಕ್; ಮದುವೆ, ರಿಸಪ್ಶನ್ ಯಾವಾಗ ಗೊತ್ತಾ?

ಕಳೆದ ಕೆಲವು ತಿಂಗಳಿಂದ ರಶ್ಮಿಕಾ ಮಂದಣ್ಣ ಹಾಗೂ ವಿಜಯೇ ದೇವರಕೊಂಡ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇತ್ತೀಚೆಗೆ, ಅವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು.
Rashmika Mandanna-Vijay Devarakonda
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ
Updated on

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಇದೀಗ ತಾರಾ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಕಳೆದ ಕೆಲವು ತಿಂಗಳಿಂದ ರಶ್ಮಿಕಾ ಮಂದಣ್ಣ ಹಾಗೂ ವಿಜಯೇ ದೇವರಕೊಂಡ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇತ್ತೀಚೆಗೆ, ಅವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಅತಿಥಿಗಳಿಗೆ ನೀಡಲಾದ ಅವರ ವಿವಾಹ ಆಮಂತ್ರ ಪತ್ರ ವೈರಲ್ ಆಗಿದ್ದು, ಎಲ್ಲವೂ ಅಧಿಕೃತವಾಗಿದೆ.

ವೈರಲ್ ಆದ ಆಮಂತ್ರಣ ಪತ್ರದಲ್ಲಿ ಫೆಬ್ರವರಿ 26 ರಂದು ಉದಯಪುರದ ಪ್ಯಾಲೇಸ್ ನಲ್ಲಿ ತಾರಾ ಜೋಡಿಯ ವಿವಾಹ ಸಮಾರಂಭ ನಡೆಯಲಿದ್ದು, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಬರೆಯಲಾಗಿದೆ.

ವೆಡ್ಡಿಂಗ್ ಕಾರ್ಡ್
ವೆಡ್ಡಿಂಗ್ ಕಾರ್ಡ್

ವಿವಾಹದ ನಂತರ ಮಾರ್ಚ್ 4 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ತಾಜ್ ಕೃಷ್ಣಾದಲ್ಲಿ ಸಂಜೆ 7 ಗಂಟೆಗೆ ಆರತಕ್ಷತೆ ನಡೆಯಲಿದೆ. ಆಹ್ವಾನದ ಮೂಲಕ, ವಿಜಯ್ ಮತ್ತು ರಶ್ಮಿಕಾ ತಮ್ಮ ಸ್ನೇಹಿತರು, ಹಿತೈಷಿಗಳು ಹಾಗೂ ಪ್ರೀತಿಪಾತ್ರರಿಗೆ ಆರತಕ್ಷತೆಯಲ್ಲಿ ಭಾಗವಹಿಸಿ ತಮ್ಮನ್ನು ಆಶೀರ್ವದಿಸುವಂತೆ ಕೇಳಿಕೊಂಡಿದ್ದಾರೆ.

Rashmika Mandanna-Vijay Devarakonda
ಶೀಘ್ರದಲ್ಲೇ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ವಿವಾಹ; ಗೆಳತಿಯರೊಂದಿಗೆ ಶ್ರೀಲಂಕಾದಲ್ಲಿ ಬ್ಯಾಚುಲರ್ ಪಾರ್ಟಿ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com