ಕ್ರಿಕೆಟ್

ಕ್ರಿಕೆಟ್ ನಿವೃತ್ತಿ ಬಳಿಕ ರಾಜಕೀಯದತ್ತ 'ಭಜ್ಜಿ' ಚಿತ್ತ: ಯಾವುದೇ ಪಕ್ಷ ಸೇರುವ ಮುನ್ನ ಘೋಷಣೆ ಮಾಡುತ್ತೇನೆ ಎಂದ 'ಟರ್ಬೋನೇಟರ್' ಹರ್ಭಜನ್ ಸಿಂಗ್

Srinivasamurthy VN

ನವದೆಹಲಿ: ಎಲ್ಲ ರೀತಿಯ ಕ್ರಿಕೆಟ್ ಮಾದರಿಗಳಿಗೆ ನಿವೃತ್ತಿ ಘೋಷಣೆ ಮಾಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಇದೀಗ ರಾಜಕೀಯದತ್ತ ಚಿತ್ತ ನೆಟ್ಟಿದ್ದಾರೆ.

ಹೌದು.. ನಿನ್ನೆಯಷ್ಟೇ ಎಲ್ಲ ರೀತಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದ ಹರ್ಭಜನ್ ಸಿಂಗ್ ಇಂದು ತಮ್ಮ ರಾಜಕೀಯ ಭವಿಷ್ಯದ ಕುರಿತು ಪರೋಕ್ಷ ಮಾಹಿತಿ ನೀಡಿದ್ದಾರೆ. ಸುದ್ದಿಸಂಸ್ಥೆಯೊದಿಂಗೆ ಮಾತನಾಡಿರುವ ಹರ್ಭಜನ್ ಸಿಂಗ್, ತಮ್ಮ  ರಾಜಕೀಯದ ಮೂಲಕ ಪಂಜಾಬ್‌ಗೆ ಸೇವೆ ಸಲ್ಲಿಸುತ್ತೇನೆ. ಶೀಘ್ರದಲ್ಲೇ ರಾಜಕೀಯ ಪಕ್ಷದ ಆಯ್ಕೆ ಕುರಿತು ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆ, ಪಂಜಾಬ್‌ ಚುನಾವಣೆಗೆ ಮುಂಚಿತವಾಗಿ ಹರಭಜನ್‌ ಸಿಂಗ್ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಹರ್ಭಜನ್‌ ಸಿಂಗ್‌, ‘ನನಗೆ ಎಲ್ಲಾ ಪಕ್ಷದ ರಾಜಕಾರಣಿಗಳ ಸಂಪರ್ಕವಿದೆ. ಆದರೆ ನಾನಿನ್ನೂ ಯಾವ ಪಕ್ಷ ಸೇರಬೇಕು ಎಂದು ತೀರ್ಮಾನಿಸಿಲ್ಲ. ನಾನು ರಾಜಕೀಯದ ಮೂಲಕ ಪಂಜಾಬ್‌ ಜನರಿಗೆ ಸೇವೆ ಸಲ್ಲಿಸುತ್ತೇನೆ. ಆದರೆ, ಈ ವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. 

ಹರ್ಭಜನ್ ಸಿಂಗ್ ಅವರು ಎಲ್ಲ ಪ್ರಕಾರದ ಕ್ರಿಕೆಟ್‌ಗೆ ಶುಕ್ರವಾರ ನಿವೃತ್ತಿ ಘೋಷಿಸಿದ್ದು, ಹರ್ಭಜನ್ ಸಿಂಗ್ ಭಾರತ ತಂಡವನ್ನು 103 ಟೆಸ್ಟ್, 236 ಏಕದಿನ ಹಾಗೂ 28 ಟ್ವೆಂಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) 163 ಪಂದ್ಯಗಳನ್ನು ಆಡಿದ್ದಾರೆ.

SCROLL FOR NEXT