ಕ್ರಿಕೆಟ್

ಕೆಳ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್: ಭಾರತದ ದೀಪಕ್ ಚಾಹರ್ ವಿಶ್ವದಾಖಲೆ

Srinivasamurthy VN

ಕೊಲಂಬೋ; ಸೋಲಿನ ಸುಳಿಯಲ್ಲಿದ್ದ ಭಾರತ ತಂಡಕ್ಕೆ ಆಸರೆಯಾಗಿ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವು ತಂದುಕೊಟ್ಟ ಭಾರತದ ದೀಪಕ್ ಚಹರ್ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಹೌದು.. ನಿನ್ನೆ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಅಲ್ಲದೆ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ಚಹರ್ ವಿಶ್ವ ದಾಖಲೆಯೊಂದನ್ನು ಕೂಡ ನಿರ್ಮಿಸಿದ್ದಾರೆ.

ಭಾರತ ತಂಡದ ಪರ ಏಕದಿನದಲ್ಲಿ ಎಂಟನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದು ಅರ್ಧಶತಕ ಬಾರಿಸಿದ ಹಿರಿಮೆಗೆ ದೀಪಕ್ ಚಾಹರ್ ಪಾತ್ರರಾಗಿದ್ದು, ಎಂಟನೇ ಕ್ರಮಾಂಕದಲ್ಲಿ ಅರ್ಧಶತಕ ಬಾರಿಸಿ ಗೆಲುವು ದೊರಕಿಸಿಕೊಟ್ಟ ಭಾರತದ ಮೊದಲ ಆಟಗಾರ ಎಂಬ ಖ್ಯಾತಿಗೂ ಚಹರ್ ಪಾತ್ರರಾಗಿದ್ದಾರೆ. 2017ರಲ್ಲಿ ಒಂಬತ್ತನೇ  ಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್ ಅಜೇಯ 53 ರನ್ ಗಳಿಸಿದ್ದರು.

ಶ್ರೀಲಂಕಾ ವಿರುದ್ಧ ಎಂಟನೇ ಕ್ರಮಾಂಕದಲ್ಲಿ ಅರ್ಧಶತಕ ಬಾರಿಸಿದ ಭಾರತದ ಎರಡನೇ ಆಟಗಾರ ಚಾಹರ್ ಆಗಿದ್ದಾರೆ. 2009ರಲ್ಲಿ ರವೀಂದ್ರ ಜಡೇಜ ಪದಾರ್ಪಣಾ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು.

ಒಟ್ಟಾರೆಯಾಗಿ ಭಾರತದ ಪರ ಜಡೇಜಾ (77 ರನ್, ನ್ಯೂಜಿಲೆಂಡ್ ವಿರುದ್ಧ) ಬಳಿಕ ದೀಪಕ್ ಚಾಹರ್ ಎಂಟನೇ ಕ್ರಮಾಂಕದಲ್ಲಿ ವೈಯಕ್ತಿಕ ಗರಿಷ್ಠ ರನ್ ಪೇರಿಸಿದ್ದಾರೆ.

ಏಕದಿನದಲ್ಲಿ ಎಂಟನೇ ಕ್ರಮಾಂಕದಲ್ಲಿ ಭಾರತದ ಪರ ಗರಿಷ್ಠ ರನ್‌ಗಳ ಜೊತೆಯಾಟ ನೀಡಿರುವುದರ ಸಾಲಿನಲ್ಲಿ ದೀಪಕ್ ಹಾಗೂ ಭುವನೇಶ್ವರ್ ಕುಮಾರ್ (ಅಜೇಯ 84 ರನ್) ಜೋಡಿಯು ಜಂಟಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

SCROLL FOR NEXT