ಕ್ರಿಕೆಟ್

ತಮಿಳುನಾಡು: ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮವಾಗಿ ವಾಸವಿದ್ದ ಒಂಬತ್ತು ಇರಾನಿ ಪ್ರಜೆಗಳ ಬಂಧನ

Srinivasamurthy VN

ಚೆನ್ನೈ: ತಮಿಳುನಾಡಿನಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮವಾಗಿ ವಾಸವಿದ್ದ ಒಂಬತ್ತು ಇರಾನಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಚೆನ್ನೈ ಪೊಲೀಸರು, 'ಅಕ್ರಮವಾಗಿ ವಾಸವಾಗಿದ್ದ ಇರಾನ್‌ನ ಒಂಬತ್ತು ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ನಕಲಿ ಆಧಾರ್ ಕಾರ್ಡ್‌ ವಶಕ್ಕೆ ಪಡೆದಿದ್ದಾರೆ. ದರೋಡೆ ಪ್ರಕರಣದ ತನಿಖೆ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಮೂವರು  ಮಹಿಳೆಯರು ಸೇರಿದಂತೆ 9 ಇರಾನಿ ಪ್ರಜೆಗಳನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಚೆನ್ನೈನ ಕೋವಲಂನ ರೆಸಾರ್ಟ್‌ವೊಂದರಲ್ಲಿ ವಾಸವಾಗಿದ್ದರು ಎಂದು ಹೇಳಲಾಗಿದೆ.

ತಮ್ಮನ್ನು ಕೇಂದ್ರ ಪೊಲೀಸ್‌ ಪಡೆಯ ಅಧಿಕಾರಿಗಳು ಎಂದು ಹೇಳಿಕೊಂಡ ಮೂವರು ವ್ಯಕ್ತಿಗಳು ಮಾದಕ ದ್ರವ್ಯಗಳನ್ನು ಪರಿಶೀಲಿಸುವ ನೆಪವೊಡ್ಡಿ ಸೊಮಾಲಿಯಾದ ಪ್ರಜೆಯೊಬ್ಬರಿಂದ 2.83 ಲಕ್ಷ (3,800 ಡಾಲರ್)ರೂ ದರೋಡೆ ಮಾಡಿದ್ದರು. ಈ ಬಗ್ಗೆ ಸಂತ್ರಸ್ತ, ದೂರು ದಾಖಲಿಸಿದ್ದರು. ಇದರ ಬಗ್ಗೆ ತನಿಖೆ  ನಡೆಸಲು ವಿಶೇಷ ತಂಡವನ್ನು ರಚಿಸಲಾಗಿತ್ತು. ದರೋಡೆ ವೇಳೆ ಆರೋಪಿಗಳು ಬಳಸಿದ್ದ ಕಾರಿನ ಸಹಾಯದಿಂದ ಪೊಲೀಸರು ಅವರು ಅಡಗಿದ್ದ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ.

ಈ ವೇಳೆ ಅವರೊಂದಿಗೆ ಇನ್ನೂ ಆರು ಇರಾನಿ ಪ್ರಜೆಗಳು ರೆಸಾರ್ಟ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ವಾಸವಾಗಿರುವ ಬಗ್ಗೆ  ತಿಳಿದುಬಂದಿದೆ. ಕೂಡಲೇ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರ ಬಳಿ ನಕಲಿ ಆಧಾರ ಕಾರ್ಡ್‌ಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲದೆ ನಗರದಲ್ಲಿ ಇಂತಹ ಮತ್ತಷ್ಟು ಸಂಘಟನೆಗಳು ಇರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಸೂಕ್ತ ನಡೆಯಬೇಕಿದೆ ಎಂದು ಹೇಳಿದರು.

SCROLL FOR NEXT