ಟೀಂ ಇಂಡಿಯಾ 
ಕ್ರಿಕೆಟ್

T20 World Cup: ಟೀಂ ಇಂಡಿಯಾ ಸೋಲುವುದಕ್ಕೆ ಅಸಲಿ ಕಾರಣ ಏನು?

ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ ಮತ್ತೆ ಸೋಲಾಗಿದೆ. ಆರಂಭಿಕ ಎರಡೂ ಪಂದ್ಯ  ಸೋತಿರುವ ಕೊಹ್ಲಿ ಪಡೆ ಸಂಕಷ್ಟಕ್ಕೆ ಸಿಲುಕಿದೆ. 

ಬೆಂಗಳೂರು: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ ಮತ್ತೆ ಸೋಲಾಗಿದೆ. ಆರಂಭಿಕ ಎರಡೂ ಪಂದ್ಯ  ಸೋತಿರುವ ಕೊಹ್ಲಿ ಪಡೆ ಸಂಕಷ್ಟಕ್ಕೆ ಸಿಲುಕಿದೆ. 

ಇದರೊಂದಿಗೆ ಟೀಮ್ ಇಂಡಿಯಾ ಸೆಮಿ ಫೈನಲ್ ಹಂತ ತಲುಪುವ ಸಾಧ್ಯತೆಗಳು ಕಡಿಮೆಯಾಗಿದೆ.

ದುಬೈ ಕ್ರೀಡಾಂಗಣದಲ್ಲಿ ಪವಾಡ ನಡೆದರೆ ಮಾತ್ರ ಭಾರತ ಸೆಮಿ ಫೈನಲ್ ಗೆ ಹೋಗಬಹುದು. ಇಲ್ಲ ಅಂದರೆ ಕೊಹ್ಲಿ ಪಡೆ ಭಾರತಕ್ಕೆ ಖಾಲಿ ಕೈಯಲ್ಲಿ ಹಿಂದಿರಗಬೇಕಿದೆ. ಹಾಗಾದರೆ ನ್ಯೂಜಿಲೆಂಡ್ ನೊಂದಿಗೆ ಭಾರತದ ಸೋಲಿಗೆ ಅಸಲಿ ಕಾರಣಗಳೇನು? ಅದರ ಹಿಂದಿರುವ ಗುಟ್ಟಿನ ಮೇಲೆ ಬೆಳಕು ಚೆಲ್ಲಬೇಕಿದೆ.

ಭಾರತ ಟಿ-20 ವಿಶ್ವಕಪ್ ನಲ್ಲಿ ಭಾಗವಹಿಸುವುದಕ್ಕೂ ಮುನ್ನ ಹಲವು ವಿವಾದಗಳು ಇದ್ದವು. ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸುವುದು. ಹೊಸ ಕೋಚ್ ಹುಡುಕಾಟ, ಮೆಂಟರ್ ಆಗಿ ಧೋನಿ ಎಂಟ್ರಿ ಸೇರಿದಂತೆ ಅನೇಕ ವಿಷಯಗಳು ನ್ಯೂಜಿಲೆಂಡ್ ವಿರುದ್ಧದ ಸೋಲಿಗೆ ಕಾರಣಗಳಾಗಿವೆ. ಇನ್ನು ಟಾಸ್ ಸಹ ಪಂದ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಂಡಗಳೇ ಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಮುಂದಿನ ಪಂದ್ಯಗಳಲ್ಲಿ ಗೆದ್ದರೆ
ಭಾರತದ ಮುಂದಿನ ಪಂದ್ಯಗಳು ಆಫ್ಗಾನಿಸ್ತಾನ, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಆಡಲಿದೆ. ಈ ಮೂರು ತಂಡಗಳ ವಿರುದ್ಧ ಗೆದ್ದರೂ ಭಾರತ ಸೆಮೀಸ್ ಹಂತಕ್ಕೆ ಬರುವುದು ದೌಟ್.. ಈ ಮೂರು ಪಂದ್ಯಗಳಲ್ಲಿ ಭಾರತ ಉತ್ತಮ ರನ್ ರೇನ್ ನೊಂದಿಗೆ ಗೆಲ್ಲಬೇಕು.

ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ನ್ಯೂಜಿಲೆಂಡ್ ಅನ್ನು ಸೋಲಿಸಬೇಕು
ಕೇವಲ ಭಾರತ ತನ್ನ ಮುಂದಿನ ಮೂರು ಪಂದ್ಯಗಳನ್ನು ಗೆದ್ದರೆ ಸಾಲದು. ಬದಲಿಗೆ ನ್ಯೂಜಿಲೆಂಡ್ ತಾನು ಎದುರಿಸಲಿರುವ ಮುಂದಿನ 3 ಪಂದ್ಯಗಳಲ್ಲಿ ಕನಿಷ್ಠ 2ರಲ್ಲಿ ಸೋಲಬೇಕು. ಅಂದರೆ 2ನೇ ಸ್ಖಾನದಲ್ಲಿರುವ ಆಫ್ಘಾನಿಸ್ತಾನ ಮತ್ತು ಅಂತಿಮ ಸ್ಥಾನದಲ್ಲಿರುವ ಸ್ಕಾಟ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಸೋತರೆ ಆಗ ಭಾರತಕ್ಕೆ ಸೆಮೀಸ್ ಹಂತಕ್ಕೇರುವ ಸಾಧ್ಯತೆಗಳಿವೆ ಎಂದು ಕ್ರಿಕೆಟ್ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು