ಕ್ರಿಕೆಟ್

ಕೆ.ಎಲ್‌. ರಾಹುಲ್ ಹಾಗೆ ಮಾಡಿದ್ದರೆ... ಅದು ಅನೈತಿಕ: ನೆಸ್‌ ವಾಡಿಯಾ

Srinivasamurthy VN

ಮುಂಬೈ: ಪಂಜಾಬ್ ಕಿಂಗ್ಸ್ ತೊರೆದು ಕೆ. ಎಲ್‌ ರಾಹುಲ್‌ ಹರಾಜಿಗೆ ಹೋಗಬೇಕೆಂದು ಬಯಸಿದರೆ ಅದು ಅವರ ಇಷ್ಟ, ಆದರೆ, ನಾವು ಅವರನ್ನು ಬಿಡುಗಡೆ ಮಾಡುವ ಮೊದಲೇ ಹೊಸ ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸಿದ್ದರೆ, ಅದು ಅನೈತಿಕ ಕ್ರಮ ಎಂದು ತಂಡದ ಸಹ ಮಾಲೀಕ ನೆಸ್‌ ವಾಡಿಯಾ ಹೇಳಿದ್ದಾರೆ.

ಉಳಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ರಾಹುಲ್ ಲಕ್ನೋ ಫ್ರಾಂಚೈಸಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನೆಸ್ ವಾಡಿಯಾ ಈ ಹೇಳಿಕೆ ನೀಡಿದ್ದಾರೆ. ಎರಡು ಋತುಗಳಲ್ಲಿ ಪಂಜಾಬ್ ಕಿಂಗ್ಸ್‌ ತಂಡದ ನಾಯಕರಾಗಿದ್ದ ರಾಹುಲ್ ಅಮೋಘ ಬ್ಯಾಟಿಂಗ್ ಸಾಮರ್ಥ್ಯ ತೋರಿದರೂ, ತಂಡ ದಯನೀಯವಾಗಿ ವಿಫಲಗೊಂಡಿತ್ತು. ತಂಡ ಈ ಬಾರಿಯೂ ಅವರನ್ನೇ ಮುಂದುವರಿಸಲು ಬಯಸಿದ್ದರೂ ಅವರು ಮಾತ್ರ ಒಪ್ಪಿಕೊಂಡಿಲ್ಲ.

ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಸ್ಥಾನಕ್ಕೆ ಜಿಂಬಾಬ್ವೆ ಮಾಜಿ ನಾಯಕ ಆಂಡಿ ಫ್ಲವರ್ ರಾಜೀನಾಮೆ ನೀಡಿದ್ದಾರೆ. ಎರಡು ಋತುಗಳಲ್ಲಿ ಅವರು ಪಂಜಾಬ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು ಲೀಗ್‌ ನ ಎರಡು ಹೊಸ ಫ್ರಾಂಚೈಸಿಗಳಲ್ಲಿ ಒಂದನ್ನು ಅವರು ಸೇರುವ ಸಾಧ್ಯತೆಯಿದೆ. ತರಬೇತುದಾರರಾಗಿ ಉತ್ತಮ ದಾಖಲೆ ಹೊಂದಿರುವ ಫ್ಲವರ್, ಸುಮಾರು ಒಂದು ದಶಕದ ಕಾಲ ಇಂಗ್ಲೆಂಡ್ ರಾಷ್ಟ್ರೀಯ ತಂಡದೊಂದಿಗೆ ಕೆಲಸ ಮಾಡಿದ್ದಾರೆ.
 

SCROLL FOR NEXT