ಬುಮ್ರಾ 
ಕ್ರಿಕೆಟ್

ಡಬ್ಲ್ಯುಟಿಸಿ ಫೈನಲ್ ಪಂದ್ಯದ ವೇಳೆ ಬುಮ್ರಾ ಎಡವಟ್ಟು; ತಪ್ಪಾದ ಜೆರ್ಸಿ ತೊಟ್ಟು ಅಂಗಳಕ್ಕೆ ಎಂಟ್ರಿ!

ನ್ಯೂಜಿಲ್ಯಾಂಡ್ ಮತ್ತು ಟೀಂ ಇಂಡಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ವೇಳೆ ವೇಗಿ ಜಸ್ ಪ್ರೀತ್ ಬುಮ್ರಾ ಎಡವಟ್ಟು ಮಾಡಿಕೊಂಡಿದ್ದಾರೆ. 

ಸೌತಾಂಪ್ಟನ್: ನ್ಯೂಜಿಲ್ಯಾಂಡ್ ಮತ್ತು ಟೀಂ ಇಂಡಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ವೇಳೆ ವೇಗಿ ಜಸ್ ಪ್ರೀತ್ ಬುಮ್ರಾ ಎಡವಟ್ಟು ಮಾಡಿಕೊಂಡಿದ್ದಾರೆ. 

ಪಂದ್ಯದ 5ನೇ ದಿನ ಮಳೆಯಿಂದಾಗಿ ತಡವಾಗಿ ಪ್ರಾರಂಭವಾಯಿತು. ಆ ವೇಳೆ ಟೀಂ ಇಂಡಿಯಾ ವೇಗಿ ಬುಮ್ರಾ ತಪ್ಪಾದ ಜೆರ್ಸಿ ತೊಟ್ಟು ಅಂಗಳಕ್ಕೆ ಬಂದಿದ್ದಾರೆ. ಒಂದು ಓವರ್ ಬೌಲಿಂಗ್ ಮಾಡಿದ ಮೇಲೆ ತಾನು ತೊಟ್ಟಿದ್ದ ಜೆರ್ಸಿ ಕಂಡು ತಬ್ಬಿಬ್ಬಾದ ವೇಗಿ ನಂತರ ಡ್ರೆಸ್ ರೂಮಿಗೆ ಹೋಗಿ ಸರಿಯಾದ ಜೆರ್ಸಿ ತೊಟ್ಟು ಬಂದರು. 

ನ್ಯೂಜಿಲೆಂಡ್‌ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಬುಮ್ರಾ ಬೌಲಿಂಗ್ ಮಾಡಿದ್ದು ಒಂದು ವಿಕೆಟ್ ಪಡೆಯದೆ 57 ರನ್ ನೀಡಿದ್ದಾರೆ. 

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಆಯೋಜಿಸುವ ಯಾವುದೇ ಪಂದ್ಯಾವಳಿಯಲ್ಲೂ ದೇಶದ ಹೆಸರನ್ನು ಜೆರ್ಸಿಯ ಮಧ್ಯದಲ್ಲಿ ಮುದ್ರಿಸಲಾಗುತ್ತದೆ. ಹಾಗೆ ಪ್ರಾಯೋಜಕ ಕಂಪನಿಯ ಹೆಸರನ್ನು ತೋಳಗಳಲ್ಲಿ ಮುದ್ರಿಸಲಾಗುತ್ತದೆ.

ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 217 ರನ್ ಬಾರಿಸಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲ್ಯಾಂಡ್ 249 ರನ್ ಗಳಿಗೆ ಆಲೌಟ್ ಆಗಿದ್ದು 32 ರನ್ ಗಳ ಮುನ್ನಡೆ ಸಾಧಿಸಿತ್ತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 170 ರನ್ ಗಳಿಗೆ ಆಲೌಟ್ ಆಗಿದ್ದು ನ್ಯೂಜಿಲ್ಯಾಂಡ್ ಗೆ 139 ರನ್ ಗಳ ಗುರಿ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ಕರ್ನಾಟಕದ ಇತಿಹಾಸದಲ್ಲೇ ಮೊದಲು; ಪ್ರತಿಭಟಿಸುವುದಾದರೇ ಸದನದ ಬಾವಿಗೆ ಬನ್ನಿ: ವಿಪಕ್ಷ ಶಾಸಕರಿಗೆ ಸ್ಪೀಕರ್ ಆಹ್ವಾನ, BJP ಕಿಡಿ!

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ, ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ Video

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!