ಜೋಸ್ ಬಟ್ಲರ್ 
ಕ್ರಿಕೆಟ್

ಐಪಿಎಲ್: ಬಟ್ಲರ್‌ ಚೊಚ್ಚಲ ಟಿ20 ಶತಕ, ಹೈದರಾಬಾದ್ ವಿರುದ್ಧ ರಾಜಸ್ಥಾನಕ್ಕೆ 55 ರನ್‌ ಗೆಲುವು

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಚೊಚ್ಚಲ ಟಿ 20 ಶತಕಮತ್ತು ಮುಸ್ತಾಫಿಜುರ್ ರಹಮಾನ್ ಮತ್ತು ಕ್ರಿಸ್ ಮೋರಿಸ್ ಅವರ ಮೂರು ವಿಕೆಟ್ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ (ಆರ್ ಆರ್)  ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ 55 ರನ್‌ಗಳ ಗೆಲುವು ಸಾಧಿಸಿತು.

ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಚೊಚ್ಚಲ ಟಿ 20 ಶತಕಮತ್ತು ಮುಸ್ತಾಫಿಜುರ್ ರಹಮಾನ್ ಮತ್ತು ಕ್ರಿಸ್ ಮೋರಿಸ್ ಅವರ ಮೂರು ವಿಕೆಟ್ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ (ಆರ್ ಆರ್) ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ 55 ರನ್‌ಗಳ ಗೆಲುವು ಸಾಧಿಸಿತು.

221 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಎಂಟು ವಿಕೆಟ್‌ಗಳಿಗೆ 165 ರನ್ ಗಳಿಸುವುದಕ್ಕಷ್ತೇ ಸಾಧ್ಯವಾಗಿತ್ತು.

ಡೇವಿಡ್ ವಾರ್ನರ್ ಬದಲಿಗೆ ಕೇನ್ ವಿಲಿಯಮ್ಸನ್ ಅವರನ್ನು ಎಸ್‌ಆರ್‌ಹೆಚ್ ನಾಯಕನನ್ನಾಗಿ ಮಾಡಿದ್ದರೂ ಸಹ ಹೈದರಾಬ್ದ್ ಗೆ ಸೋಲು ತಪ್ಪಲಿಲ್ಲ,ಮನೀಶ್ ಪಾಂಡೆ (31) ಜಾನಿ ಬೈರ್‌ಸ್ಟೋವ್ (30) ಜೋಡಿ ಮೊದಲ ವಿಕೆಟ್ ಗೆ 57 ರನ್ ಗಳಿಸಿತು. ಆ ನಂತರ ವಿಜಯ್ ಶಂಕರ್ (8), ವಿಲಿಯಮ್ಸನ್ (20), ಮೊಹಮ್ಮದ್ ನಬಿ (17) ಹೈದರಾಬಾದ್ ಪರ ತುಸು ಉತ್ತಮ ಪ್ರದರ್ಶನ ನೀಡಿದ್ದರು.

ಇದಕ್ಕೂ ಮೊದಲು ಜೋಸ್ ಬಟ್ಲರ್ ತಮ್ಮ ಚೊಚ್ಚಲ ಟಿ 20 ಶತಕವನ್ನು ಗಳಿಸಿ ರಾಜಸ್ಥಾನ್ ರಾಯಲ್ಸ್ ಮೂರು ವಿಕೆಟ್ ನಷ್ಟಕ್ಕೆ 220 ರನ್ ಗಳಿಸಲು ನೆರವಾದರು.ಬಟ್ಲರ್ 64 ಎಸೆತಗಳಲ್ಲಿ 124 ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರ ಎರಡನೇ ವಿಕೆಟ್ ಪಾಲುದಾರಿಕೆಯಿಂದಾಗಿ ಆರ್.ಆರ್.  ಬೃಹತ್ ಮೊತ್ತ ಗಳಿಸಿತ್ತು. ಈ ಜೋಡಿ 88 ಎಸೆತಗಳಲ್ಲಿ 150 ರನ್ ಗಳಿಸಿಕೊಟ್ಟಿತ್ತು, ಸ್ಯಾಮ್ಸನ್ 33 ಎಸೆತಕ್ಕೆ 48 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌
ಆರ್‌ಆರ್: 20 ಓವರ್‌ಗಳಲ್ಲಿ 220/3 (ಜೋಸ್ ಬಟ್ಲರ್ 124, ಸಂಜು ಸ್ಯಾಮ್ಸನ್ 48; ರಶೀದ್ ಖಾನ್ 1/24)
ಎಸ್‌ಆರ್‌ಹೆಚ್: 20 ಓವರ್‌ಗಳಲ್ಲಿ 165/8 (ಮನೀಶ್ ಪಾಂಡೆ 31, ಜಾನಿ ಬೈರ್‌ಸ್ಟೋ 30; ಮುಸ್ತಾಫಿಜುರ್ ರಹಮಾನ್ 3/20, ಕ್ರಿಸ್ ಮೋರಿಸ್ 3/29)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT