ಟೀಮ್ ಇಂಡಿಯಾ ಆಟಗಾರರು 
ಕ್ರಿಕೆಟ್

ಶ್ರೀಲಂಕಾ ವಿರುದ್ಧದ ಪ್ರಥಮ ಟಿ-20 ಪಂದ್ಯದಲ್ಲಿ ಭಾರತಕ್ಕೆ 38 ರನ್ ಗಳ ಗೆಲುವು

ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಟಿ-20 ಪಂದ್ಯದಲ್ಲಿ ಭಾರತ 38 ರನ್ ಗಳಿಂದ ಗೆಲುವು ಸಾಧಿಸಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್‌ಗಳ ಸಾವಲಿನ ಮೊತ್ತ ಪೇರಿಸಿತು.

ಕೊಲಂಬೊ: ಇಲ್ಲಿನ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಟಿ-20 ಪಂದ್ಯದಲ್ಲಿ ಭಾರತ 38 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಅಂತರದಲ್ಲಿ ಟೀಂ ಇಂಡಿಯಾ ಮುನ್ನಡೆ ಕಾಯ್ದುಕೊಂಡಿದೆ

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಆರಂಭಿಕ ಆಟಗಾರ ಪೃಥ್ವಿ ಶಾ ಶೂನ್ಯಕ್ಕೆ ಔಟಾದರೆ, ಶಿಖರ್ ಧವನ್, 46, ಸಂಜು ಸ್ಯಾಮ್ ಸನ್ 27, ಸೂರ್ಯಕುಮಾರ್ ಯಾದವ್ 50, ಹಾರ್ದಿಕ್ ಪಾಂಡ್ಯ,10,  ಇಶಾನ್ ಕಿಶಾನ್ ಅಜೇಯ 20, ಕೃಣಾಲ್ ಪಾಂಡ್ಯ ಅಜೇಯ 3 ರನ್ ಗಳಿಸಿದರು.

ಟೀಮ್ ಇಂಡಿಯಾ ನೀಡಿದ 164 ರನ್ ಗಳ ಸವಾಲಿನ ಗುರಿ ಬೆನ್ನತ್ತಿದ್ದ ಶ್ರೀಲಂಕಾ ಕೊಂಚ ಹೋರಾಟ ಪ್ರದರ್ಶಿಸಿತಾದರೂ, ಭಾರತ ತಂಡದ ಬಲಿಷ್ಠ ಬೌಲಿಂಗ್‌ ದಾಳಿಯ ಎದುರು 18.3 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲ್‌ ಔಟ್‌ ಆಯಿತು.

ಟೀಮ್ ಇಂಡಿಯಾ ಪರ ಅದ್ಭುತ ಬೌಲಿಂಗ್‌ ದಾಳಿ ಸಂಘಟಿಸಿದ ಭುವನೇಶ್ವರ್‌ ಕುಮಾರ್‌, 4 ವಿಕೆಟ್‌ ಪಡೆದು ಭಾರತಕ್ಕೆ ಭರ್ಜರಿ ಜಯ ತಂದರು. ಅವರಿಗೆ ಉತ್ತಮ ಸಾಥ್ ನೀಡಿದ ದೀಪಕ್ ಚಹರ್‌ (24ಕ್ಕೆ 2) ಎರಡು ವಿಕೆಟ್‌ ಪಡೆದರು. ಡೆತ್‌ ಓವರ್‌ಗಳಲ್ಲಿ ಮಿಂಚಿದ ಭುವನೇಶ್ವರ್‌ ಕುಮಾರ್‌ಗೆ ಪಂದ್ಯಶ್ರೇಷ್ಠ ಗೌರವ ಲಭ್ಯವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi's I-Day speech: 'ನಮ್ಮ ಕನಸು, ಸಂಕಲ್ಪಗಳು ದೊಡ್ಡದಾಗಿರಬೇಕು; 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಿಯೇ ತೀರುತ್ತೇವೆ: ಪ್ರಧಾನಿ ಮೋದಿ-Video

80th Independence Day|ಯುವಜನತೆ ಸಾಮರ್ಥ್ಯವನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು: ಪ್ರಧಾನಿ ಮೋದಿ-Video

ಯುವ ಉದ್ಯೋಗ ಸೇತು, ವಿದ್ಯಾರ್ಥಿ ಸಹಾಯಹಸ್ತ, ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ CM ಡಿ ಕೆ ಶಿವಕುಮಾರ್ ಪ್ರಮುಖ ಘೋಷಣೆಗಳು-Video

'RSS ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ': B L ಸಂತೋಷ್

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ- ಸ್ವಾತಂತ್ರ್ಯ ದಿನದ ಹಿನ್ನೆಲೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮುರ್ಮು ಮಾತು