ಕ್ರಿಕೆಟ್

ಆಟದ ಮಧ್ಯೆ ಅಂಪೈರ್‌ ಗೆ ಕೊಲೆ ಬೆದರಿಕೆ; ಆಟಗಾರನಿಗೆ ಜೀವಮಾನ ನಿಷೇಧ!

Vishwanath S

ವೆಲ್ಲಿಂಗ್ಟನ್‌: ಕ್ರಿಕೆಟ್‌ನಲ್ಲಿ ಆಟಗಾರರ ನಡುವೆ ಭಿನ್ನಾಭಿಪ್ರಾಯ, ಕಲಹಗಳು ಸಹಜ. ಒಮ್ಮೊಮ್ಮೆ ಇವು ಹೊಡೆದಾಟದ ಮಟ್ಟಕ್ಕೆ ತಲುಪುತ್ತವೆ. 

ಆದರೆ, ಇಂತಹ ಘಟನೆಗಳು ನಡೆಯದಂತೆ ಅಂಪೈರ್‌ಗಳು ಮಧ್ಯ ಪ್ರವೇಶಿಸಿ ವಿವಾದ ದೊಡ್ಡದಾಗದಂತೆ ನೋಡಿಕೊಳ್ಳುತ್ತಾರೆ. ಅಂತಹ ಅಂಪೈರ್‌ ರನ್ನೇ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದರೆ.. ಆಟಗಾರರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಅವಕಾಶ ಇರಲಿದೆ. ಇಂತಹ ಕೆಲಸವನ್ನು ಪಾವರ್ಟಿ ಬೇ ಕ್ರಿಕೆಟ್ ಸಂಸ್ಥೆ ಮಾಡಿದೆ.

ಪಂದ್ಯದ ವೇಳೆ ಅಂಪೈರ್ ಮೇಲೆ ಕೈ ಮಾಡಿದ್ದಲ್ಲದೆ ಕೊಲೆಮಾಡುವುದಾಗಿ ತಿಮೋತಿ ವೀರ್ ಎಂಬ ಕ್ಲಬ್ ಕ್ರಿಕೆಟಿಗ ಮೈದಾನದಲ್ಲಿ ಎಚ್ಚರಿಕೆ ನೀಡಿದ್ದರು. ಡಿಸೆಂಬರ್ 4 ರಂದು ಗಿಸ್ಬೋರ್ನ್‌ನಲ್ಲಿ ಪಂದ್ಯ ನಡೆಯಿತು. ಪ್ರಕರಣದ ತನಿಖೆ ನಡೆಸುತ್ತಿರುವ ಪಾವರ್ಟಿ ಬೇ ಕ್ರಿಕೆಟ್ ಸಂಸ್ಥೆ ತಿಮೋತಿ ವಿರುದ್ಧ ಗಂಭೀರ ಕ್ರಮ ಕೈಗೊಂಡಿದೆ. ಕ್ರಿಕೆಟ್ ನಿಯಮಗಳ ಪ್ರಕಾರ ಅಂಪೈರ್‌ ವಿರುದ್ದ ದುರ್ವತನೆ ತೋರಿದ್ದಲ್ಲದೆ, ಸಾಯಿಸುವುದಾಗಿ ಎಚ್ಚರಿಕೆ ನೀಡಿ ನೀತಿ ಸಂಹಿತೆಯ ಲೆವೆಲ್-4 ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ.

ಈ ಕೃತ್ಯಗಳಿಗಾಗಿ ಇನ್ನು ಮುಂದೆ ಕ್ರಿಕೆಟ್ ಆಡದಂತೆ ತಿಮೋತಿಗೆ ಆಜೀವ ನಿಷೇಧ ವಿಧಿಸುವುದಾಗಿ ಸಂಸ್ಥೆ ಹೇಳಿದೆ ಆದರೆ, ತಿಮೋತಿ ಈ ಹಿಂದೆಯೂ ಇದೇ ರೀತಿ ದುರ್ವತನೆ ಪ್ರದರ್ಶಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದರು.. ಹಾಗಾಗಿ ಹೊಸ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಜೀವಿತಾವಧಿ ನಿಷೇಧ ವಿಧಿಸುವುದುದಾಗಿ ಪಾವರ್ಟಿ ಬೇ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಐಸಾಕ್ ಹ್ಯೂಸ್ ವಿವರಿಸಿದ್ದಾರೆ.

SCROLL FOR NEXT