ಹರ್ಲೀನ್ ಡಿಯೋಲ್ 
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧದ ಟಿ20ಯಲ್ಲಿ ಅದ್ಭುತ ಕ್ಯಾಚ್ ಮೂಲಕ ಭಾರತದ ಹರ್ಲೀನ್ ಡಿಯೋಲ್ ಮೋಡಿ: ವಿಡಿಯೋ ವೈರಲ್!

ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಹರ್ಲೀನ್ ಡಿಯೋಲ್ ಶುಕ್ರವಾರ ರಾತ್ರಿ ಮೈದಾನದಲ್ಲಿ ಮಹೋನ್ನತ ಪ್ರಯತ್ನದ ನಂತರ ಹಿಡಿದ ಕ್ಯಾಚ್ ಒಂದು ಸಾಕಷ್ಟು ವೈರಲ್ ಆಗಿದೆ. ಇಂಗ್ಲೆಂಡ್ ನ ಅಮಿ ಜೋನ್ಸ್ ಅವರನ್ನು ಔಟ್ ಮಾಡಲು ಈ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಅಲ್ಲದೆ ಈ ಮೂಲಕ ಇಂಗ್ಲೆಂಡ್ ಆಟಗಾರ್ತು ಅರ್ಧಶತಕ ಬಾರಿಸುವುದನ್ನು ತಪ್ಪಿಸಿದ್ದಾರೆ.

ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಹರ್ಲೀನ್ ಡಿಯೋಲ್ ಶುಕ್ರವಾರ ರಾತ್ರಿ ಮೈದಾನದಲ್ಲಿ ಮಹೋನ್ನತ ಪ್ರಯತ್ನದ ನಂತರ ಹಿಡಿದ ಕ್ಯಾಚ್ ಒಂದು ಸಾಕಷ್ಟು ವೈರಲ್ ಆಗಿದೆ. ಇಂಗ್ಲೆಂಡ್ ನ ಅಮಿ ಜೋನ್ಸ್ ಅವರನ್ನು ಔಟ್ ಮಾಡಲು ಈ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಅಲ್ಲದೆ ಈ ಮೂಲಕ ಇಂಗ್ಲೆಂಡ್ ಆಟಗಾರ್ತು ಅರ್ಧಶತಕ ಬಾರಿಸುವುದನ್ನು ತಪ್ಪಿಸಿದ್ದಾರೆ.

ಭಾರತ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಅನ್ನು ನಾರ್ಥಾಂಪ್ಟನ್ ನಲ್ಲಿ ಆಡಲಾಗುತ್ತಿತ್ತು. ಪಂದ್ಯದಲ್ಲಿ ಭಾರತ ಸೋಲು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 19 ನೇ ಓವರ್‌ನಲ್ಲಿ ಇಂಗ್ಲೆಂಡ್ ಈಗಾಗಲೇ 4 ವಿಕೆಟ್‌ಗೆ 166 ರನ್ ಗಳಿಸಿತ್ತು, ಅಮಿ ಜೋನ್ಸ್  26 ಎಸೆತಗಳಲ್ಲಿ 43 ರನ್ ಗಳಿಸಿ ಭಾರತದ ಶಿಖಾ ಪಾಂಡೆ ಅವರಿಗೆ ಶಾಕ್ ನೀಡಿದ್ದರು. ಆ ಸಮಯದಲ್ಲಿ ಹರ್ಲೀನ್ ಬೌಂಡರಿ ಲೈನ್ ಗೆ  ಅಡ್ಡವಾಗಿ ಹಾರಿ, ಚೆಂಡನ್ನು ಒಳಗೆ ಎಸೆದರು ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ತೆಗೆದುಕೊಂಡ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ. 

ಮೈದಾನದಲ್ಲಿ ಅಂತಹ ಅದ್ಭುತದ ಹೊರತಾಗಿಯೂ, ಇಂಗ್ಲೆಂಡ್ ವಿರುದ್ಧದ ಮಳೆಗಾಲದ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ 20 ಓವರ್‌ಗಳಲ್ಲಿ 177/7 ರನ್ ಗಳಿಸಿದ ನಂತರ, ಭಾರತವು 8.4 ಓವರ್‌ಗಳಲ್ಲಿ 54/3 ಅನ್ನು ತಲುಪಲು ಸಾಧ್ಯವಾಯಿತು.  ಆದರೆ ಹರ್ಲೀನ್  ಅವರ ಅದ್ಭುತ ಕ್ಯಾಚ್ ಭಾರತೀಯ ಅಭಿಮಾನಿಗಳಿಗೆ ಒಂದು ಅದ್ಭುತ ನೆನಪಾಗಿ ಉಳಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್