ಕ್ರಿಕೆಟ್

ಈ ವರ್ಷವೂ ವಿಶ್ವಕಪ್ ಟೂರ್ನಿ ರದ್ದಾದರೆ, ಕ್ರಿಕೆಟ್ ಗೆ ಆಗುವ ದೊಡ್ಡ ನಷ್ಟವದು: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Srinivasamurthy VN

ಕೋಲ್ಕತಾ: ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷವೂ ಟಿ20 ವಿಶ್ವಕಪ್ ರದ್ದುಗೊಂಡರೆ ಅದು ಕ್ರಿಕೆಟ್ ಆಟಕ್ಕೆ ಆಗುವ ದೊಡ್ಡ ನಷ್ಟವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ಹೇಳಿದ್ದಾರೆ. 

ಕೋವಿಡ್ ಸಾಂಕ್ರಾಮಿಕದ ನಡುವೆಯೇ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕುರಿತು ಎದ್ದಿರುವ ಪ್ರಶ್ನೆಗಳ ಕುರಿತಂತೆ ಉತ್ತರಿಸಿರುವ ಸೌರವ್ ಗಂಗೂಲಿ, ಕಳೆದ ವರ್ಷವೂ ಕೂಡ ವಿಶ್ವಕಪ್ ಟೂರ್ನಿ ಕೋವಿಡ್ ಕಾರಣದಿಂದಾಗಿ ರದ್ದಾಗಿತ್ತು. ಈ ಬಾರಿಯೂ ಕೂಡ ಟೂರ್ನಿ ರದ್ದಾದರೆ ಅದು ಕ್ರಿಕೆಟ್ ಆಟಕ್ಕೆ ಆಗುವ ದೊಡ್ಡ  ನಷ್ಟವಾಗಲಿದೆ ಎಂದು ಹೇಳಿದರು.

ಯುಎಇನಲ್ಲಿ ಟಿ20 ವಿಶ್ವಕಪ್‌
ಇನ್ನು ಭಾರತದಲ್ಲಿ ಮುಂದಿನ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲು ಉದ್ದೇಶಿಸಲಾಗಿದ್ದ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟವನ್ನು ಕೋವಿಡ್‌ ರೋಗ ಹಿನ್ನೆಲೆಯಲ್ಲಿ ಮತ್ತು ಆಟಗಾರರ ಆರೋಗ್ಯ ಸುರಕ್ಷತೆಯ ಕಾರಣಗಳಿಗಾಗಿ ಯುಎಇಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ಐಸಿಸಿಗೆ ಕೂಡ ಮಾಹಿತಿ  ನೀಡಿದ್ದು, ಭಾರತದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಆದರೂ ಆಟಗಾರರ ಮತ್ತು ಅಭಿಮಾನಿಗಳ ಆರೋಗ್ಯ ಸುರಕ್ಷೆಯ ದೃಷ್ಟಿಯಿಂದ ಕೂಟವನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಕೂಟ ಯುಎಇಯಲ್ಲಿ ನಡೆಯಲಿದ್ದರೂ ಬಿಸಿಸಿಐ ಆತಿಥ್ಯ ವಹಿಸಲಿದೆ ಎಂದು ಗಂಗೂಲಿ  ಸ್ಪಷ್ಟಪಡಿಸಿದರು.

ಈಗಾಗಲೇ ಕೊರೊನಾದಿಂದಾಗಿ ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್‌ ಕೂಟವನ್ನು ಕೂಡ ಯುಎಇಗೆ ಸ್ಥಳಾಂತರಗೊಳಿಸಲಾಗಿದ್ದು ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ಎರಡನೇ ಹಂತ ನಡೆಯಲಿದೆ.

SCROLL FOR NEXT