ಕ್ರಿಕೆಟ್

ವಿದೇಶದಲ್ಲಿ ಅತ್ಯಂತ ವೇಗದ 100 ವಿಕೆಟ್: ಭಾರತದ ಜಸ್ ಪ್ರೀತ್ ಬುಮ್ರಾ ದಾಖಲೆ

Srinivasamurthy VN

ಸೆಂಚೂರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಕದನದಲ್ಲಿ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ವಿಶ್ವ ದಾಖಲೆ ನಿರ್ಮಿಸಿದ್ದು, ವಿದೇಶದಲ್ಲಿ ಅತ್ಯಂತ ವೇಗದ 100 ವಿಕೆಟ್ ಪಡೆದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ವ್ಯಾನ್ ಡೆರ್ ದಸ್ಸೆನ್ ವಿಕೆಟ್‌ ಪಡೆಯುವ ಮೂಲಕ ಈ ಘನತೆ ಸಾಧಿಸಿದ್ದಾರೆ. ಈ ದಾಖಲೆಯನ್ನು ಬುಮ್ರಾ ಕೇವಲ 43 ಇನ್ನಿಂ ಗ್ಸ್‌ಗಳಲ್ಲಿ ತಮ್ಮ ಖಾತೆ ಸೇರುವಂತೆ ಮಾಡಿದ್ದಾರೆ. ಈವರೆಗೆ 25 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ ಒಟ್ಟು 105 ವಿಕೆಟ್ ಪಡೆದಿದ್ದಾರೆ.

ಆ ಮೂಲಕ ಭಾರತ ಪರ ವಿದೇಶದಲ್ಲಿ ಅತ್ಯಂತ ವೇಗವಾಗಿ 100 ಟೆಸ್ಟ್ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. 

ಆದರೆ, ಬುಮ್ರಾ ಪಡೆದ 105 ವಿಕೆಟ್‌ಗಳಲ್ಲಿ 101 ವಿಕೆಟ್‌ ಗಳನ್ನು ವಿದೇಶಗಳಲ್ಲಿ ಪಡೆದಿದ್ದಾರೆ ಎಂಬುದು ವಿಶೇಷ. ನಿರ್ಣಾಯಕ ಘಟ್ಟದಲ್ಲಿರು ಮೊದಲ ಟೆಸ್ಟ್ ನಲ್ಲಿ ವ್ಯಾನ್ ಡೆರ್ ದಸ್ಸೆನ್, ಕೇಶವ್ ಮಹಾರಾಜ್ ಅವರನ್ನು ಪೆವಿಲಿಯನ್ ಗೆ ಕಳುಹಿಸುವ ಮೂಲಕ ಬುಮ್ರಾ ಭಾರತದ ಜಯವನ್ನು ಆರು ವಿಕೆಟ್ ದೂರದಲ್ಲಿರಿಸಿದ್ದಾರೆ. ಬುಮ್ರಾ ತಮ್ಮ ಟೆಸ್ಟ್ ವೃತ್ತಿಜೀವನವನ್ನು 2018 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭಿಸಿದ್ದರು.

SCROLL FOR NEXT